ಪುತ್ತೂರು: ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ, ಪುಣ್ಯಕ್ಷೇತ್ರ – ಬೆಂದ್ರ್ ತೀರ್ಥ , ಇರ್ದೆಯಲ್ಲಿ ತೀರ್ಥ ಅಮಾವಾಸ್ಯೆಯ ಪ್ರಯುಕ್ತ ಪುಣ್ಯ ತೀರ್ಥಸ್ನಾನ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಪುಟ್ಟ ಗ್ರಾಮ ಇರ್ದೆಯಲ್ಲಿ ಇದೊಂದು ಪ್ರಕೃತಿ ಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಅಲ್ಲದೆ ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು ಸ್ಥಳೀಯವಾಗಿ ಸಾಕಷ್ಟು ಜನರಿಂದ ಮತ್ತು ಹೊಸದಾಗಿ ವಿವಾಹ ಆದವರು ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿರುತ್ತದೆ.
ಆದಾಗ್ಯೂ ಈ ಬಿಸಿ ನೀರಿನ ಚಿಲುಮೆ ಅಥವಾ ತೀರ್ಥವು ದಕ್ಷಿಣ ಭಾರತದ ಒಂದು ವಿಸ್ಮಯವೆಂದೇ ಹೇಳಬಹುದು. ಇದರ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಸಂಸ್ಥೆಯು ಇದನ್ನು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಕರೆಯಲ್ಪಟ್ಟಿದೆ. ಹಾಗೇನೇ ಪ್ರತೀ ವರ್ಷದ ತೀರ್ಥ ಅಮಾವಾಸ್ಯೆ ದಿನ ಅಂದರೆ ಈ ಬಾರಿ ಆಗಸ್ಟ್ 23 ರ ಶನಿವಾರ ಪುಣ್ಯ ತೀರ್ಥ ಸ್ನಾನ ನಡೆಯಲಿದೆ. ಭಗತ್ ಸಿಂಗ್ ಸೇವಾ ಯುವ ಶಕ್ತಿ ಉಪ್ಪಳಿಗೆ , ಸರ್ವರಿಗೂ ಆದರದ ಸ್ವಾಗತವನ್ನು ಬಯಸಿದ್ದಾರೆ.
























