ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 15ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ವೇದ ಲಕ್ಷ್ಮೀಕಾಂತ್, ಸಮಿತಿಯ ಸಂಚಾಲಕರಾಗಿ ಅರುಣ್ ಕುಮಾರ್ ರೈ ಆನಾಜೆ ,ಸಮಿತಿಯ ಕಾರ್ಯದರ್ಶಿಯಾಗಿ ಗಣೇಶ್ ಕಾಮತ್ ಮತ್ತು ಸಮಿತಿಯ ಕೋಶಾಧಿಕಾರಿಯಾಗಿ ಕೇಶವ್ ಪ್ರಸಾದ್ ಬಿ.ವಿ ಇವರು ಆಯ್ಕೆಯಾಗಿದ್ದಾರೆ.ಹಾಗೂ ಉಪಧ್ಯಾಕ್ಷರುಗಳಾಗಿ ಸುಹಾಸ್ ಮರಿಕೆ,ಡಾ.ಅನನ್ಯ ಲಕ್ಷ್ಮಿ,ಶೇಖರ ಬ್ರಹ್ಮನಗರ,ನಿತಿನ್ ಕುಮಾರ್ ಮಂಗಳಾ ಆಯ್ಕೆಯಾಗಿದ್ದಾರೆ, ಸಹ ಕಾರ್ಯದರ್ಶಿಗಳಾಗಿ ಜಯಂತ್ ಕರ್ಕುಂಜ,ಚಂದ್ರನಾಥ ಮುಕ್ವೆ ,ಸಂಜಯ್ ಬನಾರಿ, ದಿನೇಶ್ ತಿಂಗಳಾಡಿ ಮತ್ತು ಸಹ ಕೋಶಾಧಿಕಾರಿಗಳಾಗಿ ಚೇತನ್ ಬೊಳುವಾರು,ಕೆ.ನಾಗೇಶ್ ಶೆಣೈ,ಭವಿತ್ ಬಲ್ನಾಡು,ಜಗದೀಶ್ ಅಗಳಿ ಕಾಣಿಯೂರು ಇವರು ವಿಶ್ವ ಹಿಂದೂ ಪರಿಷದ್ ವತಿಯಿಂದ ಪಂಚವಟಿಯಲ್ಲಿ ನಡೆದ ಬೈಠಕ್ ನಲ್ಲಿ ಅಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಪದಾಧಿಕಾರಿಗಳು, ಪ್ರಖಂಡದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.