ಪುತ್ತೂರು ಶಾಸಕರ ಕಛೇರಿ ಸಭಾಭವನದಲ್ಲಿ ಬೃಹತ್ ಉದ್ಯೋಗ ಮೇಳದ ಬಗ್ಗೆ ಮಾಹಿತಿ ಕಾರ್ಯಾಗಾರ ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮತ್ತು ಆಳ್ವಾಸ್ ಎಜ್ಯುಕೇಶನ್ ಫ಼ೌಂಡೇಶನ್ ಮೂಡಬಿದಿರೆ ಇದರ ಆಶ್ರಯದಲ್ಲಿ ಆ. 1 ಮತ್ತು 2 ರಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ.
ಈ ಉದ್ಯೋಗ ಮೇಳದ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ದಿನಾಂಕ ಜು.21 ರಂದು ಮಧ್ಯಾಹ್ನ ಗಂಟೆ. 2.30 ರಂದು ಪುತ್ತೂರು ಶಾಸಕರ ಕಚೇರಿಯಲ್ಲಿ ಅಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಸುಮಾರು 500 ಮಿಕ್ಕಿ ಕಂಪೆನಿಗಳು ಭಾಗವಹಿಸುತ್ತವೆ .
ಮಾಹಿತಿ ಕಾರ್ಯಗಾರದಲ್ಲಿ ಉದ್ಯೋಗ ಮೇಳದ ಬಗ್ಗೆ ಆಳ್ವಾಸ್ ಎಜ್ಯುಕೇಶನ್ ಫ಼ೌಂಡೇಶನ್ ನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವರವರು ಮಾಹಿತಿ ನೀಡಲಿದ್ದಾರೆಅಲ್ಲದೇ. ಪುತ್ತೂರಿನಿಂದ ಉದ್ಯೋಗ ಮೇಳಕ್ಕೆ ಹೋಗುವವರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ಉಚಿತ ಬಸ್ ವ್ಯವಸ್ಥೆ ಯನ್ನು ಮಾಡಿರುತ್ತಾರೆ.ಆದುದರಿಂದ ಕೂಡಲೇ ಈ ಕೆಳಗಿನ ಶಾಸಕರ ಕಛೇರಿಯ ದೂರವಾಣಿ ಸಂಖ್ಯೆ; 9449663719. 8904707969 ಗೆ ಕರೆ ಮಾಡಿ ಹೆಸರು ನೊಂದಾಯಿಸಿ ಕೊಳ್ಳ ಬಹುದು ಎಂದು ರೈ ಎಸ್ಟೇಟ್ ಎಜ್ಯುಕೇಶನಲ್& ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಆರ್.ಶೆಟ್ಟಿ ತಿಳಿಸಿದ್ದಾರೆ.