ಪುತ್ತೂರು : ಅವಿಭಜಿತ ದ.ಕ. ಜಿಲ್ಲೆಯಲ್ಲಿ 1987 ರಲ್ಲಿ ದ.ಕ ಜಿಲ್ಲಾ ಮಹಿಳಾ ಒಕ್ಕೂಟ ಹಾಗೂ ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟಗಳು ಸರಕಾರದ ನಿಬಂಧನೆಯಂತೆ ಸ್ಥಾಪನೆಯಾಯಿತು. 37 ವರ್ಷಗಳ ಇತಿಹಾಸವಿರುವ ಈ ಮಹಿಳಾ ಒಕ್ಕೂಟವು ಎಲ್ಲಾ ವರ್ಗದ ಮಹಿಳೆಯರ ಜಾತಿ ಮತ ಪಕ್ಷರಹಿತವಾಗಿ ಎಲ್ಲರನ್ನು ಭಾವೈಕ್ಯದಿಂದ ಒಂದುಗೂಡಿಸಿ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಂಡು ಅದನ್ನು ಅನುಷ್ಠಾನಗೊಳಿಸಿದ ಪರಿಣಾಮವಾಗಿ ಇಂದು ಕರಾವಳಿ ಕರ್ನಾಟಕದ ಮಹಿಳೆಯರು ಸಮಾಜದ ಮುಖ್ಯವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಮಗೆ ಅಭಿಮಾನದ ವಿಷಯವಾಗಿದೆ. ಈ ಮಹಿಳಾ ಒಕ್ಕೂಟಗಳು ಜಂಟಿಯಾಗಿ ಮಾರ್ಚ್ 8ರಂದು ಪ್ರಪ್ರಥಮ ಬಾರಿಗೆ ಶನಿವಾರ ಪುತ್ತೂರಿನ ಮಹಾಲಿಂಗೇಶ್ವರ ದೇವಾಸ್ಥಾನದ ನಟರಾಜ ವೇದಿಕೆಯಲ್ಲಿ ‘ವಿಶ್ವಮಹಿಳಾ ದಿನಾಚರಣೆ’ಯ ಅಂಗವಾಗಿ “ವಿವಿಧತೆಯಲ್ಲಿ ಏಕತೆ”ಯ ಮಹಿಳಾ ಸಂಭ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಪ್ರಶಾಂತ್ ಮಹಲ್ ಬಳಿಯ ಮೈದಾನದಿಂದ ಹೊರಟು ದರ್ಬೆಯಾಗಿ ಮಹಿಳಾ ಜಾಥವು ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಮಹಾಲಿಂಗೇಶ್ವರ ದೇವಾಸ್ಥಾನದ ಆವರಣದಲ್ಲಿ ಸೇರಲಿವೆ. ಈ ಜಾಥವನ್ನು ಸಬ್ ಇನ್ಸ್ ಪೆಕ್ಟರ್ ಆಫ್ ಪೋಲಿಸ್‌ರಾದ ಶ್ರೀಮತಿ ಸವಿತಾ ಉದ್ಘಾಟಿಸಲಿದ್ದಾರೆ. ಎಲ್ಲಾ ತರದ ವಾಹನಗಳಿಗೆ ಮಹಿಳೆಯರೇ ಚಾಲಕ ರಾಗಿರುತ್ತಾರೆ. ಮಹಿಳಾ ಚೆಂಡೆ ತಂಡ, ವಿವಿಧತೆಯಲ್ಲಿ ಏಕತೆಯನ್ನು ಬಂದಿಸುವುವ ವೇಷ ಭೂಷಣಗಳನ್ನು ತೊಟ್ಟ ಮಹಿಳಾ ಕಲಾ ತಂಡಗಳು ಮತ್ತು ದೇಶಕ್ಕಾಗಿ, ನಾಡಿಗಾಗಿ ಹೋರಾಟ ನಡೆಸಿದ ಶೌರ್ಯ ಪ್ರದರ್ಶನವನ್ನು ಬಿಂಬಿಸುವ ಮಹಿಳೆಯರು ಜಾಥದಲ್ಲಿ ಸಾಗಲಿದ್ದಾರೆ. (ಸೈಕಲ್, ದ್ವಿಚಕ್ರವಾಹನ, ರಿಕ್ಷಾ, ಅಂಬುಲೆನ್ಸ್,ಕಾರು, ಬಸ್ಸು, ಟ್ರಕ್, ಮೊದಲಾದವುಗಳ ಚಲಾಕರು ಮಹಿಳೆಯರೇ ಆಗಿರುತ್ತಾರೆ.)
