• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಇದ್ದ ಬಾಡಿಗೆ ಮನೆಯ ನಿವಾಸಿಗಳು ಸ್ವಯಂ ಪ್ರೇರಿತರಾಗಿ ತೆರವು

ಪುತ್ತೂರು ಜಾತ್ರೆ : ಅನ್ನಪೂರ್ಣ ಭೋಜನ ಮಂಟಪದ ಉದ್ಘಾಟನೆ. ಮೊದಲ ದಿನವೇ ದಶಸಹಸ್ರ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ

April 11, 2025
ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

February 4, 2026
ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

February 4, 2026
ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

February 3, 2026
ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

February 3, 2026
ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

February 3, 2026
ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

February 2, 2026
ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಹೋರಾಟ

ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ

February 2, 2026
ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

February 2, 2026
ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

February 1, 2026
ಕೋಡಿಯಾಡಿಗುತ್ತು ಧರ್ಮಚಾವಡಿಯಲ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕೋಡಿಯಾಡಿಗುತ್ತು ಧರ್ಮಚಾವಡಿಯಲ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

February 1, 2026
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ? ಸರ್ಕಾರ ಮಹತ್ವದ ಚಿಂತನೆ!

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ? ಸರ್ಕಾರ ಮಹತ್ವದ ಚಿಂತನೆ!

February 1, 2026
ಸಾವಿರಾರು ಕೋಟಿ ಒಡೆಯ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಆತ್ಮಹತ್ಯೆ

ಸಾವಿರಾರು ಕೋಟಿ ಒಡೆಯ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಆತ್ಮಹತ್ಯೆ

February 1, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, February 5, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

    ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

    ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

    ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

    ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

    ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

    ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

    ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

    ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

    ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

    ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

    ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

    ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಹೋರಾಟ

    ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ

    ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

    ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

    ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

    ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

ಪುತ್ತೂರು ಜಾತ್ರೆ : ಅನ್ನಪೂರ್ಣ ಭೋಜನ ಮಂಟಪದ ಉದ್ಘಾಟನೆ. ಮೊದಲ ದಿನವೇ ದಶಸಹಸ್ರ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ

by ಪ್ರಜಾಧ್ವನಿ ನ್ಯೂಸ್
April 11, 2025
in ದಕ್ಷಿಣ ಕನ್ನಡ, ಧಾರ್ಮಿಕ, ಪುತ್ತೂರು, ಪ್ರಾದೇಶಿಕ
0
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಇದ್ದ ಬಾಡಿಗೆ ಮನೆಯ ನಿವಾಸಿಗಳು ಸ್ವಯಂ ಪ್ರೇರಿತರಾಗಿ ತೆರವು
44
SHARES
127
VIEWS
ShareShareShare

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆರೆಗೆ ಬಹಳ ಇತಿಹಾಸವಿದೆ. ಅನ್ನದ ಅಗಳು ಮುತ್ತಾದ ಐತಿಹ್ಯವುಳ್ಳ ಕೆರೆಯ ಪಕ್ಕದಲ್ಲೇ ಈ ಬಾರಿ ಅನ್ನಪ್ರಸಾದ ವಿತರಣೆ ನಡೆಯುತ್ತಿರುವುದು ವಿಶೇಷ. ಏ.10ರಿಂದ 20ರ ತನಕ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿತರಣೆ ಉದ್ದೇಶದಿಂದ ಏ.10ರಂದು ಧ್ವಜಾರೋಹಣ ಬಳಿಕ ಅನ್ನಪೂರ್ಣ ಭೋಜನ ಮಂಟಪವನ್ನು ಉದ್ಘಾಟಿಸಲಾಯಿತು.

