ಶ್ರೀರಾಮ ಗೆಳಯರ ಬಳಗ ಪುತ್ತಿಲ.ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಂಡೂರು ಇದರ ಜಂಟಿ ಆಶ್ರಯದಲ್ಲಿ ನರಿಮೊಗರು ಮೃತ್ಯುಂಜೇಶ್ವರ ದೇವಸ್ಥಾನದ ಸಭಾಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ತೃತೀಯ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಕಲ್ಪೋಕ್ತ ಪೂಜೆ ದಿನಾಂಕ 08.02. 2025 ರಂದು ನಡೆಯಿತು ಪೂಜೆ ಬಳಿಕ ಸುಧರ್ಮ ಸಭೆ. ಸಭೆಯಲ್ಲಿ ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು ನಂತರ ಗಣರಾಜ್ ಭಟ್ ರವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು ಸಭೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ತಾಲೂಕು ಸಮಿತಿಯ ಅಧ್ಯಕ್ಷ ಶ್ರೀ ಮಹೇಂದ್ರವರ್ಮ ಬಜತ್ತೂರು ಸಂದರ್ಭೋಚಿತವಾಗಿ ಮಾತಾಡಿದರು ವೇದಿಕೆಯಲ್ಲಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಅನಿಲ್ ಕಣ್ಣರನೂ ಜಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ತಾಲೂಕಿನ ಪ್ರಧಾನ ಕಾರ್ಯದರ್ಶಿ ಕೆದಂಬಾಡಿ ಮಠ ರವಿಕುಮಾರ್, ಶ್ರೀ ರಾಘವೇಂದ್ರ ಮಠ ಕಲ್ಲಮ ಮೊಕ್ತೇಸರ ರಾದ ಡಾ. ಸೀತಾರಾಮ್ ಭಟ್ ಕಲ್ಲಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸರ್ವೆ ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಪರ ಊರಿನ ಸಾವಿರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು