ಮಂಗಳೂರು, ಏಪ್ರಿಲ್ 23: ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ ನಡೆದು ಆರು ದಿನ ಕಳೆದಿದೆ. ಪ್ರಕರಣವನ್ನು ಸಿಐಡಿಗೆ ವಹಿಸುತ್ತಿದ್ದಂತೆಯೇ ಇಂದು ಸಿಐಡಿ ತಂಡ ವಾಣಿಜ್ಯ ನಗರಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಪೊಲೀಸ್ ಆಯುಕ್ತರನ್ನು ಭೇಟಿಯಾದ ತಂಡ, ಮಾಹಿತಿ ಪಡೆದುಕೊಂಡಿದೆ. ಇನ್ನು ಈ ಪ್ರಕರಣ ಕುರಿತಾಗಿ ಮಂಗಳೂರಿನಲ್ಲಿ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ. ಒಬ್ಬ ಹುಡುಗಿಯನ್ನ ಹೀಗೆ ಹತ್ಯೆಗೈಯೋದು ಯಾರೂ ಒಪ್ಪಲ್ಲ. ಗೃಹಸಚಿವರ ಭಾಷೆಯನ್ನ ನಾಗರಿಕ ಸಮಾಜದಲ್ಲಿ ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ವೋಟರ್ ಲಿಸ್ಟ್ನಿಂದ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರು ಕೈಬಿಡಲಾಗಿದೆ. ಜಾಣ್ಮೆಯಿಂದ ಮತದಾರರ ಲಿಸ್ಟ್ನಿಂದ ಹೆಸರು ಕೈಬಿಟ್ಟಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇದ್ದರೆ ಹೆಂಡತಿ ಹೆಸರು ಔಟ್. ಒಂದು ಬೂತ್ನಲ್ಲಿ 20-25 ಮತದಾರರ ಹೆಸರು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.