ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ ಹಾಗೂ ಫ್ಲಾಟಿಂಗ್ ಮಾಡುವಲ್ಲಿ ಭೂಮಿ ಸರ್ವೆ ಮಾಡಲು ಲೈಸೆನ್ಸ್ ಹೊಂದಿರುವ ಖಾಸಗಿ ಸರ್ವೆಯರ್ ಗಳಿಗೆ ಅವಕಾಶ ನೀಡಬೇಕು ಎಂದು ಕಂದಾಯ ಇಲಾಖೆಯ ಆಯುಕ್ತರಾದ ರಾಜೇಂದ್ರ ಕಠಾರಿಯಾ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು.
ಬುಧವಾರ ಆಯುಕ್ತರನ್ನು ಭೇಟಿಯಾದ ಶಾಸಕರು ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡುವಲ್ಲಿ ,ಫ್ಲಾಟಿಂಗ್ ಭೂಮಿ ಸರ್ವೆ ಮಾಡುವಲ್ಲಿ ಸರ್ವೆಯರ್ ಗಳ ಕೊರತೆ ಇದೆ. ಈ ಕಾರಣಕ್ಕೆ ಕಡತ ವಿಲೇವಾರಿಮಾಡುವಲ್ಲಿ ತುಂಬಾ ವಿಳಂಬವಾಗುತ್ತಿದೆ.
ಫ್ಲಾಟಿಂಗ್ ವಿಚಾರದಲ್ಲಿ ಸರ್ವೆಯರ್ ಗಳ ವಿಳಂಬದಿಂದಾಗಿ ಜನರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಪರವಾನಿಗೆ ಹೊಂದಿರುವ ಖಾಸಗಿ ಸರ್ವೆಯರ್ ಗಳನ್ನು ಸರಕಾರ ಸರ್ವೆ ಕೆಲಸಕ್ಕೆ ನೇಮಿಸಿದ್ದಲ್ಲಿ ಕೆಲಸದಲ್ಲಿ ವೇಗತೆಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಸರಕಾರ ತಕ್ಷಣ ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಸರ್ವೆಯರ್ ಗಳ ನಿಯುಕ್ತಿ ಮಾಡಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.
ಶಾಸಕರ ಮನವಿ ಸ್ವೀಕರಿಸಿದ ಆಯುಕ್ತರು ಈ ವಿಚಾರವನ್ನು ಕಂದಾಯ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಂಟರ ಭವನ ನಿರ್ಮಾಣ ಹಾಗೂ ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ವಿಚಾರದ ಬಗ್ಗೆ ಕಂದಾಯ ಇಲಾಖೆಯ ಆಯುಕ್ತರ ಜೊತೆ ಚರ್ಚೆ ನಡೆಸಿದರು.
ಪುತ್ತೂರಿನಲ್ಲಿ ಸರ್ವೆಯರ್ ಗಳ ಕೊರತೆ ಇದೆ. ಸರಕಾರ ಹೊಸ ಸರ್ವೆಯರ್ ಗಳ ನೇಮಕಾತಿ ನಡೆಸುವ ತನಕ ಇಲ್ಲಿರುವ ಲೈಸೆನ್ಸ್ ಹೊಂದಿರುವ ಖಾಸಗಿ ಸರ್ವೆಯರ್ ಗಳನ್ನು ಬಳಸಿಕೊಂಡು ಅಕ್ರಮ ಸಕ್ರಮ ಹಾಗೂ ಫ್ಲಾಟಿಂಗ್ ಕಾರ್ಯದಲ್ಲಿ ಸ್ಪೀಡಪ್ ಮಾಡಲು ಸಹಕಾರ ನೀಡುವಂತೆ ಆಯುಕ್ತರಿಗೆ ಮನವಿ ಮಾಡಿದ್ದೇನೆ. ನಿಯುಕ್ತಿಯ ಭರವಸೆ ನೀಡಿದ್ದಾರೆ. ಅಶೋಕ್ ರೈ,