ಅನ್ನಪೂರ್ಣ ಮಂಟಪವನ್ನು ಉದ್ಘಾಟಿಸಿದ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ಜಾತ್ರೆಗೆಂದು ಸಿದ್ದತೆ ಮಾಡಿದ ನೂತನ ಅನ್ನಛತ್ರದಲ್ಲಿ ಒಬ್ಬ ಭಕ್ತನಿಗೂ ದೇವರ ಅನ್ನಪ್ರಸಾದ ಸಿಗಲಿಲ್ಲ ಎಂದು ವಾಪಸ್ ಹೋಗಬಾರದು.ಹಾಗೆ ಆದರೆ ಇದರಿಂದ ದೇವರು ಕೋಪಿಷ್ಟರಾಗುತ್ತಾರೆ.ನನಗೆ ಯಾವ ರೀತಿ ನೈವೇದ್ಯ ಉಂಟೋ ಅದೇ ರೀತಿ ಬಂದ ಭಕ್ತರಿಗೂ ಪ್ರಸಾದ ಲಭಿಸಬೇಕೆಂಬುದು ದೇವರ ಇಚ್ಚೆ. ಆ ಉದ್ದೇಶದಿಂದ ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಅನ್ನದಾನ ಅತ್ಯಂತ ಯಶಸ್ವಿಯಾಗಿ ನೆರವೇರಬೇಕು.ಅನ್ನಪೂರ್ಣೆ ನಿರಂತರ ಆಶೀರ್ವಾದ ನೀಡುತ್ತಾಳೆ ಎಂದರು.

ashwinistudioputtur

ಜಾಹೀರಾತು

camera center ad

ಜಾಹೀರಾತು

ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಎಲ್ಲಾ ಭಕ್ತರಿಗೂ ವ್ಯವಸ್ಥಿತ ರೀತಿಯಲ್ಲಿ ಅನ್ನದಾನ ನೀಡುವ ವ್ಯವಸ್ಥೆ ಮಾಡಲಾಗಿದೆ.ಈ ಬಾರಿ ಹೆಚ್ಚಿನ ಜಾಗ ಸಿಕ್ಕಿದ ಕಾರಣ ಇಲ್ಲಿ ಇನ್ನೂ ಒಳ್ಳೆಯ ರೀತಿಯಲ್ಲಿ ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರೆಲ್ಲರೂ ಅನ್ನಪ್ರಸಾದ ಸ್ವೀಕರಿಸಬೇಕು.ಇಲ್ಲಿ ನೂಕು ನುಗ್ಗಲು ಏನೂ ಇರುವುದಿಲ್ಲ. ನಾಲ್ಕೈದು ಕೌಂಟರ್‌ನಲ್ಲಿ ಅನ್ನಪ್ರಸಾದ ವಿತರಣೆ ಆಗಲಿದೆ. ಭಕ್ತರು ಪೂಜೆ ಪುನಸ್ಕಾರ ಮಾಡಿ ಅನ್ನಪ್ರಸಾದ ಸ್ವೀಕರಿಸಬೇಕು. ಅನ್ನಪ್ರಸಾದ ವಿತರಣೆ ಮಾಡುವವರು ನಗುಮೊಗದಿಂದ ಇರಬೇಕು. ಯಾರಿಗೂ ಏರು ಧ್ವನಿಯಲ್ಲಿ ಮಾತನಾಡಬಾರದು. ಭಕ್ತರ ಮನಸ್ಸಿಗೆ ಸಂತೃಪ್ತಿಯಾಗುವಂತೆ ಅನ್ನಸಂತರ್ಪಣೆ ಮಾಡಬೇಕು ಎಂದರು.

