ಸುಳ್ಯ: ಸರಕಾರಿ ಪ್ರೌಢಶಾಲೆ ಅಜ್ಜಾವರ, ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರ, ಚೈತ್ರ ಯುವತಿ ಮಂಡಲ (ರಿ)ಅಜ್ಜಾವರ , ಇವುಗಳ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಹಾಗೂ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಅಜ್ಜಾವರದಿಂದ ಮಾವಿನಪಳ್ಳ ತನಕ ನಡೆಯಿತು.
ಧ್ವಜಾರೋಹಣವನ್ನುಆಡಳಿತ ಮೊಕ್ತೇಸರರು,ಶ್ರೀ ಮಹಮ್ಮಾಯಿ ದೇವಸ್ಥಾನ,ಮಾವಿನಪಳ್ಳದ ಕುಶಲ ಇವರು ನಡೆಸಿಕೊಟ್ಟರು.ಶ್ರೀ ರಾಜೇಶ್ ಶೆಟ್ಟಿ, ಮೇನಾಲ ಮಾಜಿ ಅಧ್ಯಕ್ಷರು,ವ್ಯವಸ್ಥಾಪನ ಸಮಿತಿ,ಶ್ರೀ ಶಾಸ್ತಾವೇಶ್ವರ ದೇವಸ್ಥಾನ,ಕರ್ಲಪ್ಪಾಡಿ ಇವರು ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲಾ ಮುಖ್ಯ್ಯೋ ಪಾಧ್ಯಾಯಾರಾದ ಗೋಪಿನಾಥ್ ಮೆತ್ತಡ್ಕ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕ, ಉಪಾಧ್ಯಕ್ಷರಾದ ಸೌಕತ್ ಅಲಿ,ಬಾಳಿಲ ಶಾಲೆ ನಿವೃತ್ತ ಮುಖ್ಯ್ಯೋ ಪಾಧ್ಯಾರಾದ ಯಶೋಧರ,ನಿವೃತ್ತ ದೈಹಿಕ ಶಿಕ್ಷಣಾ ಶಿಕ್ಷಕರು ಶ್ರೀ ಬಾಲಕೃಷ್ಣ ನಾಯ್ಕ್,ಸಂಕೇಶ್ ಪೌo ಡೇಶನ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಪದ್ಮನಾಭ ಅತ್ಯಾಡಿ,ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಉಪಾಧ್ಯಕ್ಷರಾದ ಮಾಲತಿ, ಗೀತಾoಜಲಿ, ಯುವಕ ಮಂಡಲ ಉಪಾಧ್ಯಕ್ಷರಾದ ಸೀತಾರಾಮ, ಅರುಣ್ ಕುಮಾರ್,ಕಾರ್ಯದರ್ಶಿ ನವೀನ್,ಕ್ರೀಡಾಕಾರ್ಯದರ್ಶಿ ಗೌರೀಶ್, ಅನಿಲ್,ಕೋಶಾಧಿಕಾರಿ ಲೋಕೇಶ್,ಸೂರ್ಯಕುಮಾರ್,
ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಚನಿಯ ಕಲ್ತಡ್ಕ ಹಾಗೂ ಎಕದಂತ ಸಮಿತಿ ಅಧ್ಯಕ್ಷ ರಾಜೇಶ್ ಉಪಸ್ಥಿತರಿದ್ದರು.ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಯ ಶಿಕ್ಷಕವೃಂದ,ಶಾಲಾ ಮಕ್ಕಳು,ಎಸ್ ಡಿ ಎಂ ಸಿ ಸದಸ್ಯರು,ಮಾವಿನಪ್ಪಳ್ಳದ ಸಮಸ್ತ ಜನರು,ವಿನಯ್ ನಾರಲು, ಜಯಲಕ್ಷ್ಮಿ,ವಿನೋದ್, ಗಿರಿಧರ, ಯತೀಶ್, ರವಿ ನಾರಲು, ವಸಂತಿ, ಶಿವಾನಂದ, ಸುಂದರ, ಪವಿತ್ರ, ಮಲ್ಲಿಕಾ, ಗೀತಾ, ಅಪ್ಪಯ್ಯ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಯುವಕ ಮಂಡಲ ಅಧ್ಯಕ್ಷರು ಗುರುರಾಜ್ ಸ್ವಾಗತಿಸಿ, ಅಶೋಕ್ ವಂದಿಸಿದರು.