ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶ 10.08.2025 ರಂದು 9:30 ಕ್ಕೆ ಪುತ್ತೂರಿನ ಸುಭದ್ರ ಸಭಾ ಮಂದಿರ ದರ್ಬೆ ಯಲ್ಲಿ ನಡೆಯಲಿದೆ ಕಾರ್ಯಕ್ರಮ ಸಂಯೋಜಕರಾದ ಶಶಿಕುಮಾರ್ ಭಟ್ ಪಡಾರು ಹಾಗೂ ಕಾರ್ಯಕ್ರಮದ ಸಂಯೋಜನ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಉದ್ಘಾಟನೆ ಮತ್ತು ಸಭಾಧ್ಯಕ್ಷತೆಯನ್ನು ಶ್ರೀ ಕಿಶೋರ್ ಕುಮಾರ್ ಕೊಡ್ಲಿ ಅಧ್ಯಕ್ಷರು, ಕ್ಯಾಂಪ್ಲೊ ಸಂಸ್ಥೆ ನಿಯಮಿತ ಮಂಗಳೂರು
ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಶ್ರೀ ವೇಣುಗೋಪಾಲ್ ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ, ಸಮಗ್ರ ಕಾಳುಮೆಣಸು ಬೆಳೆಯುವ ಮಾಹಿತಿ ಮತ್ತು ಸಂರಕ್ಷಣಾ ವಿಧಾನ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.
ಕಾಫಿ ಮತ್ತು ಕಾಳುಮೆಣಸಿಗೆ ನೀಡುವ ಪೋಷಕಾಂಶಗಳ ಬಗ್ಗೆ ಸಮಗ್ರ ಮಾಹಿತಿ ಡಾ| ಎಚ್.ಎಸ್. ಧರ್ಮರಾಜ್ ಸಕಲೇಶಪುರ 7 ಬೀನ್ ಟೀಮ್ ನ ಮುಖ್ಯಸ್ಥರು, ವಿಷಯ ಮಂಡನೆ ಮಾಡಲಿದ್ದಾರೆ.
ಶ್ರೀ ಪೆರುವೋಡಿ ನಾರಾಯಣ ಭಟ್ ಶ್ರೀ ಸಿದ್ದಿ ಅಗ್ರಿ ಕಂಪೆನಿ ಪ್ರೈವೆಟ್ ಲಿಮಿಟೆಡ್ ಇಂದೋರ್, ಅಡಿಕೆ ಬೆಳೆಯುವ ವಿಧಾನ ಮತ್ತು ಇದರ ಪೋಷಕಾಂಶಗಳ ಸಮಗ್ರ ಮಾಹಿತಿ ನೀಡಲಿದ್ದಾರೆ.
ಅತಿಥಿಗಳಾಗಿ
ಶ್ರೀ ಸುರೇಶ್ ಬಲ್ನಾಡು ಅಡಿಕೆ ಮತ್ತು ಕಾಳುಮೆಣಸು ಕೃಷಿಕರು
ಡಾ| ಶ್ರೀ ವೇಣುಗೋಪಾಲ್ ಕಳೇಯತ್ತೋಡಿ ಪ್ರಗತಿಪರ ಕಾಳುಮೆಣಸು ಕೃಷಿಕರು
ಶ್ರೀ ಅನಂತರಾಮಕೃಷ್ಣ ಪಳ್ಳತ್ತಡ್ಡ ಧೂಪದ ಮರದಲ್ಲಿ ಕಾಳು ಮೆಣಸು ಕೃಷಿ ಮಾಡಿದ ಸಾಧಕರು ಶ್ರೀ ಕೋಮಲೆ ಗಣಪತಿ ಭಟ್ ಅಡಿಕೆ ಮರ ಏರುವ ಯಂತ್ರ ಆವಿಷ್ಕರಿಸಿದವರು ಶ್ರೀ ಅರವಿಂದ ಮುಳ್ಳಂಕೊಚ್ಚಿ ಆಲಂಕಾರು ಅಡಿಕೆ ಮತ್ತು ಕಾಳುಮೆಣಸು ಕೃಷಿಕರು ಶ್ರೀಮತಿ ಸ್ವಪ್ಪಾ ಸೇಡಿಯಾಪು ಕಾಳುಮೆಣಸು ಕಶಿ ಕಟ್ಟಿ ಬೆಳೆಸಿದ ಅನುಭವಿ ಕೃಷಿಕೆ ಭಾಗವಹಿಸಲಿದ್ದಾರೆ.
ಶ್ರೀ ಅಜಿತ್ ಪ್ರಸಾದ್ ರೈ ದಂಪತಿಗಳು ಪ್ರಗತಿಪರ ಅಡಿಕೆ, ಕಾಳುಮೆಣಸು ಮತ್ತು ಕಾಫಿ ಬೆಳೆಯಲ್ಲಿ ಪ್ರಗತಿಪರ ಕೃಷಿಕರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.