ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಆಶೀರ್ವಾದಗಳಿಂದ, ಪದ್ಮವಿಭೂಷಣ ರಾಜರ್ಷಿ ಡಾ। ವೀರೇಂದ್ರ ಹೆಗ್ಗಡೆಯವರು (ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ) ಇವರ ಶುಭಾಶೀರ್ವಾದಗಳೊಂದಿಗೆ, ಸನ್ಮಾನ್ಯ ವಿನಯ ಕುಮಾರ್ ಸೊರಕೆ ಮಾಜಿ ನಗರಾಭಿವೃದ್ಧಿ ಸಚಿವರು ಕರ್ನಾಟಕ ಸರಕಾರ ಇವರ ಗೌರವಾಧ್ಯಕ್ಷತೆಯಲ್ಲಿ, ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೆ. ಎಸ್. ಇವರ ಗೌರವ ಸಂಚಾಲಕತ್ವದಲ್ಲಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಮಾಜಿ ಶಾಸಕರು ಇವರ ಮಾರ್ಗದರ್ಶನ ದಲ್ಲಿ ಊರ ಪರವೂರ ಸರ್ವ ಕಂಬಳಾಭಿಮಾನಿಗಳ ಪ್ರೋತ್ಸಾಹದೊಂದಿಗೆ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳವು ದಿನಾಂಕ: 01.03.2025ನೇ ಶನಿವಾರ ಬೆಳಿಗ್ಗೆ 10.15ರ ಶುಭಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದೈವಾಂಶ ಸಂಭೂತರು. ಪುಣ್ಯ ಪುರುಷರು, ಆರಾಧ್ಯ ಮೂರ್ತಿಗಳು ಆಗಿರುವಂತಹ ಕೋಟಿ ಚೆನ್ನಯರ ಹೆಸರಿನ ಜೋಡು ಕರೆಯಲ್ಲಿ ಸಂಪ್ರದಾಯಬದ್ಧವಾಗಿ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ, ಶಾಸ್ತೋಕ್ತವಾಗಿ ಉದ್ಘಾಟನೆಗೊಳ್ಳಲಿದೆ.
ಕರಾವಳಿ ಕರ್ನಾಟಕದ ರೈತಾಪಿ ವರ್ಗದ ಅವಿಭಾಜ್ಯ ಅಂಗ ಕಂಬಳ. ಸುಮಾರು 800 ವರ್ಷಗಳಿಂದಲೂ ಕಂಬಳ ಎನ್ನುವ ಕೋಣಗಳ ಓಟದ ಕ್ರೀಡೆಯು ಮೂಲತಃ ಒಂದು ಜಾನಪದ ಕಲೆ. ಹಳ್ಳಿಯ ಭೂ ಮಾಲೀಕ ಮತ್ತು ದುಡಿಯುವ ರೈತರ ನಡುವಿನ ಸಾಂಸ್ಕೃತಿಕ ಬೆಸುಗೆಯಲ್ಲಿ ಸಾಮರಸ್ಯಕ್ಕೆ ರಾಜಾಶ್ರಯ ನೀಡಿ ಪ್ರೋತ್ಸಾಹಿಸಿದ ರಾಜ ಮನೆತನ ನಮ್ಮ ಜಿಲ್ಲೆಯಲ್ಲಿದೆ. ದೇವರ ಕಂಬಳ, ರಾಜರ ಕಂಬಳ, ಗುತ್ತು, ಭಾವಗಳ ಕಂಬಳ ನವೀನ ರೂಪ ಪಡೆದು ಸಾರ್ವಜನಿಕ ಕಂಬಳವಾಗಿ ರೂಪುಗೊಳ್ಳುತ್ತಿದೆ.
ಅಂದು (1993) ಕೀರ್ತಿಶೇಷ ಜಯಂತ ರೈಯವರು ಅಂದಿನ ಶಾಸಕರಾದ ಮಾಜಿ ನಗರಾಭಿವೃದ್ಧಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಮತ್ತು ಸರ್ವ ಕಂಬಳಾಭಿಮಾನಿಗಳ ಸಹಕಾರ ಪಡೆದು ಪ್ರಾರಂಭಿಸಿದ ಈ ಕಂಬಳವು 31 ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಎನ್ನುವುದು ಸಂತೋಷದ ವಿಚಾರ. ಈ ಮೊದಲು ಕೂಡ ದೇವರಮಾರು ಗದ್ದೆಯಲ್ಲಿ ಕಂಬಳ ನಡೆಯುತ್ತಿತ್ತು ಎಂಬುದನ್ನು ಇತಿಹಾಸದಿಂದ ಮತ್ತು ಹಿರಿಯರಿಂದ ತಿಳಿದುಕೊಂಡಿದ್ದೇವೆ.
