• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ. ಪುತ್ತೂರು ಕ್ಷೇತ್ರದ ಪಿಡಬ್ಲುಡಿ ರಸ್ತೆಗಳ ಅಭಿವೃದ್ಧಿ ವಿಚಾರ ಚರ್ಚೆ

ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ. ಪುತ್ತೂರು ಕ್ಷೇತ್ರದ ಪಿಡಬ್ಲುಡಿ ರಸ್ತೆಗಳ ಅಭಿವೃದ್ಧಿ ವಿಚಾರ ಚರ್ಚೆ

February 17, 2025
ಆರ್​​​ಸಿಬಿ ಅಭಿಮಾನಿಗಳಿಗೆ ಗುಡ್​​ ನ್ಯೂಸ್ ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದಲೇ?

ಆರ್​​​ಸಿಬಿ ಅಭಿಮಾನಿಗಳಿಗೆ ಗುಡ್​​ ನ್ಯೂಸ್ ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದಲೇ?

December 7, 2025
ಪುತ್ತೂರಿನಲ್ಲಿ ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭಕ್ಕೆ ಶಿಲಾನ್ಯಾಸ

ಪುತ್ತೂರಿನಲ್ಲಿ ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭಕ್ಕೆ ಶಿಲಾನ್ಯಾಸ

December 6, 2025
ದೇವಾಲಯದ ಹಣ ದೇವರಿಗೆ ಸೇರಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಬ್ಯಾಂಕ್‌ಗಳನ್ನು ಉಳಿಸಲು ಬಳಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ದೇವಾಲಯದ ಹಣ ದೇವರಿಗೆ ಸೇರಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಬ್ಯಾಂಕ್‌ಗಳನ್ನು ಉಳಿಸಲು ಬಳಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

December 6, 2025
ಗೋಹತ್ಯಾ ನಿಷೇಧ ಕಾನೂನನ್ನು ಸಡಿಲಗೊಳಿಸುವ ತಿದ್ದುಪಡಿ ವಿರುದ್ಧ ಕಿಡಿಗಾರಿದ ಅರುಣ್ ಕುಮಾರ್ ಪುತ್ತಿಲ

ಗೋಹತ್ಯಾ ನಿಷೇಧ ಕಾನೂನನ್ನು ಸಡಿಲಗೊಳಿಸುವ ತಿದ್ದುಪಡಿ ವಿರುದ್ಧ ಕಿಡಿಗಾರಿದ ಅರುಣ್ ಕುಮಾರ್ ಪುತ್ತಿಲ

December 6, 2025
ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

December 6, 2025
ಪುತ್ತೂರಿನ ಡಾ. ವರ್ಷ ಯು. ಎನ್. ಕೆಎಂಸಿ ಯಲ್ಲಿ ಸೀನಿಯರ್ ರೆಸಿಡೆನ್ಸಿ ಸರ್ಜನ್ ಆಗಿ ನೇಮಕ

ಪುತ್ತೂರಿನ ಡಾ. ವರ್ಷ ಯು. ಎನ್. ಕೆಎಂಸಿ ಯಲ್ಲಿ ಸೀನಿಯರ್ ರೆಸಿಡೆನ್ಸಿ ಸರ್ಜನ್ ಆಗಿ ನೇಮಕ

December 6, 2025
ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

December 5, 2025
ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

December 4, 2025
ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

December 4, 2025
ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

December 6, 2025
ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

December 3, 2025
ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ

ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ

December 3, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, December 8, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರಿನಲ್ಲಿ ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭಕ್ಕೆ ಶಿಲಾನ್ಯಾಸ

    ಪುತ್ತೂರಿನಲ್ಲಿ ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭಕ್ಕೆ ಶಿಲಾನ್ಯಾಸ

    ಗೋಹತ್ಯಾ ನಿಷೇಧ ಕಾನೂನನ್ನು ಸಡಿಲಗೊಳಿಸುವ ತಿದ್ದುಪಡಿ ವಿರುದ್ಧ ಕಿಡಿಗಾರಿದ ಅರುಣ್ ಕುಮಾರ್ ಪುತ್ತಿಲ

    ಗೋಹತ್ಯಾ ನಿಷೇಧ ಕಾನೂನನ್ನು ಸಡಿಲಗೊಳಿಸುವ ತಿದ್ದುಪಡಿ ವಿರುದ್ಧ ಕಿಡಿಗಾರಿದ ಅರುಣ್ ಕುಮಾರ್ ಪುತ್ತಿಲ

    ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

    ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

    ಪುತ್ತೂರಿನ ಡಾ. ವರ್ಷ ಯು. ಎನ್. ಕೆಎಂಸಿ ಯಲ್ಲಿ ಸೀನಿಯರ್ ರೆಸಿಡೆನ್ಸಿ ಸರ್ಜನ್ ಆಗಿ ನೇಮಕ

    ಪುತ್ತೂರಿನ ಡಾ. ವರ್ಷ ಯು. ಎನ್. ಕೆಎಂಸಿ ಯಲ್ಲಿ ಸೀನಿಯರ್ ರೆಸಿಡೆನ್ಸಿ ಸರ್ಜನ್ ಆಗಿ ನೇಮಕ

    ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

    ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

    ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

    ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

    ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

    ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

    ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

    ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

    ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

    ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ. ಪುತ್ತೂರು ಕ್ಷೇತ್ರದ ಪಿಡಬ್ಲುಡಿ ರಸ್ತೆಗಳ ಅಭಿವೃದ್ಧಿ ವಿಚಾರ ಚರ್ಚೆ

by ಪ್ರಜಾಧ್ವನಿ ನ್ಯೂಸ್
February 17, 2025
in ಪುತ್ತೂರು, ಪ್ರಾದೇಶಿಕ
0
ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ. ಪುತ್ತೂರು ಕ್ಷೇತ್ರದ ಪಿಡಬ್ಲುಡಿ ರಸ್ತೆಗಳ ಅಭಿವೃದ್ಧಿ ವಿಚಾರ ಚರ್ಚೆ
36
SHARES
102
VIEWS
ShareShareShare

ಪುತ್ತೂರು:ಲೋಕೋಪಯೋಗಿ ಸಚಿವ ಸತೀಸ್‌ ಜಾರಕಿಹೋಳಿ ಅವರು ಫೆ.16ರಂದು ಸಂಜೆ ಪುತ್ತೂರಿಗೆ ದಿಢೀರ್‌ ಭೇಟಿ ನೀಡಿದ್ದು, ಪ್ರವಾಸಿ ಮಂದಿರದಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಜೊತೆ ಪುತ್ತೂರಿನ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಿದ್ದು, ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ.

ಸಚಿವರನ್ನು ಶಾಸಕರಾದ ಅಶೋಕ್ ರೈಯವರು ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿ ಸಚಿವರ ಜೊತೆ ಪುತ್ತೂರು ಕ್ಷೇತ್ರದ ಪಿಡಬ್ಲುಡಿ ರಸ್ತೆಗಳ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.ಈಗಾಗಲೇ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 35 ಕೋಟಿ ಅನುದಾನವನ್ನು ನೀಡಿದ್ದೀರಿ ಮುಂದೆಯೂ ತಮ್ಮ ಮೂಲಕ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿರುವುದಾಗಿ ಶಾಸಕರು ಹೇಳಿದರು.

ಶಾಸಕರ ಮನವಿಗೆ ಸ್ಪಂಧಿಸಿದ ಸಚಿವರು, ಪುತ್ತೂರಿನಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕಿಯೆಗೆ ಚಾಲನೆ ನೀಡುವಂತೆ ಹಾಗೂ ,ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನೂತನ ರಸ್ತೆಗೆ 3 ಕೋಟಿ ಅನುದಾನ, ಪ್ರವಾಸಿ ಮಂದಿರಕ್ಕೆ ಹೆಚ್ಚುವರಿಯಾಗಿ 5 ಕೋಟಿ, ಆನೆಮಜಲಿನಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದಲ್ಲಿರುವ ಬಾರ್ ಅಸೋಸಿಯೇಶನ್‌ನ ಪೀಠೋಪಕರಣಗಳ ಖರೀದಿಗೆ ಅನುದಾನ ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ. ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಸೇತುವೆ ನಿರ್ಮಾಣಕ್ಕೂ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವರೊಡನೆ ಮಾತುಕತೆ ನಡೆಸಿದ ಶಾಶಕರು ಪುತ್ತೂರಿಗೆ ರಿಂಗ್ ರೋಡಿನ ಅವಶ್ಯಕತೆ ಇದೆ. ಬೆಳೆಯುತ್ತಿರುವ ನಗರ ಮತ್ತು ಮುಂದೆ ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲಿರುವ ಪುತ್ತೂರು ನಗರಕ್ಕೆ ರಿಂಗ್ ರಸ್ತೆಯ ಬೇಡಿಕೆ ಇದೆ ಇದಕ್ಕಾಗಿ ತಮ್ಮ ಅನುಮೋದನೆ ಬೇಕಿದೆ ಎಂದು ಹೇಳಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ರಿಂಗ್ ರೋಡು ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಬೇಕಿದ್ದು ತಕ್ಷಣದಿಂದಲೇ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆ ನೀಡುವಂತೆ ಸೂಚನೆ ನೀಡಿದರು.

