ಧರ್ಮಸ್ಥಳ ಪ್ರಕರಣ: ರಹಸ್ಯ ಭೇದಿಸಲು ಅಖಾಡಕ್ಕಿಳಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗ! ;ಪದ್ಮಲತಾ ಕೊಲೆ ಪ್ರಕರಣ ಸಹೋದರಿ ಯಿಂದ ಎಸ್ಐಟಿ ಕಚೇರಿಗೆ ದೂರು
ಮಂಗಳೂರು: ಪವಿತ್ರ ಯಾತ್ರಾ ಕೇಂದ್ರವಾದ ಧರ್ಮಸ್ಥಳದಲ್ಲಿ ಶವ ಹೂತ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಈಗಾಗಲೇ ಸರ್ಕಾರ ಈ ಪ್ರಕರಣ ಭೇದಿಸಲು ಎಸ್ಐಟಿ (SIT) ರಚನೆ ಮಾಡಿದ್ದು, ಎಸ್ಐಟಿ ತಂಡ ನಿರಂತರವಾಗಿ ತನಿಖೆ ಮಾಡುತ್ತಿದೆ. ಇದೀಗ ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ತನಿಖೆಗೆ ಇಳಿದಿದೆ. ಧರ್ಮಸ್ಥಳದ ಆಘಾತಕಾರಿ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ NHRC ತಂಡ ತನಿಖೆ ಮಾಡಲು ಮುಂದಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ ತಂಡ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಭೇಟಿ ನೀಡಲಿದ್ದು, ಪ್ರಕರಣದ ತನಿಖೆಯ ಪ್ರಗತಿಯನ್ನು ಪರಿಶೀಲಿಸಲಿದೆ. ಈ ಭೇಟಿಯು ಧರ್ಮಸ್ಥಳದ ಶವ ಹೂತ ಆರೋಪಗಳ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲು ಮಹತ್ವದ ಕ್ರಮವಾಗಿದೆ. 38 ವರ್ಷಗಳ ಹಿಂದೆ (1987) ನಡೆದ ಪದ್ಮಲತಾ ಅವರ ಅಸಹಜ ಸಾವಿನ ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು...
ಮತ್ತಷ್ಟು ಓದುDetails





