ಕಂಬಳದ ಸಭಾ ಕಾರ್ಯಕ್ರಮವು ಸಂಜೆ ಗಂಟೆ 6.00ರಿಂದ ಕೀರ್ತಿಶೇಷ ಜಯಂತ ರೈ ವೇದಿಕೆಯಲ್ಲಿ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ವಹಿಸಲಿರುವರು. ಕಾರ್ಯಕ್ರಮದಲ್ಲಿ ಗೌರವಾನ್ವಿತರಾದ ಯು. ಟಿ. ಖಾದರ್ ವಿಧಾನ ಸಭಾಧ್ಯಕ್ಷರು ಕರ್ನಾಟಕ ಸರಕಾರ ಇವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಡಾ| ಪರಮೇಶ್ವರ್ ಗೃಹ ಸಚಿವರು. ಶ್ರೀ ದಿನೇಶ್ ಗುಂಡೂರಾವ್ ಜಿಲ್ಲಾ ಉಸ್ತುವಾರಿ ಸಚಿವರು ದಕ್ಷಿಣಕನ್ನಡ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು. ಶ್ರೀ ಸಂತೋಷ್ ಲಾಡ್ ಕಾರ್ಮಿಕ ಸಚಿವರು, ಕರ್ನಾಟಕ ಸರಕಾರ. ಕ್ಯಾ। ಬ್ರಿಜೇಶ್ ಚೌಟ ಸಂಸದರು ಮಂಗಳೂರು, ಶ್ರೀ ಪ್ರಕಾಶ್ ಶೆಟ್ಟಿ ಚೇರ್‌ಮನ್ ಎಂ.ಆರ್.ಜಿ. ಗ್ರೂಪ್ಸ್ ಬೆಂಗಳೂರು, ಶ್ರೀ ರವಿ ಗಾಣಿಗ ಶಾಸಕರು ಮಂಡ್ಯ (ವಿಧಾನ ಪರಿಷತ್) ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಶ್ರೀ ಮಂಜುನಾಥ್ ಭಂಡಾರಿ ಸದಸ್ಯರು ವಿಧಾನ ಪರಿಷತ್, ಶ್ರೀ ರಾಜೇಶ್ ನಾಯ್ಡ್ ಉಳಿಪಾಡಿಗುತ್ತು, ಶಾಸಕರು ಬಂಟ್ವಾಳ, ಶ್ರೀ ಬಿ. ‘ರಮಾನಾಥ ರೈ ಮಾಜಿ ಸಚಿವರು, ಶ್ರೀ ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ, ಶ್ರೀ ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು ಮಂಗಳೂರು, ಕುಮಾರಿ ಭಾಗೀರಥಿ ಮುರುಳ್ಯ ಶಾಸಕರು ಸುಳ್ಯ, ಶ್ರೀ ಐವನ್ ಡಿಸೋಜ. ಸದಸ್ಯರು ವಿಧಾನ ಪರಿಷತ್, ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯರು, ಶ್ರೀ ಅಭಯಚಂದ್ರ ಜೈನ್ ಮಾಜಿ ಸಚಿವರು ಮುಂತಾದ ಭಾಗವಹಿಸಲಿರುವರು. ಗಣ್ಯಾತಿಗಣ್ಯರು
ಸಭಾ ಕಾರ್ಯಕ್ರಮದಲ್ಲಿ ಅನೇಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನವಿದ್ದು ಡಾ| ಅಗರಿ ನವೀನ್ ಭಂಡಾರಿ ಮಾಜಿ ನಿರ್ದೇಶಕರು, ಆರ್.ಬಿ.ಐ. ಉತ್ತರ ವಲಯ, ಶ್ರೀ ಸುರೇಶ್ ಭಟ್ ಬಲ್ನಾಡು. ಕೃಷಿ ತಜ್ಞರು. ರೆ| ಫಾ| ವಿಜಯ ಹಾರ್ವಿನ್ (ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರ). ಶ್ರೀ ಹರಿಪ್ರಸಾದ್ ರೈ ಸಂಸ್ಥಾಪಕರು ಹೆಚ್. ಪಿ.ಆರ್. ನರ್ಸಿಂಗ್ ಕಾಲೇಜು. ಸಾಲೆತ್ತೂರು ಪಂಜರಕೋಡಿ ಮಹಮ್ಮದ್ ಕುಂಞ ‘ (ಕಂಬಳ ಕ್ಷೇತ್ರ), ಬಾಳೆಪುಣಿ ಸಂಕ ಇದು ಕುಂಜಿ ಬ್ಯಾರಿ (ಕಂಬಳ ಕ್ಷೇತ್ರ) ಶ್ರೀ ವಿನ್ಸೆಂಟ್ ಫೆರ್ನಾಂಡಿಸ್ ಸನ್ಮಾನ ನಡೆಯಲಿದೆ.
