ಇತ್ತೀಚೆಗಷ್ಟೇ ‘ಇದ್ರೆ ನೆಮ್ದಿಯಾಗಿರ್ಬೇಕು’ ಹಾಡು ಹಾಡಿದ್ದ ನಟ ದರ್ಶನ್ ಈಗ ಕೋರ್ಟ್ ನಲ್ಲಿ ನಂಗೆ ವಿಷಬೇಕು ಎಂದು ಕೇಳಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ಗೆ ಬಂಧಿಖಾನೆ ನಿತ್ಯ ನರಕವಾಗಿದೆ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಿದ್ದಕ್ಕೆ ಸುಪ್ರೀ ಕೋರ್ಟ್ ಛೀಮಾರಿ ಹಾಕಿತ್ತು.
ಈ ಬಾರಿ ಜೈಲಾಧಿಕಾರಿಗಳು ದರ್ಶನ್ಗೆ ಯಾವುದೇ ಸೌಲಭ್ಯ ನೀಡಿಲ್ಲ. ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ನಡೆಸಿಕೊಳ್ತಿದೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್, ಈಗ ಬ್ಯಾರಕ್ನಲ್ಲಿ ಏಕಾಂಗಿಯಾಗಿ ವಿಲವಿಲ ಒದ್ದಾಡ್ತಿದ್ದಾರೆ.
ಕೋಪದ ಕೈಗೆ ಬುದ್ದಿ ಕೊಟ್ಟ ತಪ್ಪಿಗೆ ನಟ ದರ್ಶನ್ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ. ಪರಪ್ಪನ ಅಗ್ರಹಾರಲ್ಲಿ ಬೆಡ್ ಶೀಟ್ ಕೂಡ ಕೊಡ್ತಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಜೈಲೂಟ ತಿನ್ನಲು ಆಗದೆ, ನಿದ್ರೆ ಇಲ್ಲದೆ ದರ್ಶನ್ ಪರದಾಡ್ತಿದ್ದು ಸೊರಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಕೆಲ ದಿನದಿಂದ ಜೈಲಿನಲ್ಲಿರುವ ನಟ ದರ್ಶನ್ ತೂಕದಲ್ಲೂ ಇಳಿಕೆಯಾಗಿದೆಯಂತೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಇಡಲಾಗಿದೆ. ವಿಶೇಷ ಸವಲತ್ತು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿನ ಕಠಿಣ ನಿಯಮಗಳಿಂದ ಅವರಿಗೆ ನರಕಯಾತನೆ ಉಂಟಾಗುತ್ತಿದೆ. ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ವಿಡಿಯೋ ಕಾಲ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಾದರು. ಆಗ ಅವರು, ಮೊದಲಿಗೆ ಕೈ ಎತ್ತಿ ‘ಒಂದು ಮನವಿ ಇದೆ’ ಎಂದು ಹೇಳಿದ್ದಾರೆ. ಮನವಿ ಏನು ಎಂದು ಕೇಳಿದಾಗ, ದರ್ಶನ್ ಕೊಟ್ಟ ಉತ್ತರ ಜಡ್ಜ್ಗೆ ಶಾಕ್ ತಂದಿತು.
‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್ನಿಂದಲೇ ಈ ಆದೇಶ ನೀಡಬೇಕು’ ಎಂದು ದರ್ಶನ್ ಮನವಿ ಮಾಡಿದ್ದಾರೆ. ಆಗ ಜಡ್ಜ್ಜ್ ‘ಹಾಗೆಲ್ಲಾ ನೀವು ಕೇಳುವಂತಿಲ್ಲ’ ಎಂದು ಹೇಳಿದ್ದಾರೆ.
‘ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ’ ಎಂದು ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ದಾರೆ.
ವಾರಕ್ಕೆ ಎರಡು ಬಾರಿ ಮಾತ್ರ ಕುಟುಂಬಸ್ಥರ ಭೇಟಿಗೆ ನಟ ದರ್ಶನ್ ಅವಕಾಶ ನೀಡಿದ್ದಾರೆ. ಆದ್ರೂ ದರ್ಶನ್ ಕುಟುಂಬಸ್ಥರು ಭೇಟಿ ನೀಡ್ತಿಲ್ಲ. ಆಗೊಮ್ಮೆ-ಈಗೊಮ್ಮೆ ಪತ್ನಿ ವಿಜಯಲಕ್ಷ್ಮಿ ಬಂದು ಹೋಗ್ತಿದ್ದಾರೆ. ದರ್ಶನ್ ಮಗ, ತಾಯಿ, ತಮ್ಮ ಯಾರು ಕೂಡ ಇನ್ನು ದರ್ಶನ್ ನೋಡಲು ಬಂದಿಲ್ಲ ಎನ್ನಲಾಗ್ತಿದೆ.