ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿಗೆ ಕೋರ್ಟ್ ಜಾಮೀನು ನೀಡಿದೆ. ಧರ್ಮಸ್ಥಳದ ಕುರಿತು ಮಾಡಿದ ಒಂದೇ ಒಂದು ವಿಡಿಯೋದಿಂದ ಯುಟ್ಯೂಬರ್ ಸಮೀರ್ ಎಂಡಿ ಸ್ಟಾರ್ ಆಗಿ ಬದಲಾಗಿದ್ದರು. ಅದೇ ವಿಡಿಯೋದಿಂದ ಸಮೀರ್ ಎಂಡಿಗೆ ಬಂಧನದ ಭೀತಿ ಎದುರಿಸುತ್ತಿದ್ದ. ಯಾವಾಗ ಪೊಲೀಸರು ಅರೆಸ್ಟ್ ಮಾಡಲು ಮುಂದಾದ್ದರೋ ಸಮೀರ್ ಕೂಡಲೇ ಮಂಗಳೂರು ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು (ಆಗಸ್ಟ್ 21) ಈ ಅರ್ಜಿ ವಿಚಾರಣೆ ನಡೆಸಿದ ಮಂಗಳೂರು ಕೋರ್ಟ್, ಸಮೀರ್ ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಸಮೀರ್ ಬಂಧನದಿಂದ ಪಾರಾಗಿದ್ದಾರೆ.
ಸಾವಿರ ಜನರನ್ನು ಅತ್ಯಚಾರ ಮಾಡಿ ಕೊಲೆ ಮಾಡಲಾಗಿದೆ. ಇದನ್ನು ಕೇಳಿದ್ರೆ ನಿಮ್ಮ ರಕ್ತ ಕುದಿಯಲ್ವಾ? ಕರ್ನಾಟಕದ ಮೂಲೆ ಮೂಲೆಯಿಂದ ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಎಂದು ದೊಂಬಿಗೆ ಮಾಡುವ ಉದ್ದೇಶದಿಂದ ಜನರಿಗೆ ಉದ್ರೇಕಗೊಳಿಸಿದ ಆರೋಪ. ಸಾರ್ವಜನಿಕ ಕೇಡಿಗೆ ಕಾರಣವಾಗುವ ಸಾಮಾಜಿಕ ನೆಮ್ಮದಿಯ ಹಾಳಾಗುವ ಉದ್ದೇಶವುಳ್ಳ ವಿಡಿಯೋ ಹೇಳಿಕೆ ಆರೋಪ ಹಿನ್ನೆಲೆಯಲ್ಲಿ BNS 240, 192, 353(1)(b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂಡಿಯನ್ನ ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟದಲ್ಲಿರೋ ನಿವಾಸಕ್ಕೆ ಪೊಲೀಸರು ಎಂಟ್ರಿ ಕೊಡ್ತಿದ್ದಂತೆ ಸಮೀರ್ ಮನೆಯಿಂದ ಪರಾರಿ ಆಗಿದ್ದ. ಅಲ್ಲದೇ ಇದರ ನಡುವೆ ಬಂಧನದ ಭೀತಿ ಬೆನ್ನಲ್ಲೇ ಸಮೀರ್ ಎಂ.ಡಿ ಕೋರ್ಟ್ ಮೊರೆ ಹೋಗಿದ್ದ. ಆಗಸ್ಟ್ 19ರಂದೇ ಸಮೀರ್ ಎಂ.ಡಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.