ಪುತ್ತೂರಿನ ಪ್ರವಾಸಿ ಮಂದಿರಕ್ಕೆ ಈಗಾಗಲೇ 3 ಕೋಟಿ ಮಂಜೂರಾಗಿದ್ದು, ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಇನ್ನೂ 5 ಕೋಟಿ ಅವಶ್ಯಕತೆ ಇದ್ದು ಅನುದಾನ ನೀಡುವ ಕುರಿತು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದು ಸ್ಪಂದಿಸಿದ ಸಚಿವರು ಹೆಚ್ಚುವರಿಯಗಿ 5 ಕೋಟಿ ಮಂಜೂರು ಮಾಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥನದ ಬಳಿ ನಿರ್ಮಾಣವಾಗಲಿರುವ ನೂತನ ರಸ್ತೆಗೆ ಹೆಚ್ಚುವರಿಯಾಗಿ 3 ಕೋಟಿ ಅನುದಾನವನ್ನು ಸಚಿವರು ಮಂಜೂರು ಮಾಡಿದರು.

ಬೆಳ್ತಂಗಡಿಗೆ ತೆರಳುವ ದಾರಿ ಮಧ್ಯೆ ಬೊಳುವಾರಿನಲ್ಲಿ ಕಾರಿನಿಂದ ಇಳಿದ ಸಚಿವರು ಪುತ್ತೂರು ವಿಟ್ಲ ರಸ್ತೆಯನ್ನು ವೀಕ್ಷಣೆ ಮಾಡಿ ಹಾರಾಡಿಯ ರೈಲ್ವೇ ಸೇತುವೆಯ ನಿರ್ಮಾಣಕ್ಕೆ 7 ಕೋಟಿ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಸೂಚನೆಯನ್ನು ನೀಡಿದರು.

ನಿಮ್ಮ ಶಾಸಕರು ಬಹಳ ಸ್ಪೀಡ್ ಇದ್ದಾರೆ. ಪುತ್ತೂರು ಮೂಲಕ ಬೆಳ್ತಂಗಡಿಗೆ ಹೋಗುವ ವೇಳೆ ಶಾಸಕರಿಗೆ ಕರೆ ಮಾಡಿ ಇಲ್ಲಿಗೆ ಬಂದಿದ್ದೇನೆ. ಅಶೋಕ್ ರವರು ಬಹಳ ಉತ್ಸಾಹದಿಂದ ಕೆಲಸ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ಬಡವರ ಮೇಲೆ ಅಪಾರ ಕಾಳಜಿ ಇದೆ, ಕ್ಷೇತ್ರದ ಅಭಿವೃದ್ದಿಗೆ ಪಣ ತೊಟ್ಟಿದ್ದಾರೆ. ಅವರ ಮುಂದಾಲೋಚನೆಗಳು ನಿಮ್ಮ ಕ್ಷೇತ್ರವನ್ನು ಉತ್ತರೋತ್ತರ ಅಭಿವೃದ್ದಿಯತ್ತ ಕೊಂಡೊಯ್ಯಲಿದೆ ಇಲ್ಲಿನ ಜನ ಅವರನ್ನು ಎಂದಿಗೂ ಕೈ ಬಿಡಬೇಡಿ, ಇಂಥಹ ಒಬ್ಬ ಶಾಸಕರನ್ನು ಆಯ್ಕೆ ಮಾಡಿದ ನೀವು ಭಾಗ್ಯವಂತರು ಅವರನ್ನು ಎಂದಿಗೂ ಕೈಬಿಡಬೇಡಿ, ಶಾಸಕರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದೇನೆ, ಇನ್ನೂ ಕೊಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶಾಸಕರಾದವರು ಅನುದಾನ ಪಡೆದುಕೊಳ್ಳಬೆಕಾದರೆ ಸಚಿವರುಗಳ ಬಳಿ ಅಲೆದಾಡಬೇಕು ಆದರೆ ಲೋಕೋಪಯೋಗಿ ಸಚಿವರು ಭಿನ್ನ ಅವರು ಕೇಳದೆಯೇ ನಮ್ಮ ಕ್ಷೇತ್ರಕ್ಕೆ ಈಗಾಗಲೇ 35 ಕೋಟಿ ಅನುದಾನ ಕೊಟ್ಟಿದ್ದಾರೆ, ಇಂತಹ ಮಂತ್ರಿಗಳಿದ್ದಲ್ಲಿ ನಮ್ಮ ರಾಜ್ಯ ಖಂಡಿತವಾಗಿಯೂ ಉದ್ದಾರ ಆಗಬಹುದು. ಸಚಿವರು ನಮ್ಮ ಕ್ಷೇತ್ರಕ್ಕೆ ಬಂದಿರುವುದು ನಮ್ಮ ಪುಣ್ಯ ಎಂದು ಭಾವಿಸಿದ್ದೇನೆ. ಮುಂದಿನ ಮೂರೂವರೆ ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಸಂಪೂರ್ಣ ಸಹಕಾರ ಬೇಕು ಎಂದು ಸಚಿವರಲ್ಲಿ ಶಾಸಕ ಅಶೋಕ್ ರೈ ವಿನಂತಿಸಿದರು.