ವಿನೂತನವಾಗಿ ಆಧುನಿಕ
ತಂತ್ರಜ್ಞಾನದೊಂದಿಗೆ ‘ಲೇಸರ್ ಫಿನಿಶಿಂಗ್’ ವ್ಯವಸ್ಥೆ ಶ್ರೀಘ್ರು ತೀರ್ಪು ನೀಡುವುದಕ್ಕಾಗಿ ಮಾಡಲಾಗುತ್ತಿದೆ.
ಈ ಬಾರಿ ವಿಶೇಷವಾಗಿ “ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ” ನಡೆಯಲಿದೆ.
ಕಂಬಳಕ್ಕೆ ಆರು ವಿಭಾಗಗಳ ಕೋಣಗಳು ಭಾಗವಹಿಸಲಿದ್ದು, ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ. ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿದ್ದು, ಹಿರಿಯ ವಿಭಾಗದ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ (16ಗ್ರಾಂ) ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ 1 ಪವನ್ ಹಾಗೂ ದ್ವಿತೀಯ ½ ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ಅಲ್ಲದೆ ವಿಜೇತ ಕೋಣಗಳ ಮಾಲಿಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿಚೆನ್ನಯ ಟ್ರೋಫಿ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಬ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿರುತ್ತೇವೆ. ಅಲ್ಲದೇ ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ. ಉತ್ತಮ ಕರೆ ನಿರ್ಮಾಣ, ಕರೆಗೆ ಶುದ್ಧ ನೀರಿನ ವ್ಯವಸ್ಥೆ. ಸುಸಜ್ಜಿತ ಸ್ಟಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ ವರ್ಷಕ್ಕೊಂದು ಹೊಸತನದ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿದ್ದು, ಜಾತಿ, ಧರ್ಮಗಳ ಬೇಧವಿಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ಏಕೈಕ ಕ್ರೀಡೆ ಪುತ್ತೂರು ಕಂಬಳ.
ಕಂಬಳವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸಿ ದುಡಿಯುವ ನೂರಾರು ಕೆಂಪು ಮುಂಡಾಸಿನ ಸ್ವಯಂ ಸೇವಕರ ತಂಡವಿದ್ದು. ಕೋಟಿ-ಚೆನ್ನಯ ಜೋಡುಕರೆ ಸಮಿತಿಯ ಸದಸ್ಯರ ಅಪಾರ ಸೇವೆಯು ಕಂಬಳ ನಡೆಯಲು ಸಹಕಾರಿಯಾಗಿದೆ. ಅಲ್ಲದೇ ತೀರ್ಪುಗಾರ ಮಂಡಳಿಯವರ ಅಪಾರ ಅನುಭವ. ಅನೇಕ ಮಾರ್ಗದರ್ಶಕರ ಹಿತನುಡಿ, ಕಂಬಳದ ಅಭಿಮಾನಿಗಳ ಸರ್ವ ಪ್ರೋತ್ಸಾಹದೊಂದಿಗೆ ಕಂಬಳ ನಡೆದುಕೊಂಡು ಬರುತ್ತಿದೆ.