ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಬ್ಯಾಂಕ್ ಒಫ್ ಬರೋಡ ಉಪ್ಪಿನಂಗಡಿ ಶಾಖೆ ಇವರ ನೇತೃತ್ವದಲ್ಲಿ, 1 ತಿಂಗಳ ಬ್ರೈಡಲ್ ಮೇಕ್ಅಪ್ ತರಬೇತಿಯ ಸಮಾರೋಪ ಸಮಾರಂಭ ತಣ್ಣೀರು ಪಂಥ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣ ಕಲ್ಲೇರಿ ಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಜ್ಯೋತಿ ರಾಜ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರ ಕೌಶಲ್ಯದ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವ ಉದ್ಯೋಗ ಮಾಡಲು ಮಹಿಳೆಯರಲ್ಲಿ ಛಲ ಇಚ್ಛಾ ಶಕ್ತಿ ಇದ್ದಲ್ಲಿ ಯಾವ ಕೆಲಸ ಕೂಡ ಸುಲಭ ಸಾಧ್ಯ, ಇನ್ನೂ ಹೆಚ್ಚಿನ ಕೌಶಲ್ಯ ಪಡೆದು ಸ್ವ ಉದ್ಯೋಗಕ್ಕೆ ಎಲ್ಲರೂ ಪ್ರಯತ್ನ ಪಡೆಯಿರಿ ಎಂದು ಕರೆ ನೀಡಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ ಬ್ರೈ ಡಲ್ ಮೇಕಪ್ ಗೆ ಇರುವ ಅವಕಾಶ ಗಳ ಬಗ್ಗೆ ತಿಳಿಸಿ ತರಬೇತಿ ನಂತರ ಎಲ್ಲಾ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು. ಬ್ಯಾಂಕ್ ಒಫ್ ಬರೋಡ ಉಪ್ಪಿನಂಗಡಿ ಶಾಖೆಯ ವ್ಯವಸ್ತಾಪಕ ರಾದ ಯಶೋಧ ಇವರು ಬ್ಯಾಂಕ್ ನಲ್ಲಿ ಸ್ವ ಉದ್ಯೋಗ ಕ್ಕೆ ಸಿಗುವ ಸೌಲಭ್ಯ ಗಳ ವಿವರಿಸಿದರು.
ತರಬೇತಿ ಪೂರೈಸಿದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ತಣ್ಣೀರು ಪಂಥ ಪಂಚಾಯತ್ ಅಧ್ಯಕ್ಷರಾದ ಹೇಮಾವತಿ ಮಲ್ದೊಟ್ಟು, ಕರಾಯ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರಾ, ಬ್ರೈಡಲ್ ಮೇಕ್ಅಪ್ ತರಬೇತುದಾರರಾದ ಸಂಧ್ಯಾ ಸಾತ್ವಿಕ್, ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು. ಸುಖಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನಿಶ್ಮಿತ ಸುನಿಲ್ ಸ್ವಾಗತಿಸಿ, ಪ್ರಿಯಾ ಧನ್ಯವಾದ ಗೈದರು. 30 ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
























