ಪುತ್ತೂರು: ಪುತ್ತೂರು ನಗರದ ನಂತರ ತಾಲೂಕಿನ ಅತೀ ದೊಡ್ಡ ಪೇಟೆಯಾದ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ ರಾಜ್ಯ ಹೆದ್ದಾರಿಗೆ ಪರಿವರ್ತಿಸಲಾಗಿದೆ. ಪ್ರಸ್ತುತ ಬದಲಾಗಿ ಹೊಸ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ರಸ್ತೆಗೆ ಪುತ್ತೂರು ನಗರದಿಂದ ಸೇಡಿಯಾಪು ವರೆಗೆ ಯಾವುದೇ ನಿರ್ವಹಣೆಯನ್ನು ಮಾಡದೆ ಜನರು ನಿತ್ಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಇದನ್ನು ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ದುರಸ್ಥಿ ಗೊಳಿಸದೆ ಇದ್ದಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಪ್ರತಿಭಟನೆಯ ಎಚ್ಚರಿಕೆ ಕರೆಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ಮಾಜಿ ಶಾಸಕ ಸಂಜೀವ ಮಠoದೂರ್ ತಿಳಿಸಿದ್ದಾರೆ.
ನನ್ನ ಶಾಸಕತ್ವದ ಅವಧಿಯಲ್ಲಿ ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಚತುಷ್ಪಥ ರಸ್ತೆ ನಿರ್ಮಾಣಗೊಳಿಸಲಾಯಿತು. ಈಗ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟಿದೆ. ಪುತ್ತೂರನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಸ್ಥಳೀಯ ಬನ್ನೂರು, ಚಿಕ್ಕಮಾಡ್ನೂರು,ಹಾಗೂ ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿ,ಪ್ರತಿಭಟನೆಯ ಎಚ್ಚರಿಕೆ ನೀಡಿದರು ಮಣಿಯುತ್ತಿಲ್ಲ ಈ ಸರಕಾರದ ಅಧಿಕಾರಿಗಳು. ಕಳೆದ ಎರಡು ವರ್ಷಗಳಿಂದ
ಚತುಸ್ಪಥ ರಸ್ತೆಯ ದುರಸ್ತಿ ನಿರ್ವಹಣೆಗೆ ಸರಕಾರದಿಂದ ಅನುದಾನ ಬಿಡುಗಡೆಗೊಲಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದರೊ? ಅಥವಾ ನಿರ್ವಹಣೆ ಅನುದಾನ ಬಿಡುಗಡೆಗೊಂಡು ಕಾಮಗಾರಿಯಲ್ಲಿ ಕಳಪೆಯೊ? ಎಂದು ಲೋಕಉಪಯೋಗಿ ಅಧಿಕಾರಿಗಳು ಬಹಿರಂಗಪಡಿಸಬೇಕು. ಸಂಬಂಧಪಟ್ಟ ಇಲಾಖೆಗಳು ತಕ್ಷಣ ದುರಸ್ತಿ ಕಾರ್ಯಗಳು ಮುಗಿಸಬೇಕು. ವಿಳಂಬವಾದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಿರ್ಧರಿಸಲಾಗುವುದು.
ಸಂಜೀವ ಮಠಂದೂರು ಮಾಜಿ ಶಾಸಕರು.