ನಮ್ಮ ಬ್ಯಾಂಕಿನ 116ನೇ ವರ್ಷದ ಮಹಾಸಭೆ ದಿನಾಂಕ 14-09-2025 ಆದಿತ್ಯವಾರದಂದು ಜರುಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಪತ್ರಿಕಾ ಗೋಷ್ಠಿ ನಡೆಸುತ್ತಿದ್ದು, 2024-25 ರ ಆರ್ಥಿಕ ವರ್ಷದ ಪಕ್ಷಿ ನೋಟವನ್ನು ನಿಮ್ಮ ಮುಂದಿಡಲು ಬಯಸುತ್ತೇವೆ.
2024-25 ರಲ್ಲಿ ನಮ್ಮ ಬ್ಯಾಂಕಿನ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸಾಧಿಸಿದ್ದೇವೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.
1. ವ್ಯವಹಾರದಲ್ಲಿ ಗಣನೀಯ ಹೆಚ್ಚಳ ಸಾಧಿಸಿದ್ದು ಒಟ್ಟು ಠೇವಣಿ ರೂ. 74.87 ಕೋಟಿ, ಒಟ್ಟು ಸಾಲ ರೂ. 51.39 ಕೋಟಿಗಳಾಗಿದ್ದು ಒಟ್ಟು ವ್ಯವಹಾರ ರೂ. 126.26 ಕೋಟಿ ದಾಟಿದೆ. ಈ ವರ್ಷದ ನಿವ್ವಳ ಲಾಭರೂ. 1.04 ಕೋಟಿ ಆಗಿರುತ್ತದೆ.
2. RBI ನಿಯಮಾನುಸಾರ ಬಲಿಷ್ಠ ಕೋ ಓಪರೇಟಿವ್ ಬ್ಯಾಂಕ್ ಎನಿಸಿಕೊಳ್ಳಲು ನಿವ್ವಳ ಅನುತ್ಪಾದಿತ ಆಸ್ತಿ ಶೇಕಡಾ 3 ಕ್ಕಿಂತ ಕಡಿಮೆ ಇರಬೇಕು. ಆದರೆ ಸತತ ಎರಡನೇ ವರ್ಷ ಕೂಡಾ ನಮ್ಮ ಬ್ಯಾಂಕಿನ ನಿವ್ವಳ ಅನುತ್ಪಾದಿತ ಆಸ್ತಿ ಶೇಕಡಾ ಒಂದಕ್ಕಿಂತಲೂ ಕಡಿಮೆ ಇದೆ.
3. ಶಾಸನ ಬದ್ಧ ಲೆಕ್ಕ ಪರಿಶೋದನೆಯಲ್ಲಿ ನಮ್ಮ ಬ್ಯಾಂಕ್ ಈ ವರ್ಷ ಕೂಡಾ ‘A’ ಗ್ರೇಡ್ ಬಂದಿರುತ್ತದೆ.
4. ಸತತ ಎರಡನೇ ವರ್ಷ ನಮ್ಮ ಬ್ಯಾಂಕು ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ “ಆರ್ಥಿಕವಾಗಿ ಬಲಿಷ್ಠ ಹಾಗೂ ಉತ್ತಮ ಆಡಳಿತದ ಬ್ಯಾಂಕ್” (Financially Sound and well Managed Bank) ಆಗಿ ಹೊರ ಹೊಮ್ಮಿದ್ದು, ಈ ಬಗ್ಗೆ ಸರ್ಟಿಫಿಕೇಟ್ ಪಡೆದು ಕೊಳ್ಳಲಾಗಿದೆ.
5. ಭಾರತೀಯ ರಿಸರ್ವ್ ಬ್ಯಾಂಕು ಎಲ್ಲ ಬ್ಯಾಂಕುಗಳಿಗೆ CKYC, CIBIL, ಮತ್ತು CERSAI Registration ಕಡ್ಡಾಯಗೊಳಿಸಿದ್ದು, ವರದಿ ವರ್ಷದಲ್ಲಿ ನಾವು ಇದೆಲ್ಲವನ್ನೂ ಪೂರ್ತಿಗೊಳಿಸಿದ್ದೇವೆ ಎಂದು ತಿಳಿಸಲು ಸಂತೋಷಪಡುತ್ತೇನೆ.
6. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದಂತೆ IS Audit, Cyber Security Auditಗಳನ್ನು certified authority ಯಿಂದ ಮಾಡಿಸಲಾಗಿದೆ. ಎಲ್ಲ policy ಗಳನ್ನು ಅಳವಡಿಸಿಕೊಳ್ಳಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದೆ.
7. ಬ್ಯಾಂಕಿನಲ್ಲಿ ಶಾಸನ ಬದ್ಧ ಲೆಕ್ಕ ಪರಿಶೋಧನೆ ಮಾತ್ರವಲ್ಲದೆ, ಪ್ರತಿ ತಿಂಗಳೂ ಆಂತರಿಕ ಲೆಕ್ಕ ಪರಿಶೋದನೆಯನ್ನು ಚಾರ್ಟಡ್್ರ ಅಕೌಂಟೆಂಟ್ ರಿಂದಲೇ ಮಾಡಿಸುತ್ತಿದ್ದು, ತಪ್ಪುಗಳು ಕಂಡುಬಂದಲ್ಲಿ ಸರಿಪಡಿಸಿ Audit Committee ಯಿಂದ ಅನುಮೋದಿಸುವ ವ್ಯವಸ್ಥೆ ಮಾಡಲಾಗಿದೆ.
