ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡದ ವತಿಯಿಂದ ದೇಶಾದ್ಯಂತ ನಡೆಯುತ್ತಿರುವ ಬಜರಂಗದಳದ ಸೇವಾ ಸಪ್ತಾಹ ಹಿನ್ನಲೆ ವೃಕ್ಷಾರೋಪಣ ಕಾರ್ಯಕ್ರಮವು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷರಾದ ದಾಮೋದರ ಪಾಟಾಳಿ,ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,ಬಜರಂಗದಳ ಜಿಲ್ಲಾ ಸಹ ಸಂಯೋಜಕರಾದ ಪ್ರವೀಣ್ ಕಲ್ಲೇಗ,ನಗರ ಪ್ರಖಂಡ ಸಂಯೋಜಕರಾದ ಜಯಂತ್ ಕುಂಜೂರುಪಂಜ,ನಗರ ಕಾರ್ಯದರ್ಶಿ ಜಿತೇಶ್ ಬಲ್ನಾಡ್,ಪ್ರಖಂಡ ಉಪಾಧ್ಯಕ್ಷರಾದ ಸೇಶಪ್ಪ ಬೆಳ್ಳಿಪ್ಪಾಡಿ,ಸಹ ಕಾರ್ಯದರ್ಶಿ ಜಯಂತ್ ಕರ್ಕುಂಜ,ಸ್ಥಳೀಯ ನಗರಸಭಾ ಸದಸ್ಯರಾದ ಪೂರ್ಣಿಮಾ ಚೆನ್ನಪ್ಪ ಗೌಡ,ಗ್ರಾಮ ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಗಣೇಶ್ ಬಲ್ನಾಡ್,ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ಸತೀಶ್, ವಿನಾಯಕ ಪ್ರೆಂಡ್ಸ್ ಬಲ್ನಾಡ್ ಇದರ ಕಾರ್ಯದರ್ಶಿ ವಸಂತ ಮುದಲಾಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.