ಪುತ್ತೂರು ಮಾರ್ಚ್ 25: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ವಿರೋಧಿ ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ . ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಶಾಸಕಿ ಭಾರತಿ ಶೆಟ್ಡಿ, ಅಲ್ಪಸಂಖ್ಯಾತ ತುಷ್ಟೀಕರಣಕ್ಲಾಗಿ ಸಂವಿಧಾನ ಬದಲಾಗಿಸುವ ಹಂತಕ್ಕೆ ಕಾಂಗ್ರೇಸ್ ತಲುಪಿದೆ. ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ, ಆದರೆ ಹಿಂದೂಗಳ ಮೇಲೆ ಅನ್ಯಾಯವಾದರೂ ಕಾಂಗ್ರೇಸ್ ನಲ್ಲಿರುವ ಹಿಂದುಗಳು ಮಾತನಾಡುವುದಿಲ್ಲ, ದೇವಸ್ಥಾನಕ್ಕೆ ತೆರಳಿ ಕೇಸರಿ ಸಾಲು ಹಾಕಿ ನಾನು ಹಿಂದು ಎನ್ನುತ್ತಾರೆ.
ನಾನು ದೇವಸ್ಥಾನದ ಹೆಂಚು ಬದಲಾಯಿಸಿದೆ ಎನ್ನುವ ಫೋಸ್ ಕೊಡುತ್ತಾರೆ, ಆದರೆ ಕಾಂಗ್ರೇಸ್ ಪಕ್ಷದಿಂದ ಹಿಂದುಗಳಿಗೆ ಅನ್ಯಾಯವಾಗುವಾಗ ಒಂದು ಶಬ್ದ ಮಾತನಾಡುವುದಿಲ್ಲ ಇದು ನಮ್ಮ ದೌರ್ಭಾಗ್ಯ ಎಂದು ಹೇಳಿದರು. ಪ್ರತಿಭಟನೆ ಸಂದರ್ಭ ಡಿಕೆಶಿ ಪ್ರತಿಕೃತಿ ದಹನಕ್ಕೆ ಪೋಲೀಸರ ತಡೆ ಒಡ್ಡಿದ ಘಟನೆ ನಡೆದಿದ್ದು, ಈ ವೇಳೆ ಪೋಲೀಸರ ಜೊತೆಗೆ ಹೊಯ್ ಕೈ ಗೆ ಬಿಜೆಪಿ ಕಾರ್ಯಕತರು ಮುಂದಾಗಿದ್ದರು.
ಅಲ್ಲದೆ ಈ ವೇಳೆ ಪೋಲೀಸರ ವಿರುದ್ಧ ಮಾಜಿ ಶಾಸಕ ಸಂಜೀವ ಮಠಂದೂರು ಹರಿಹಾಯ್ದು ಪೋಲೀಸರಿಂದ ರಾಜಕಾರಣ ಕಲಿಯುವ ಅಗತ್ಯವಿಲ್ಲ ಎಂದು ಪೋಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಪೋಲೀಸರ ಮನವಿಯನ್ನು ತಿರಸ್ಕರಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಕೃತಿ ದಹಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಮುಸಲ್ಮಾನರನ್ನು ಒಲೈಸುವ ಕೆಲಸ ಕಾಂಗ್ರೆಸ್ ಒಂದು ಕಡೆ ಭ್ರಷ್ಟಾಚಾರ, ತುಷ್ಡಿಕಾರಣ ಮಾಡಿ ಮತ್ತೊಮ್ಮೆ ಸಂವಿಧಾನವನ್ನೆ ಬದಲಾವಣೆ ಮಾಡುವ ಹೇಳಿಕೆ ಮುಂದೆ ಕಾಂಗ್ರೆಸ್ ದೇಶವನ್ನೆ ಛಿದ್ರ ಮಾಡಲಿದೆ. ವಿಧಾನ ಸಭಾಪತಿ ಜಿಲ್ಲೆಯನ್ನು ಮುಸ್ಲೀಂಕರಣ ಮಾಡುತ್ತಿದ್ದಾರೆ. ಅವರು ನೂರಕ್ಕೆ ನೂರು ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನಾವು ಎಚ್ಚೆತ್ತು ಕೊಳ್ಳದ ಕಾರಣ ಇವತ್ತು ನಾವು ಅನುಭವಿಸುತ್ತಿದ್ದೇವೆ. ಮುಸ್ಲಿಂ ತುಷ್ಟೀಕರಣಕ್ಕೆ ಮಿತಿ ಬೇಕು. ಅತಿ ಹೆಚ್ಚು ಭಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್. ಹಾಗಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿರುದ್ದ ಕಾಂಗ್ರೆಸ್ ಇದೆ ಎಂದು ಹೇಳಿದ ಅವರು ಈ ಪ್ರತಿಭಟನೆ ನಿತ್ಯ ನಡೆಯುತ್ತದೆ. ನಾವು ಕೋರ್ಟ್ ಮೆಟ್ಟಲೇರುತ್ತೇವೆ. ಸಂವಿಧಾನ ತಿದ್ದುಪಡಿ ಮಾಡಲು ಬಿರುವುದಿಲ್ಲ ಎಂದು ಹೇಳಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು ಸಹಿತ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಡಿ ಕೆ ಶಿವಕುಮಾರ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.