ಕೋಡಿಂಬಾಡಿ: ಯುವಶಕ್ತಿ ಗೆಳೆಯರ ಬಳಗ(ರಿ.) ವಿನಾಯಕ ನಗರ-ಕೋಡಿಂಬಾಡಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ 26 ನೇ ವರ್ಷದ ಮೊಸರು ಕುಡಿಕೆ ಉತ್ಸವವು ದಿನಾಂಕ 17-08-2025 ನೇ ಆದಿತ್ಯವಾರ ಕೋಡಿಂಬಾಡಿಯ ಚತುರ್ಥಿ ರಂಗಮಂದಿರ ದಲ್ಲಿ ಜರುಗಲಿದೆ.
ಯವಶಕ್ತಿ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ರಮೇಶ್ ನಾಯಕ್ ನಿಡ್ಯ ಇವರ ಅಧ್ಯಕ್ಷತೆಯಲ್ಲಿ ಆಗಸ್ಟ್ 17 ರ ಬೆಳಿಗ್ಗೆ 9:30 ಕ್ಕೆ ಕಾರ್ಯಕ್ರಮವು ಅತಿಥಿಗಳಾದ ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಕೋಡಿಂಬಾಡಿ ಶಾಲೆಯ ಮುಖ್ಯ ಗುರುಗಳಾದ ಬಾಲಕೃಷ್ಣ ಎನ್,ಕೋಡಿಂಬಾಡಿ ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶೇಖರ ಪೂಜಾರಿ ಜೇಡರಪಾಲು-ನಿಡ್ಯ ಮತ್ತು ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ(ನಿ.) ಮಂಗಳೂರು ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಸಾಯಿ ಪ್ರಸಾದ್ ಶರ್ಮಾ ಮಠದಬೆಟ್ಟು ಇವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ನಂತರ ಬೆಳಿಗ್ಗೆ 10:30 ರಿಂದ 6 ವರ್ಷದಿಂದ ಕೆಳಗಿನ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ,ಹಾಗೂ ವಿವಿಧ ವಯೋಮಾನದ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಸಂಜೆ ಗಂಟೆ 5:00 ಕ್ಕೆ ಕೋಡಿಂಬಾಡಿ ಹಾಲು ಉದ್ಫಾದಕರ ಸಹಕಾರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರಿನ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ ಪೂಜಾರಿ ಕಾಂತಳಿಕೆ,ಪುತ್ತೂರು ಕೆಮ್ಮಾಯಿಯ ವಿಘ್ನೇಶ್ ಮಡ್ಡ್ & ಸಿಮೆಂಟ್ ಪ್ರೋಡಕ್ಟ್ಸ್ ನ ಮಾಲೀಕರಾದ ಚಿದಾನಂದ ರೈ ,ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು,ಮತ್ತು ಕೋಡಿಂಬಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಶಾಧಿಕಾರಿಗಳಾದ ಭರತ್ ಗೌಡ ನಿಡ್ಯ ಇವರುಗಳು ಭಾಗವಹಿಸಲಿದ್ಧಾರೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಸಾರ್ವಜನಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭಕ್ಕೆ ಮೆರುಗು ನೀಡಬೇಕಾಗಿ ಸಂಘದ ಅಧ್ಯಕ್ಷರಾದ ದಯಾನಂದ ಪೂಜಾರಿ ಪಲ್ಲತ್ತಾರು,ಕಾರ್ಯದರ್ಶಿ ದೀಕ್ಷಿತ್ ಗೌಡ ಎಂ.ಎಲ್, ಕ್ರೀಡಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬರೆಮೇಲು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿರುವರು.

























