ಕುಂಬ್ರ : ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಮೊದಲ ಅಭ್ಯಾಸವರ್ಗ ಕಾರ್ಯಕ್ರಮ ಕೆದಂಬಾಡಿ ಶಕ್ತಿ ಕೇಂದ್ರದಲ್ಲಿ ಜರಗಿತು. ಇದರ ಉದ್ಘಾಟನೆಯನ್ನು ದ.ಕ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಹಿರಿಯ ಕಾರ್ಯಕರ್ತರು ಶಂಕರನಾರಾಯಣ ಭಟ್ ಇವರು ನಡೆಸಿದರು.
ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಯತೀಂದ್ರ ಕೊಚ್ಚಿ,ರಾಧಾಕೃಷ್ಣ ಬೂಡಿಯಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರು , ರತನ್ ರೈ ಕುಂಬ್ರ ಮಂಡಲ ಕಾರ್ಯದರ್ಶಿ,ಮಚ್ಚಿಮಲೆ ವಿರೂಪಾಕ್ಷ ಭಟ್ ಪ್ರಶಿಕ್ಷಣ ಸಹಸಂಚಾಲಕರು, ಬಿಜೆಪಿಯ ಮಂಡಲದ ಪದಾಧಿಕಾರಿಗಳು , ಶಕ್ತಿಕೇಂದ್ರ ,ಬೂತ್ ಅಧ್ಯಕ್ಷರುಗಳು ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತಿ ಇದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರು ಇವರು ಮೊದಲಿನ ಅವಧಿಯಲ್ಲಿ ನಮ್ಮ ವೈಚಾರಿಕತೆ ಮತ್ತು ಪಂಚಪರಿವರ್ತನೆ ಬಗ್ಗೆ ಮಾತನಾಡಿದರು. ಎರಡನೇ ಅವಧಿ ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ ಬಗ್ಗೆ ಪ್ರೇಮಾನಂದ ಶೆಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿದರು. ನನಗೆ ನೀಡಿರುವ ವಿಕಸಿತ ಭಾರತದ ಅಮೃತ ಕಾಲ -ನಮ್ಮ ಸಕ್ರಿಯತೆ ವಿಷಯದ ಅವಧಿ ನಡೆಸಿದೆನು,
ಬೂತ್ ಶಹಾ ಬೈಠಕ್ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಅಧ್ಯಕ್ಷರು ಸತೀಶ್ ಕುಂಪಲ ಉಪಸ್ಥಿತಿಯಲ್ಲಿ ನಡೆಯಿತು. ಅಭ್ಯಾಸ ವರ್ಗದ ಬಗ್ಗೆ ಭಾಗವಹಿಸಿದ ಬೂತ್ ಅಧ್ಯಕ್ಷರು ಪಂಚಾಯತ್ ಅಧ್ಯಕ್ಷರು ತಮ್ಮ ಅನಿಸಿಕೆ ತಿಳಿಸಿದರು. ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಶರತ್ ಶಕ್ತಿ ಕೇಂದ್ರ ಅಧ್ಯಕ್ಷ, ಸುಧಾಕರ ಆಚಾರ್ಯ , ಜಿಲ್ಲಾ ಪ್ರಶಿಕ್ಷಣ ಸಹಸಂಚಾಲಕರು, ಮಚ್ಚಿಮಲೆ ವಿರೂಪಾಕ್ಷ ಭಟ್, ಸುಭಾಷ್ ರೈ ಕಡಮಜಲು, ಹರೀಶ್ ಬಿಜತ್ರೆ , ನಿತೀಶ್ ಕುಮಾರ್ ಶಾಂತಿವನ, ರಾಜೇಶ್ ರೈ ಪರ್ಪುಂಜ , ತ್ರಿವೇಣಿ ಪಲ್ಲತ್ತಾರು ಉಪಸ್ಥಿತಿ ಇದ್ದರು.
ಅಭ್ಯಾಸವರ್ಗ ಬೆಳಗ್ಗೆ 9.20ಕ್ಕೆ ಶುರುವಾಗಿ ಮಧ್ಯಾಹ್ನ 1ಗಂಟೆಗೆ ಮುಕ್ತಾಯಾಗಿರುತ್ತದೆ. ಶಕ್ತಿಕೇಂದ್ರದ 4 ಬೂತಿನಿಂದ ಒಟ್ಟು 74ಜನ ಕಾರ್ಯಕರ್ತರು ಉಪಸ್ಥಿತಿ ಇದ್ದರು.