Poorna squash

ಜಾಹೀರಾತು

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ದೇವರ ಪ್ರೇರಣೆ, ತಂತ್ರಿಯವರ ಆಶೀರ್ವಾದ, ಶಾಸಕರ ಮಾರ್ಗದರ್ಶನದಂತೆ ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲಿದೆ. ಅದರಲ್ಲೂ ಇವತ್ತು ಅನ್ನಪ್ರಸಾದ ವಿತರಣೆಗೆ ನೂತನ ವ್ಯವಸ್ಥೆ ಕಲ್ಪಿಸಲಾಗಿದೆ. ಅದು ಕೂಡಾ ಹಿರಿಯರು ಹೇಳಿದಂತೆ ಈ ಕೆರೆಗೆ ಬಹಳ ಮಹತ್ವವಿದೆ.ಇದರ ಹಿನ್ನೆಲೆ ಎಲ್ಲರಿಗೂ ತಿಳಿದ ವಿಚಾರ.ಅಂತಹ ವ್ಯವಸ್ಥೆಯ ಉದ್ಘಾಟನೆ ಭಾಗ್ಯ ನಮಗೆ ಸಿಕ್ಕಿದೆ. ತಾಂಬೂಲ ಪ್ರಶ್ನೆಯ ಸಂದರ್ಭದಲ್ಲಿ ರಕ್ತೇಶ್ವರಿಯ ಕೋಪ ಶಮನಕ್ಕೆ ಆಕೆಯನ್ನು ಒಳಾಂಗಣದಲ್ಲಿ ತರುವ ವ್ಯವಸ್ಥೆಯನ್ನೂ ಮಾಡಲಾಯಿತು.ಅದರ ಬಳಿಕ ಹೇಗೆ ಕೆಲಸ ಆಗುತ್ತಿದೆ ಎಂಬುದೇ ಗೊತ್ತಿಲ್ಲ.ಎಲ್ಲವೂ ತನ್ನಿಂತಾನೆ ನಡೆಯುತ್ತಿದೆ.ಕೆಲಸ ಮಾಡುವ ಸಂದರ್ಭ ದಾನಿಗಳು ಜಲ್ಲಿ, ಸಿಮೆಂಟ್, ಪೈಂಟ್ ಎಲ್ಲವನ್ನೂ ನೀಡಲು ಮುಂದೆ ಬಂದಿದ್ದಾರೆ.ಭಕ್ತರೋರ್ವರು ಬೋರ್‌ವೆಲ್ ಕೂಡಾ ಕೊಡಲು ಮುಂದೆ ಬಂದಿದ್ದಾರೆ.ಇವತ್ತು ಭಕ್ತರು ಮನೆಯ ಕಾರ್ಯ ಎಂದು ಗ್ರಹಿಸಿ ಸಹಕರಿಸಿ,ಅನ್ನಪ್ರಸಾದ ಸ್ವೀಕರಿಸುವಂತೆ ಮನವಿ ಮಾಡಿದರು.

ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ ಬಳಿಕ ನೂತನ ಅನ್ನಪೂರ್ಣ ಭೋಜನ ಮಂಟಪದ ಪಾಕಶಾಲೆಯಲ್ಲಿ ಪಲ್ಲಪೂಜೆ ನಡೆಯಿತು.ಪಲ್ಲಪೂಜೆಯ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು.ಅನ್ನಪ್ರಸಾದ ಸ್ವೀಕರಿಸಲು ನಿಂತಿದ್ದ ಭಕ್ತರ ಸರತಿ ಸಾಲುಗಳು ದೇವಳದ ಎದುರು ಭಾಗದ ಮುಖದ್ವಾರದ ತನಕ ತಲುಪಿತ್ತು.ಅನ್ನಪ್ರಸಾದ ವಿತರಣೆಗೆ ಪ್ರತ್ಯೇಕವಾಗಿ ಮೂರು ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಎರಡನೇ ಬಾರಿ ಅನ್ನಪ್ರಸಾದ ಸ್ವೀಕರಿಸಲು ಪ್ರತ್ಯೇಕ ಕೌಂಟರ್ ಮಾಡಲಾಗಿತ್ತು.ಅಲ್ಲಿಂದ ಪಾಯಸದ ಕೌಂಟರ್ ಕೂಡಾ ಪ್ರತ್ಯೇಕವಾಗಿತ್ತು.ಮಜ್ಜಿಗೆ ವಿತರಣೆಗೂ ಪ್ರತ್ಯೇಕ ಪ್ರತ್ಯೇಕ ಕೌಂಟರ್ ಮಾಡಲಾಗಿತ್ತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ ಕಾರಣ ಅನ್ನಛತ್ರ ಭಕ್ತರಿಂದ ತುಂಬಿತ್ತು.ಭಕ್ತರಿಗೆ ಸಾವಕಾಶವಾಗಿ ಅನ್ನಪ್ರಸಾದ ಸ್ವೀಕರಿಸಲು, ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ವಿಚಾರಣೆ ಕೌಂಟರ್ ಕೂಡಾ ತೆರೆಯಲಾಗಿತ್ತು.ಹಿರಿಯರಿಗೆ ಮತ್ತು ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದವರಿಗೆ ಪ್ರತ್ಯೇಕವಾಗಿ ಕುಳಿತು ಬಾಳೆಎಲೆಯಲ್ಲಿ ಅನ್ನಪ್ರಸಾದ ವಿತರಣೆ ಕಾರ್ಯ ನಡೆಯಿತು. ತಂತ್ರಿ, ವೈದಿಕರಿಗೆ ಪ್ರತ್ಯೇಕ ಕೊಠಡಿಯಲ್ಲಿ ಅನ್ನಪ್ರಸಾದ ವಿತರಣೆ ನಡೆಯಿತು. ಆಹಾರದ ಸುರಕ್ಷತೆಯ ದೃಷ್ಟಿಯಿಂದ ಅನ್ನಪ್ರಸಾದ ಬಡಿಸುವವರು ಮುಖಗವಸು, ತಲೆ ಹೊದಿಕೆ ಹಾಕಿಕೊಂಡಿದ್ದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು, ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ವಿನಯ ಸುವರ್ಣ, ದಿನೇಶ್ ಕುಲಾಲ್, ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ,ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ರೈ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ನಯನಾ ರೈ, ಜಗದೀಶ್ ಸಾಮಾನಿ, ಪಿ.ಜಿ.ಚಂದ್ರಶೇಖರ್ ರಾವ್, ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Muliya

ಜಾಹೀರಾತು

SendShare18Share
Previous Post

ಕರಾವಳಿ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅತೀ ದೊಡ್ಡ ಜಾತ್ರೋತ್ಸವಕ್ಕೆ ಧ್ವಜಾರೋಹಣ ಮೂಲಕ ಚಾಲನೆ

Next Post

ಶಿರಾಡಿ ಘಾಟಿ: ಜಂಟಿ ಡಿಪಿಆರ್‌ಗೆ ಸಲಹೆ, ಮಂಗಳೂರು ಮತ್ತು ಸುಬ್ರಹ್ಮಣ್ಯ ರೈಲು ಸಂಚಾರಕ್ಕೆ ಚಾಲನೆ : ಬ್ರಿಜೇಶ್ ಚೌಟ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪಿಎಂ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಅಡ್ಡಗಾಲು : ರಾಜ್ಯ ಸರ್ಕಾರ ಹಿರಿಯ ನಾಗರಿಕರ ಜೀವದ ಜತೆ ಚೆಲ್ಲಾಟವಾಡುತ್ತಿದೆ – ಸಂಸದ ಕ್ಯಾ. ಚೌಟ ಆಕ್ರೋಶ.

ಶಿರಾಡಿ ಘಾಟಿ: ಜಂಟಿ ಡಿಪಿಆರ್‌ಗೆ ಸಲಹೆ, ಮಂಗಳೂರು ಮತ್ತು ಸುಬ್ರಹ್ಮಣ್ಯ ರೈಲು ಸಂಚಾರಕ್ಕೆ ಚಾಲನೆ : ಬ್ರಿಜೇಶ್ ಚೌಟ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..