ಪುತ್ತೂರು: ನಗರಸಭಾ ವ್ಯಾಪ್ತಿಯ ಕೆಮ್ಮಾಯಿ ಬಡಾವು 2 ನೇ ಅಡ್ಡರಸ್ತೆಯ ಇಂಟರ್ಲಾಕ್ ಹಾಗೂ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಇತ್ತೀಚಿಗೆ ನಡೆಯಿತು.
ನೂತನ ಇಂಟರ್ಲಾಕ್ ರಸ್ತೆಯ ಉದ್ಘಾಟನೆಯನ್ನು ಪುತ್ತೂರಿನ ಮಾಜಿ ಶಾಸಕರಾದ ಶ್ರೀಯುತ ಸಂಜೀವ ಮಠನ್ದೂರ್ ನೆರವೇರಿಸಿದರು.
ಹಾಗೂ ನೂತನ ಕಾಂಕ್ರೀಟ್ ರಸ್ತೆಯನ್ನು ಪುತ್ತೂರು ಪುರಸಭಾ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ನಾಯ್ಕ್ ಕೃಷ್ಣನಗರ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಪೂಜಾರಿ ಬಡಾವು, ನಗರ ಮಂಡಲ ಉಪಾಧ್ಯಕ್ಷರಾದ ಯುವರಾಜ್ ಪೆರಿಯತೋಡಿ, ಕಾರ್ಯದರ್ಶಿ ನಾಗೇಶ್ ಪ್ರಭು, 140ನೇ ಬೂತ್ ಅಧ್ಯಕ್ಷರಾದ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿ ರವಿ ಆಚಾರ್ಯ ನಗರ, ಉದಯ ಆಚಾರ್ಯ ಕೃಷ್ಣ ನಗರ, ಅಭಿಲಾಶ್ ಹೆಗ್ಡೆ , ಜಯಂತ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು