ಡೆಹ್ರಾಡೂನ್: ಜು.14-ಉತ್ತರಾಖಂಡದಲ್ಲಿ ನಕಲಿ ಸಾಧುಗಳು ಮತ್ತು ಬಾಬಾಗಳ ವಿರುದ್ಧ ಆಪರೇಷನ್ ಕಲಾನೇಮಿ ನಡೆಸಲಾಗುತ್ತಿದೆ. ಬದರಿನಾಥ ಧಾಮದಿಂದ ಡೆಹ್ರಾಡೂನ್‌ವರೆಗೆ, ಪೊಲೀಸರು ಅಂತಹ ಬಾಬಾಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುತ್ತಿದ್ದಾರೆ.
ನಿನ್ನೆ ಮೊನ್ನೆ ಆಟೋ ಓಡಿಸಿ ಕೊಂಡು ಇದ್ದು ಈವಾಗ ಸೋಶಿಯಲ್ ಮೀಡಿಯಾ ದಲ್ಲಿ ಗುರುವಾಣಿ ಹೇಳುವವರಿಗೆ ಅನ್ವಹಿಸುತ್ತೆ. ಇಂಥವರಿಗೆ ದೇವರು ಒಳಿತು ಮಾಡುತಾನೆಯೇ?
ಇಲ್ಲಿಯವರೆಗೆ 200 ಕ್ಕೂ ಹೆಚ್ಚು ನಕಲಿ ಬಾಬಾಗಳನ್ನು ಬಂಧಿಸಲಾಗಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಇದರಲ್ಲಿ ಬಾಂಗ್ಲಾದೇಶ ಮತ್ತು ಇತರ ರಾಜ್ಯಗಳ ಜನರು ಸಹ ಸೇರಿದ್ದಾರೆ.ಡೆಹ್ರಾಡೂನ್‌ನಲ್ಲಿ, ಆಪರೇಷನ್ ಕಲಾನೇಮಿ ಅಡಿಯಲ್ಲಿ ಮೂರು ದಿನಗಳಲ್ಲಿ 42 ನಕಲಿ ಬಾಬಾಗಳನ್ನು ಬಂಧಿಸಲಾಗಿದೆ.
ಚಮೋಲಿಯ ಬದರಿನಾಥ್ ಪೊಲೀಸರು ಇದುವರೆಗೆ 60 ಕ್ಕೂ ಹೆಚ್ಚು ವಂಚಕರನ್ನು ಬಂಧಿಸಿದ್ದಾರೆ. ಅಭಿಯಾನ ಕಲಾನೇಮಿ ಅಡಿಯಲ್ಲಿ, ಪೊಲೀಸರು ಬದರಿನಾಥ್ ಧಾಮದಲ್ಲಿ ಸಾಧುಗಳ ತನಿಖೆ ಮತ್ತು ಪರಿಶೀಲನೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಅನುಮಾನಾಸ್ಪದ ಸಾಧುಗಳನ್ನು ಗುರುತಿಸಲಾಗುತ್ತಿದೆ ಮತ್ತು ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಇದರೊಂದಿಗೆ, ನಕಲಿ ಬಾಬಾಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗಿದೆ. ರಾಜ್ಯದಲ್ಲಿ ಸಾಧು ವೇಷದಲ್ಲಿ ಸೋಗು ಹಾಕುವವರ ನಿಜವಾದ ಗುರುತನ್ನು ಬಹಿರಂಗಪಡಿಸಲು ಆಪರೇಷನ್ ಕಲಾನೇಮಿ ನಡೆಸಲಾಗುತ್ತಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ .ಇಲ್ಲಿಯವರೆಗೆ, ಕೆಲವು ಬಾಂಗ್ಲಾದೇಶಿ ನುಸುಳುಕೋರರು ಸೇರಿದಂತೆ 200 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ.
ನಕಲಿ ಬಾಬಾ ಅಥವಾ ಸಾಧುಗಳ ಬಗ್ಗೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಅಭಿಯಾನವನ್ನು ಯಶಸ್ವಿಗೊಳಿಸಲು ಮತ್ತು ಜನರ ನಂಬಿಕೆಯೊಂದಿಗೆ ಆಟವಾಡುವ ನಕಲಿ ಬಾಬಾಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಠಾಣೆಯ ಉಸ್ತುವಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ಹೇಳಿದ್ದಾರೆ.























