ಪುತ್ತೂರು: ಕೆಮ್ಮಾಯಿ ಬೂತ್ ಸಂಖ್ಯೆ 140 ರ ವಿಷ್ಣು ನಗರ ರಸ್ತೆಗೆ ಇಂಟರ್ ಲಾಕ್ ಅಳವಡಿಸುವ ಬಗ್ಗೆ ನಗರಸಭೆಯ ಕಮಿಷನರ್ ಮಧು ಮನೋಹರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಪೂಜಾರಿ ಬಡಾವು ಮತ್ತು ನಗರಸಭೆ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ ಇವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಸದ್ರಿ ರಸ್ತೆಗೆ ವ್ಯವಸ್ಥಿತ ರೀತಿಯಲ್ಲಿ ಇಂಟರ್ ಲಾಕ್ ಅಳವಡಿಸಿ, ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೊಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೆಮ್ಮಾಯಿ ಕೃಷ್ಣನಗರ 140 ಬೂತಿನ ಅಧ್ಯಕ್ಷರಾದ ದಯಾನಂದ ಗೌಡ ಕೆಮ್ಮಾಯಿ ಚಿಕ್ಕಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಸರಾದ ಸ್ಮಿತಾ ನಾಯ್ಕ್ ಸದಸ್ಯರಾದ ತಿಮ್ಮಪ್ಪ ಪೂಜಾರಿ .ರಾಘವೇಂದ್ರ ಗೌಡ ಹಾಗೂ ಸ್ಥಳೀಯರಾದ ತೋಮಸ್ ಪೆರ್ನಾಡಿಸ್. ಸವಿತಾ ಆಚಾರ್ಯ. ಸಂದ್ಯಾ ಇವರುಗಳು ಉಪಸ್ಥಿತರಿದ್ದರು.