ವಿಟ್ಲ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ 2020-2025 ರ ಅವಧಿ ಮುಗಿಯುವ ಹಿನ್ನಲೆಯಲ್ಲಿ ಕಳೆದೈದು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದ ಬ್ಯಾಂಕಿನ ಅಧ್ಯಕ್ಷ ಹಾಗೂ ನಿರ್ದೇಶಕರುಗಳನ್ನು ವಿಟ್ಲ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರದ ವತಿಯಿಂದ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಉತ್ತಮ ಸಾಧನೆ ಮಾಡಿದ ಆಡಳಿತ ಮಂಡಳಿಯನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ನಿರಂತರವಾಗಿ ಈ ಬ್ಯಾಂಕ್ ನ ಆಡಳಿತ ಬಿಜೆಪಿ ಪಕ್ಷದ ಬಳಿಯೇ ಇರಬೇಕು ಎಂದು ಹೇಳಿದರು.
ನಿರ್ದೇಶಕರುಗಳನ್ನು ಶಾಲು ಹಾಕಿ ಗೌರವಿಸಿದ ವಿಟ್ಲ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲ್ಯಾನ್ ನಿರ್ದೇಶಕರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನೆನಪಿಸಿ ಅಭಿನಂದಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಅವರು ಕಳೆದ 5 ವರ್ಷಗಳ ಸಾಧನೆಯನ್ನು ವಿವರಿಸಿ, ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು, ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ, ಹಿರಿಯ ಕಾರ್ಯಕರ್ತರಾದ ರಾಮದಾಸ್ ಶೆಣೈ, ಮೋಹನದಾಸ್ ಉಕ್ಕುಡ ಶುಭಹಾರೈಸಿದರು.
ನಿರ್ದೇಶಕರುಗಳಾದ ಸದಾನಂದ ಗೌಡ, ಶಿವಪ್ಪ ನಾಯ್ಕ್, ದಿನೇಶ್ ಕೋಡಿಬೈಲ್, ರಾಘವೇಂದ್ರ ಪೈ, ವಾಸು ಸಿಎಚ್, ಉದಯ ಕುಮಾರ್ ನಾಯ್ತೊಟ್ಟು, ಗೌರಿ ಎಸ್ ಎನ್ ಭಟ್, ಕವಿತಾ ಮುದೂರು, ಶಕ್ತಿ ಕೇಂದ್ರ ಪ್ರಮುಖ್ ಶಿಶಿರ್ ಗೌಡ, ಅಣ್ಣು ಪೂಜಾರಿ, ವೀರಪ್ಪ ಗೌಡ ಉಪಸ್ಥಿತರಿದ್ದರು.
ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಉದಯಕುಮಾರ್ ಆಲಂಗಾರು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಿಎಚ್ ವಂದಿಸಿದರು