HPR Institute Of Nursing And Paramedical Sciences & Friends Beke

ಜಾಹೀರಾತು

ಪುತ್ತೂರಿನಿಂದ ಬಂಟ್ವಾಳ ರಸ್ತೆಯ ಮೂಲಕ ಮೂಡಬಿದ್ರೆಗೆ ಹೋಗುವವರಿದ್ದ ಸಚಿವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ರಸ್ತೆಗಳು ಕೆಟ್ಟು ಹೋಗಿರುವ ಬಗ್ಗೆ ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂರವರು ಸಚಿವರ ಗಮನಕ್ಕೆ ತಂದರು. ಆ ವೇಳೆ ಸಚಿವರು ತಾವು ಕೆಟ್ಟು ಹೋದ ರಸ್ತೆಯನ್ನು ವೀಕ್ಷಣೆ ಮಾಡಲು ಅದೇ ರಸ್ತೆಯ ಮೂಲಕ ತೆರಳಬೇಕು ಎಂದು ಹೇಳಿ ಬಳಿಕ ಉಪ್ಪಿನಂಗಡಿಯಾಗಿ ಬೆಳ್ತಂಗಡಿಗೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಸನ್ನ ಕುಮಾರ್ ಸಿಝ್ಲರ್, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಯುವಕ ಕಾಂಗ್ರೆಸ್ ಅಧ್ಯಕ್ಷರಾದ ಅಖಿಲ್ ಕಲ್ಲಾರೆ, ಪಕ್ಷದ ಮುಖಂಡರಾದ ಫಾರೂಕ್ ಬಾಯಬ್ಬೆ, ಯುವ ಕಾಂಗ್ರೆಸ್ ನ ಪ್ರಸಾದ್ ಪಾಣಾಜೆ, ಫಾರೂಕ್ ಪೆರ್ನ, ಸಿಯಾನ್ ದರ್ಬೆ, ಅರ್ಷದ್ ದರ್ಬೆ, ಮಹಾಲಿಂಗ ನಾಯ್ಕ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ ರೈ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

SendShare14Share
Previous Post

ಎಸ್​ಯುವಿ ಕಾರು ವರದಕ್ಷಿಣೆ ಕೊಟ್ಟಿಲ್ಲವೆಂದು ಸೊಸೆಗೆ ಎಚ್​ಐವಿ ಸೋಂಕಿತ ಸೂಜಿ ಚುಚ್ಚಿದ ಅತ್ತೆ-ಮಾವ

Next Post

ಮಂಗಳೂರು : ದಯಾ ಕುಕ್ಕಾಜೆ ಮಡಿಲಿಗೆ ರಾಷ್ಟ್ರ ಪ್ರಶಸ್ತಿ.

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಮಂಗಳೂರು : ದಯಾ ಕುಕ್ಕಾಜೆ ಮಡಿಲಿಗೆ ರಾಷ್ಟ್ರ ಪ್ರಶಸ್ತಿ.

ಮಂಗಳೂರು : ದಯಾ ಕುಕ್ಕಾಜೆ ಮಡಿಲಿಗೆ ರಾಷ್ಟ್ರ ಪ್ರಶಸ್ತಿ.

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..