ವಿಟ್ಲ : ಅತಿಕಾರ ಬೈಲು ನಿವಾಸಿ ವಿಠಲ ಪೂಜಾರಿ (49) ತಮ್ಮ ಮನೆಯ ಹಟ್ಟಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ.ದಲ್ಲಿ ನಡೆದಿದೆ.
ವಿಠಲ ಪೂಜಾರಿಯವರು , ಯುವಕೆಸರಿ ಅತಿಕಾರ ಬೈಲು ಇದರ ಅಧ್ಯಕ್ಷರಾಗಿ, ನಾಟಕ ಕಲಾವಿದರಾಗಿ, ಬಿಲ್ಲವ ಸಂಘದಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಚಂದಳಿಕೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಊರಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿಕೊಂಡಿದ್ದರು.
ಮೃತರು ಪತ್ತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.