ಬಂದಾರು :ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಗಸ್ಟ್ 08 ರಂದು ವರಮಹಾಲಕ್ಷ್ಮೀ ಪೂಜೆಯು ನೆರವೇರಿತು. ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ ಹಾಗೂ ಮಧುಸೂಧನ ಹೊಳ್ಳ ರವರು ಪೂಜೆ ನೆರವೇರಿಸಿದರು.
ಪೂಜೆಯ ಸಂದರ್ಭದಲ್ಲಿ ಉಜಿರೆ ಅಮೃತ್ ಸಿಲ್ಕ್ಸ್, ಟೆಕ್ಸ್ಟೈಲ್ & ರೆಡಿಮೇಡ್ಸ್ ಮಾಲಕರಾದ ಪ್ರಶಾಂತ್ ಜೈನ್, ಹಾಗೂ ಆದಿತ್ಯ ಕ್ಲೋತ್ ಸೆಂಟರ್ ಮಾಲಕರಾದ ವಿಶ್ವನಾಥ ಗೌಡ ಇವರುಗಳು ವರಮಹಾಲಕ್ಷ್ಮೀ ಪೂಜೆಯ ವೃತಧಾರಿಗಳಿಗೆ ರವಿಕೆ ನೀಡಿರುತ್ತಾರೆ,ಮಹಿಳಾ ಸಮಿತಿಯ ಸದಸ್ಯರು ಅಪಾರ ಸಂಖ್ಯೆಯಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು.ನೆರೆದವರಿಗೆಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ
ಆಡಳಿತ ಮಂಡಳಿಯ, ಹಾಗೂ ಮಹಿಳಾ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರು, ಭಕ್ತಭಿಮಾನಿಗಳು ಉಪಸ್ಥಿರಿದ್ದರು.
























