ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿಐ ಪುತ್ತೂರು ಘಟಕದ ವತಿಯಿಂದ ದಿನಾಂಕ ಸೆಪ್ಟೆಂಬರ್ 2025 ರಿಂದ 15 ಸೆಪ್ಟೆಂಬರ್ 2025 ರವರೆಗೆ “ಜೆಸಿ ಸಪ್ತಾಹ 2025” ನಡೆಯಲಿದ್ದು ಸೆಪ್ಟೆಂಬರ್ 9 ರಂದು ಧ್ವಜಾರೋಹಣ ಹಾಗೂ ಸಪ್ತಾಹದ ಉದ್ಘಾಟನೆ ನಡೆದು ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಎಂದು ಉದ್ಘಾಟನಾ ಕಾರ್ಯಕ್ರಮದ ಬಳಿಕ ಪತ್ರಿಕಾ ಭವನ ಪುತ್ತೂರು ದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಜೇಸಿ ಭಾಗ್ಯ ಶ್ ರೈ ತಿಳಿಸಿದರು.
ಎರಡನೇ ದಿನವಾದ ಸೆಪ್ಟೆಂಬರ್ 10 ಬುಧವಾರದಂದು ವೆಬ್ ಪೀಪಲ್ ಸಂಸ್ಥೆ ಪುತ್ತೂರು ಇಲ್ಲಿ “ಜೆಸಿಯೇತರ ಯುವ ಸಮುದಾಯಕ್ಕೆ ಜೆಸಿ ಸೇರಲು ಮಾಹಿತಿ ಕಾರ್ಯಾಗಾರ ( Proud to be a Jaycee)” ಹಾಗೂ ಮಧ್ಯಾಹ್ನದ ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಪುತ್ತೂರು ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ “ಉದ್ಯೋಗ ಕೌಶಲ್ಯ ತರಬೇತಿ”ಯು ನಡೆಯಲಿರುವುದು.
ಮೂರನೇ ದಿನವಾದ ಸೆಪ್ಟೆಂಬರ್ 11 ಗುರುವಾರದಂದು ವಿದ್ಯಾಮಾತಾ ಅಕಾಡೆಮಿ ಇಲ್ಲಿ ಅಖಿಲ ಭಾರತೀಯ ಮೊಬೈಲ್ ಮಾರಾಟಗಾರರ ಸಂಘದ ಪುತ್ತೂರು ಘಟಕದ ಸಹಯೋಗದಲ್ಲಿ “ಆರೋಗ್ಯ ತಪಾಸಣಾ ಶಿಬಿರ’ವು ನಡೆಯಲಿದೆ ಹಾಗೂ ಮಧ್ಯಾಹ್ನದ ನಂತರ ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಪುತ್ತೂರು ಇಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವು ನಡೆಯಲಿದೆ.
ನಾಲ್ಕನೇ ದಿನವಾದ ಸೆಪ್ಟೆಂಬರ್ 12 ಶುಕ್ರವಾರದಂದು ಸಚ್ಚಿದಾನಂದ ಸಭಾಭವನ ದರ್ಬೆ ಪುತ್ತೂರು ಇಲ್ಲಿ “ವ್ಯವಹಾರ ನೆಟ್ವರ್ಕಿಂಗ್ ಸಭೆ” ನಡೆದು ಬಳಿಕ ಲಷ್ ಫ್ಯಾಷನ್ ಇನ್ಸ್‌ಡ್ ಜಿ.ಎಲ್. ಒನ್ ಮಾಲ್ ಪುತ್ತೂರು ಇಲ್ಲಿ “ನಾಮಫಲಕ ದೊಂದಿಗೆ ವ್ಯವಹಾರ ದಿನ” ಕಾರ್ಯಕ್ರಮವು ನಡೆಯಲಿದೆ.
ಐದನೇ ದಿನವಾದ ಸೆಪ್ಟೆಂಬರ್ 13 ಶನಿವಾರದಂದು ಸುದಾನ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿ “ಕರ್ತವ್ಯಕ್ಕಾಗಿ ಧ್ವನಿ – ಮಾನವ ಕರ್ತವ್ಯ ಮತ್ತು ಮನವಿ ದಿನ” ಕಾರ್ಯಕ್ರಮವು ನಡೆಯಲಿದೆ
ಆರನೇ ದಿನವಾದ ಸೆಪ್ಟೆಂಬರ್ 14 ಆದಿತ್ಯವಾರದಂದು ವಿದ್ಯಾಮಾತಾ ಅಕಾಡೆಮಿಯಿಂದ ಬೋಳ್ವಾರ್ ಪುತ್ತೂರು ವರೆಗೆ “ಆಮಂತ್ರಣ ದಿನ – ಬನ್ನಿ ಜೆಸಿಐ ಸೇರಿ” ನಡಿಗೆ ಜಾಥಾ ನಡೆಯಲಿದೆ. 2 ” ” (The Grand Finish – Gratitude & Celebration day) ಕಾರ್ಯಕ್ರಮವು ವಿದ್ಯಮಾತಾ ಅಕಾಡೆಮಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ” ಪುದ್ವಾರ್ ” ತುಳುನಾಡಿನ ಅಪ್ಪಟ ಸಾಂಪ್ರದಾಯಿಕ ಖಾದ್ಯಗಳ ಭೋಜನದೊಂದಿಗೆ ಸಪ್ತಾಹವು ಸಂಪನ್ನಗೊಳ್ಳಲಿದೆ ಎಂದು ಜೆಸಿಐ ಪುತ್ತೂರು ಘಟಕದ ಅಧ್ಯಕ್ಷರಾದ ಭಾಗೇಶ್ ರೈ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಜೇಸಿ ಮೋಹನ್, ಮನೋಹರ್ ಪಾಟಲಿ, ಆಶಾ ಮೋಹನ್, ರುಕ್ಮಯ್ಯ ಉಪಸ್ಥಿತರಿದ್ದರು.