ಸು ಫ್ರಮ್ ಸೋ’ ಚಿತ್ರದಲ್ಲಿ ಯಾವುದೇ ದೊಡ್ಡ ಸ್ಟಾರ್ಸ್ ಇಲ್ಲ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೆಪಿ ತುಮಿನಾಡ ಅವರು. ಈ ಸಿನಿಮಾ ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲಂಸ್’ ಲಾಂಛನದ ಅಡಿಯಲ್ಲಿ ರಾಜ್ ಬಿ. ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ಮಾಡಿದ್ದಾರೆ. ಜೆಪಿ ತುಮಿನಾಡ, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ಮೈಮ್ ರಾಮದಾಸ್, ದೀಪಕ್ ರೈ ಪಣಜೆ, ಅರ್ಜುನ್ ಕಜೆ ಮೊದಲಾದವರು ಅಭಿನಯಿಸಿದ್ದಾರೆ. ಎಲ್ಲರೂ ಈ ಮೊದಲು ಪೋಷಕ ಪಾತ್ರಗಳನ್ನು ಮಾಡಿ ಭೇಷ್ ಎನಿಸಿಕೊಂಡಿರುವುದು ವಿಶೇಷ.
ಜನ ಮಾತ್ರ ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ಸಿನೆಮಾ ಯಾರಿಗಾಗಿ ಮಾಡಬೇಕು ಎಂಬ ಪ್ರಶ್ನೆಗಳಿಗೆ “ತೆರೆ’ ಬಿದ್ದಿದೆ. ಒಳ್ಳೆಯ ಸತ್ವ ಇರುವ ಚಿತ್ರವನ್ನು ಕೊಟ್ಟರೆ ಖಂಡಿತ ಥಿಯೇಟರ್‌ಗಳಿಗೆ ಜನ ಬಂದೇ ಬರುತ್ತಾರೆ ಎಂಬುದನ್ನು ಈಗ “ಸು ಫ್ರಮ್ ಸೋ’ ಸಾಬೀತುಪಡಿಸಿದೆ. ಜು. 25ರ ಶುಕ್ರವಾರ ತೆರೆಕಂಡಿದ್ದ ಸಿನೆಮಾ ಓಟ ರವಿವಾರವೂ ಭರ್ಜರಿಯಾಗಿ ಪ್ರದರ್ಶನ ಕಂಡಿದೆ.
ರಾಜ್ಯದ ಬಹುತೇಕ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಗಳಲ್ಲಿ “ಸು ಫ್ರಮ್ ಸೋ’ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಈ ಮೂಲಕ ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ’ ಮತ್ತೆ ಹೊಸ ಆಶಾಕಿರಣವಾಗಿದೆ.
ಆರಂಭದಲ್ಲಿ ಕೆಲವೇ ಶೋಗಳ ಮೂಲಕ ತೆರೆಕಂಡ ಚಿತ್ರ ರವಿವಾರ ರಾಜ್ಯಾದ್ಯಂತ 750ಕ್ಕೂ ಹೆಚ್ಚು ಶೋಗಳ ಮೂಲಕ ಪ್ರದರ್ಶನ ಕಂಡದ್ದು ವಿಶೇಷ. ಸಾಮಾನ್ಯವಾಗಿ ಸ್ಟಾರ್ ಸಿನೆಮಾ ಮಾತ್ರ ಶೋ ಮುಂಜಾನೆಯೇ ಆರಂಭವಾಗುತ್ತದೆ. ಅದನ್ನೀಗ “ಸು ಫ್ರಮ್ ಸೋ’ ಸುಳ್ಳಾಗಿಸಿದ್ದು, ಏಕ ಪರದೆ ಚಿತ್ರಮಂದಿರಗಳು ಬೆಳಗ್ಗೆ 8 ಗಂಟೆಗೆ ಶೋ ಆರಂಭಿಸಿದರೆ, ಅನೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6 ಗಂಟೆಗೇ ಪ್ರದರ್ಶನ ಆರಂಭವಾಗಿದೆ.