ಜಿಲ್ಲಾ ಮಟ್ಟದಿಂದ ನಡೆಯಲಿರುವ ಈ ಜಾಥದಲ್ಲಿ ಎಲ್ಲಾ ತಾಲೂಕು ಒಕ್ಕೂಟದ ಮಹಿಳಾ ಮಂಡಲಿಗಳು ಹಾಗು ಇತರ ಮಹಿಳಾ ಸಂಘಟನೆಗಳು ಭಾಗವಹಿಸಲಿದ್ದಾರೆ. “ವಿವಿಧತೆಯಲ್ಲಿ ಏಕತೆ”ಯ ಉದ್ಘಾಟನಾ ಸಮಾರಂಭಕ್ಕೆ ಉದ್ಘಾಟಕರಾಗಿ ಮಾನ್ಯ ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರ, ಕು ಭಾಗೀರಥಿ ಮುರುಳ್ಳ, ಅಧ್ಯಕ್ಷತೆಯಾಗಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆಯಾದ ಶ್ರೀಮತಿ ಉಷಾ ನಾಯಕ್, ಹಾಗು ಗೌರವ ಉಪಸ್ಥಿತರಾಗಿ ಆಗಮಿಸುವ ವಿಧಾನ ಸಭಾಧ್ಯಕ್ಷರು ಮಾನ್ಯ ಶಾಸಕರು ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಅಣ್ಣು ನಾಯ್ಕ, ವಿಧಾನ ಪರಿಷತ್ ಸದಸ್ಯರು ಸನ್ಮಾನ್ಯ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕರು, ಸನ್ಮಾನ್ಯ ಶ್ರೀ ಸಂಜೀವ ಮಠಂದೂರು, ವ್ಯವಸ್ಥಾಪನಾ ಸಮಿತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ಅಧಕ್ಷರಾದ ಸನ್ಮಾನ್ಯ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು, ಶ್ರೀಮತಿ ಶಂಕುತಳಾ ಟಿ ಶೆಟ್ಟಿ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಭವಾನಿ ಪ್ರಭು, ಮಾಜಿ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ಪ್ರಗತಿ ಆಸ್ಪತ್ರೆ ಪುತ್ತೂರು ಡಾ ಸುಧಾ ಎಸ್.ರಾವ್. ಮುಂತಾದ ಗಣ್ಯರೆಲ್ಲರು ಅತಿಥಿ ಸ್ಥಾನವನ್ನು ಆಲಂಕರಿಸಲಿದ್ದಾರೆ. ಅಂದು ಜಿಲ್ಲೆಯಾದ್ಯಂತ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ ಮಹಿಳೆಯರನ್ನು “ವಿವಿಧತೆಯಲ್ಲಿ ಏಕತೆ”ಯ ಮಹಿಳಾ ಸಂಭ್ರಮದಲ್ಲಿ ಕೃತಪ್ರತಪೂರ್ವಕವಾಗಿ ಅಭಿನಂದಿಸಲಾಗುವುದು.
ವಿಶ್ವ ಮಹಿಳಾ ದಿನಾಚರಣೆಯಂದು ನಡೆಯುವ “ವಿವಿಧತೆಯಲ್ಲಿ ಏಕತೆ”ಯ ಮಹಿಳಾ ಸಂಭ್ರಮದಲ್ಲಿ ಎಲ್ಲಾ ಮಹಿಳಾ ಸಂಸ್ಥೆಗಳ ತಂಡಗಳು ಈ ಸಂಭ್ರಮದಲ್ಲಿ ಭಾಗವಹಿಸಿ ಜಾಥಕ್ಕೆ ಮೇರಗು ನೀಡಬೇಕೆಂದು ನಮ್ಮ ಆಶಯ. ಆಯ್ದ ಶ್ರೇಷ್ಠ ಮೂರು ತಂಡಗಳಿಗೆ ನಗದು ಬಹುಮಾನಗಳಿಂದ ಗೌರವಿಸಲಾಗುವುದು. ಪತ್ರಿಕಾ ಮಾಧ್ಯಮ ಹಾಗು ದೃಶ್ಯ ಮಾಧ್ಯಮದವರು ಪ್ರೋತ್ಸಾಹ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ದ.ಕ ಜಿಲ್ಲಾ ಒಕ್ಕೂಟದ ಗೌರವಧ್ಯಕ್ಷರಾದ ಶ್ರೀಮತಿ ಚಂಚಲಾ ತೇಜೋಮಯ, ಜಿಲ್ಲಾ ಗೌರವ ಸಲಹೆಗಾರರಾದ ಶ್ರೀಮತಿ ಪ್ರೇಮಲತಾ ರಾವ್, ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ರೇಷ್ಮಾ ಪುತ್ತೂರು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಹೆಗಡೆ ಕಾರ್ಯದರ್ಶಿಯಾದ ಶ್ರೀಮತಿ ಪೂರ್ಣಿಮಾ ಶೆಟ್ಟಿ, ಖಜಾಂಜಿ ಶ್ರೀಮತಿ ರೇಖಾ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.