ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ನವೆಂಬರ್ 29 ಮತ್ತು 30ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಮತ್ತು ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿ ಶ್ರೀ ಸಾಧ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು.
ಮುಕ್ರುಂಪಾಡಿ ಸುಭದ್ರ ಕಲಾಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಧ್ವಿ, “ಸಾಧನೆಯ ಮೂಲಕ ಯಾವುದೇ ಗುರಿಯನ್ನು ಮುಟ್ಟಬಹುದು ಎಂಬುದನ್ನು ಕಳೆದ ಎರಡು ವರ್ಷಗಳ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಕಂಡಿದ್ದೇವೆ. ಜಗತ್ತನ್ನೇ ಪರಿವರ್ತಿಸುವ ಶಕ್ತಿ ನಮ್ಮಲ್ಲಿದೆ ಎಂಬುದಕ್ಕೆ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಸೇರಿದ ಜನಸಾಗರವೇ ಸಾಕ್ಷಿಯಾಗಿದೆ” ಎಂದು ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿ ಹೇಳಿದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕರಆದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ,ಹಿಂದೂ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುವಂತೆ ಮಾಡುವ ಯೋಚನೆಯಲ್ಲಿರುವ ಮತಾಂಧ ಶಕ್ತಿಗಳು ಸರಕಾರ ಪ್ರಾಯೋಜಿತವಾಗಿ ಪ್ರಯತ್ನಿಸಿದರೆ ಸಮಾಜದಲ್ಲಿನ ಸಾವಿರಾರು ಸವಾಲುಗಳಿಗೆ ಉತ್ತರವಾಗಿ ಹಿಂದವಿ ಸಾಮ್ರಾಜೋತ್ಸವ ಸಂಪನ್ನಗೊಳ್ಳಲಿದೆ. ಈ ನಿಟ್ಟಿನಲ್ಲಿ ನ.29ಕ್ಕೆ ಸಂಜೆ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ತ್ರಿನೇತ್ರ ಮಂಟಪಕ್ಕೆ ಸ್ವಾಗತಿಸಿದ ಬಳಿಕ ಹಿಂದವಿ ಸಾಮ್ರಾಜ್ಯೋತ್ಸವ ನಡೆಯಲಿದೆ.12 ಯತಿಗಳು ಆಶೀರ್ವಚನ ನೀಡಲಿದ್ದಾರೆ. ಇದು ಹಿಂದು ಸಮಾಜಕ ಸಮಾಜಕ್ಕೆ ಶಕ್ತಿ ಮತ್ತು ಮುಂದಿನ ಹೋರಾಟಕ್ಕೆ ದಿಕ್ಕೂಚಿ ಆಗಲಿದೆ. ಅದೇ ದಿನ ಬೆಳಗ್ಗೆ ಭಜನಾ ಸಂಕೀರ್ತನೆ, ನ.30ಕ್ಕೆ ಮದ್ಯಾಹ್ನ ಭಜನೋತ್ಸವ ನಡೆಯಲಿದೆ.ಸುಮಾರು 100 ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಸಾಮೂಹಿಕ ವಿವಾಹಕ್ಕೆ 17 ಜೋಡಿಗಳು ನೋಂದಣಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ನರಸಿಂಹ ಪ್ರಸಾದ್ ವಹಿಸಿದ್ದರು. ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷ ಸಿದ್ದನಾಥ್ ಕಂದಾರೆ, ಕಾರ್ಯಾಧ್ಯಕ್ಷ ಪ್ರಾಣೇಶ್, ಕೋಶಾಧಿಕಾರಿ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ ತಿಂಗಳಾಡಿ, ಉಮೇಶ್ ಕೋಡಿಬೈಲು, ವೆಂಕಟ್ರಮಣ ಕಡಬ, ಭೀಮ ಭಟ್, ಅನಿಲ್ ತೆಂಕಿಲ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರೇಮರಾಜ್, ಕೋಶಾಧಿಕಾರಿ ರೂಪೇಶ್ ನಾಯಕ್, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಐವರು ಗೌರವಾಧ್ಯಕ್ಷರ ಘೋಷಣೆ : 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಸಮಿತಿಗೆ ಐವರು ಗೌರವಾಧ್ಯಕ್ಷರುಗಳ ಸಹಿತ ವಿವಿಧ ಉಪಸಮಿತಿಗಳ ಅಧ್ಯಕ್ಷರು, ಸಂಚಾಲಕರನ್ನು ಅರುಣ್ ಕುಮಾರ್ ಪುತ್ತಿಲ ಅವರು ಘೋಷಣೆ ಮಾಡಿದರು.
ಸ್ವರ್ಣೋದ್ಯಮಿಗಳಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾಯ, ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ, ಮಾನಕ ಜ್ಯುವೆಲ್ಸ್‌ನ ಮಾಲಕ ಸಿದ್ದನಾಥ ಯಸ್. ಕೆ., ಮೈಸೂರಿನ ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕ ದಿವಾಕರ್ ದಾಸ್ ನೇರ್ಲಾಜೆ ಹಾಗೂ ರಾಧಾಸ್ ಟೆಕ್ಸ್ ಟೈಲ್ಸ್‌ನ ಮಾಲಕ ಗಣೇಶ್ ಕಾಮತ್ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷರುಗಳಾಗಿದ್ದಾರೆ.ಭೀಮಯ್ಯ ಭಟ್ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಘೋಷಣೆ ಮಾಡಿದರು