“ಸು ಫ್ರಮ್ ಸೋ’ ಚಿತ್ರದ ಗೆಲುವು ಈಗ ಉತ್ತರ ಭಾರತದತ್ತ ದಾಪುಗಾಲು ಹಾಕುವಂತೆ ಮಾಡಿದೆ. ಅನಿಲ್ ತಡಾನಿ ಒಡೆತನದ ಬಾಲಿವುಡ್‌ನ ಖ್ಯಾತ ವಿತರಣ ಸಂಸ್ಥೆಯಾದ “ಎಎ ಫಿಲಂಸ್’ ಚಿತ್ರದ ಉತ್ತರ ಭಾರತದ ವಿತರಣೆಯ ಹಕ್ಕನ್ನು ಪಡೆದಿದೆ. ಪಿಎಚ್‌ಎಫ್ ಎಂಬ ಸಂಸ್ಥೆಯೊಂದು ಆ. 1ರಿಂದ ಚಿತ್ರವನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಕನ್ನಡ ಚಿತ್ರರಂಗಕ್ಕೆ ಬರುವ ಅನೇಕ ತಂಡಗಳು ಹೊಸ ಹೊಸ ದಾರಿಯನ್ನು ಪರಿಚಯಿಸಿವೆ. ಅದರಲ್ಲಿ ಈ ಚಿತ್ರ ಕೂಡ ಒಂದು. ಇಲ್ಲಿ ನಟಿಸಿದ ಪ್ರತಿಯೊಬ್ಬರೂ ಹೊಸಬರು. ಇಂತಹ ಇನ್ನಷ್ಟು ಗೆಲುವು ಕನ್ನಡ ಚಿತ್ರರಂಗಕ್ಕೆ ಸಿಕ್ಕರೆ ಮತ್ತೆ ಥಿಯೇಟರ್‌ಗಳಿಗೆ ಜನ ಬಂದೇ ಬರುತ್ತಾರೆ.
ಸಿನೆಮಾ ವರ್ಕ್ ಆಗಬೇಕಾದರೆ ಒಂದೋ ಕಾಂತಾರ ಅಥವಾ ಕೆಜಿಎಫ್ ತರಹ ಮಾಡ ಬೇಕು. ಇಲ್ಲವಾದರೆ ಜನ ನೋಡುವುದಿಲ್ಲ ಎಂಬ ಭಾವ ನಮ್ಮಲ್ಲೂ ಇತ್ತು. ಅದಕ್ಕೆ ಪೂರಕವಾಗಿ ನಮ್ಮ ಬಳಿ ಬರುವ ಜನರು ಕೂಡ ಅದನ್ನೇ ಹೇಳುತ್ತಿದ್ದರು. ಸಿನೆಮಾ ವನ್ನು ದೊಡ್ಡದು, ಚಿಕ್ಕದು ಮಾಡುವುದು ಜನ ಎಂಬುದು ಮತ್ತೆ ಸಾಬೀತಾಗಿದೆ.
‘ಸು ಫ್ರಮ್ ಸೋ’ ಗೆದ್ದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿಗೆ ಪ್ರೀತಿಯ ಸಂದೇಶ ಕೊಟ್ಟ ರಿಷಬ್
ಪ್ರತಿಯೊಬ್ಬ ಕಲಾವಿದನ ಅಭಿನಯವೂ ಗಮನ ಸೆಳೆಯುತ್ತದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ನೀಡಿದ ಇಡೀ ‘ಸು ಫ್ರಮ್ ಸೋ’ ತಂಡಕ್ಕೆ ನನ್ನ ಅಭಿನಂದನೆಗಳು. ಈ ಚಿತ್ರವು ನನ್ನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ‘ಸು ಫ್ರಮ್ ಸೋ’ ಚಿತ್ರದಲ್ಲಿಯೂ ಇರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು’ ಎಂದಿದ್ದಾರೆ ರಿಷಬ್.