ಪುತ್ತೂರು ತಾಲ್ಲೂಕಿನಲ್ಲಿ ತೆರೆದ ವಾಹನದ ರ‌್ಯಾಲಿಯ ಮೂಲಕ ಅಣ್ಣಾಮಲೈ ಮತಯಾಚನೆ ನಡೆಯಿತು. ದರ್ಬೆಯಿಂದ ಆರಂಭಗೊಂಡ ಮತಯಾಚನೆ ಸರಕಾರಿ ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯ ತನಕ ಕಾರ್ಯಕರ್ತರ ಘೋಷಣೆಯೊಂದಿಗೆ ಸಾಗಿತು.
ತೆರದ ವಾಹನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದ ಸಿಗಂ ಕರಾವಳಿ ರಾಷ್ಟ್ರೀಯತೆಗೆ ಹೆಸರುವಾಸಿಯಾದ ಜಿಲ್ಲೆ,ಈ ಬಾರಿ ಮಾಜಿ ಸೈನಿಕನಿಗೆ ಅವಕಾಶ ನೀಡಲಾಗಿದೆ.ದಾಖಲೆ ಅಂತರದ ಮತಗಳ ಮೂಲಕ ಗೆಲ್ಲಿಸಬೇಕು.ಅತೀ ಹೆಚ್ಚು ಮತದಾನ ಆಗುವಂತೆ ಕರೆ ನೀಡಿದರು.ಕ್ಯಾಪ್ಟನ್ ಮಾತಾಡಿ ಈ ಬಾರಿ ಹಿಂದುತ್ವದ ಚುನಾವಣೆ, ರಾಷ್ಟ್ರೀಯ ವಿಚಾರದ ಚುನಾವಣೆ, ಮೋದಿಯನ್ನು ಗೆಲ್ಲಿಸುವ ಮೂಲಕ ರಾಷ್ಟ್ರೀಯತೆಯ ಕೆಲಸಕ್ಕೆ ಕೈಜೋಡಿಸೋಣ ತಿಳಿಸಿದರು.
ತೆರೆದ ವಾಹನದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ,ಹರೀಶ್ ಪೂಂಜ,ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್,ಸಂಜೀವ ಮಟಂದೂರು,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ರಾಧಾಕೃಷ್ಣ ಆಳ್ವ, ಅರುಣ್ ಪುತ್ತಿಲ ಉಪಸ್ಥಿತರಿದ್ದರು.ನಂತರ
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು