ಪುತ್ತೂರು:ನೆಹರುನಗರ ಕಲ್ಲೇಗ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಮಾಲಕ ವಿಶ್ವಾಸ್ (40ವ) ಅವರು ಜು.28ರಂದು ತನ್ನ ವೆಲ್ಡಿಂಗ್ ಶಾಪ್ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕಲ್ಲೇಗ ಗಣೇಶ್ ಬಾಗ್ ನಿವಾಸಿಯಾಗಿದ್ದ ವಿಶ್ವಾಸ್ ಅವರು ಮನೆಯ ಬಳಿಯೇ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಉದ್ಯಮ ನಡೆಸುತ್ತಿದ್ದರು.ಮಧ್ಯಾಹ್ನದ ವೇಳೆ ಅವರು ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಘಟನೆ ಕುರಿತು ಮೃತರ ಪತ್ನಿ ದಿವ್ಯ ಯಾನವಿ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ಪತ್ನಿ ದಿವ್ಯಾ ಯಾನವಿ, ಪುತ್ರಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.