ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ ನಳಿನೀ ಶೆಟ್ಟಿ ಸಹಿತ 9 ಮಂದಿ ಆಯ್ಕೆ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಡ್ನೂರು ಗ್ರಾಮದ ಪಂಜಿಗುಡ್ಡೆ ಈಶ್ವರ ಭಟ್, ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ ಸಾಮೆತ್ತಡ್ಕ ‘ಜನನಿ’ ನಿವಾಸಿ ನಳಿನಿ ಪಿ ಶೆಟ್ಟಿ,
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಮುರ ಗೌಡ ಸಮುದಾಯ ಭವನದ ಬಳಿಯ ದಿನೇಶ್ ಪಿ.ವಿ ಕುಲಾಲ್, ನಿವೃತ್ತ ಸರಕಾರಿ ಅಭಿಯೋಜಕಿ ನೆಹರುನಗರ ಧೂಮಾವತಿ ರಸ್ತೆ ಬಳಿಯ ನಿವಾಸಿ ಕೃಷ್ಣವೇಣಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಘಟಕದ ಮಾಜಿ ಅಧ್ಯಕ್ಷ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಮಹಾಬಲ ರೈ,
ನಿವೃತ್ತ ಬ್ಯಾಂಕ್ ಉದ್ಯೋಗಿ ಸಾಮೆತ್ತಡ್ಕ ನಿವಾಸಿ ಬಿ.ಈಶ್ವರ ನಾಯ್ಕ ಬೆಡೇಕರ್, ಜೆಸಿಬಿ ಉದ್ಯಮಿಯಾಗಿರುವ ನರಿಮೊಗರು ಗ್ರಾಮದ ಮುಗೇರಡ್ಕ ನಿವಾಸಿ ವಿನಯ ಕುಮಾರ್, ಪ್ರಗತಿಪರ ಕೃಷಿಕ ಕಲ್ಲಿಮಾರು ಆಳ್ವಾಸ್ ಕಂಪೌಂಡ್ ನಿವಾಸಿ ಸುಭಾಷ್ ರೈ ಬೆಳ್ಳಿಪ್ಪಾಡಿ ಮತ್ತು ದೇವಳದ ಪ್ರಧಾನ ಅರ್ಚಕರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.