8. ಬ್ಯಾಂಕ್ ಅನ್ನು ಸಂಪೂರ್ಣ ಗಣಕೀಕೃತಗೊಳಿಸಿದ್ದು, Core Banking Solutions ಅನುಷ್ಠಾನ ಗೊಳಿಸಲಾಗಿದೆ.
9. 116 ವರ್ಷಗಳ ನಮ್ಮ ಹಿರಿಯರೆಲ್ಲರ ಹಾಗೂ ನಮ್ಮ ನಿಮ್ಮೆಲ್ಲರ ಬಹುದಿನದ ಕನಸಿನಂತೆ ಬ್ಯಾಂಕಿನ ಶಾಖೆ ಯೊಂದನ್ನು ವಿಟ್ಲದಲ್ಲಿ ತೆರೆಯಲಾಗಿದ್ದು ಆ ಶಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲು ಸಂತೋಷಪಡುತ್ತೇನೆ.
10. 2025-26 ರಲ್ಲಿ ಬ್ಯಾಂಕಿನ ಇನ್ನೊಂದು ಶಾಖೆಯನ್ನು ತೆರೆಯಲು ಯೋಜನೆ ಹಾಕಿಕೊಳ್ಳಲಾಗಿದೆ.
11. ಪರಿಸರ ರಕ್ಷಣೆಗೆ ನಮ್ಮದೇ ಆದ ಕೊಡುಗೆ ನೀಡುವ ಸಲುವಾಗಿ, ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸಲು 15 KV ಸೋಲಾರ್ ವಿದ್ಯುತ್ ಗ್ರಿಡ್ ಸ್ಥಾಪಿಸಿದ್ದು ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.
12. ಈ ವರ್ಷ ಅತ್ಯಂತ ಕ್ಲಿಷ್ಟಕರ ಹಾಗೂ ನಮಗೆ ಸವಾಲಾಗಿರುವ ಸಾಲಗಳನ್ನು ವಸೂಲು ಮಾಡಿಕೊಳ್ಳಲಾಗಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎರಡು ಅಂಗಡಿ ಕೋಣೆಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ.
13. ಬ್ಯಾಂಕಿನ ಭದ್ರತೆಗೆ ಅತಿ ಹೆಚ್ಚು ಆದ್ಯತೆ ನೀಡಿದ್ದೇವೆ. ಸೆಕ್ಯೂರಿಟಿ ಅಲಾರಾಂ, ಸಿಸಿಟಿವಿ ಅಳವಡಿಸಿದ್ದಲ್ಲದೆ ಹಗಲು ಮತ್ತು ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ಇದರ ಜೊತೆಗೆ ಈ ವರ್ಷ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು Sign in Security ಸಹಾಯದಿಂದ ದಿನದ 24 ಗಂಟೆಗಳ ಕಾಲ Control Room ಮುಖಾಂತರ ಭದ್ರತೆಯ ಮೇಲೆ ಕಣ್ಣಾವಲು ಇಡುವ ವ್ಯವಸ್ಥೆ ಮಾಡಲಾಗಿದೆ.
ಆದ್ದರಿಂದ ಗ್ರಾಹಕರು ನಮ್ಮ ಬ್ಯಾಂಕಿನ ಉನ್ನತ ಮಟ್ಟದ ಭದ್ರತೆಯ ಮೇಲೆ ಹೆಚ್ಚಿನ ಭರವಸೆಯನ್ನಿಡಬಹುದಾಗಿದೆ.
14. ನಮ್ಮ ಬ್ಯಾಂಕಿನಲ್ಲಿ ಚಿನ್ನಾಭರಣ ಸಾಲ, ಗೃಹ ಸಾಲ, ಆಸ್ತಿ ಅಡಮಾನ ಸಾಲ, ವಾಹನ ಸಾಲ, ಅಸ್ತಿ ಭದ್ರತೆಯ ಮೇಲೆ ಓವರ್ ಡ್ರಾಫ್ಟ್ ಸೌಲಭ್ಯ, ಯಂತ್ರೋಪಕರಣ ಭದ್ರತಾ ಸಾಲ, ಗೃಹ ಉಪಕರಣ ಸಾಲ, ವಾಣಿಜ್ಯ, ಕೈಗಾರಿಕೆ, ಸೇವೆ, ವ್ಯವಹಾರದ ಸಾಲದ ಜೊತೆಗೆ ವ್ಯಾಪಾರಸ್ಥರ ಅನುಕೂಲಕ್ಕಾಗಿ ಸ್ವಂತ ವ್ಯಾಪಾರದ ಕಟ್ಟಡ ಖರೀದಿ ಅಥವಾ ನಿರ್ಮಾಣಕ್ಕೆ ಕೂಡ ಸಾಲ ಯೋಜನೆಯನ್ನು ಪ್ರಾರಂಭಿಸಿದ್ದೇವೆ.
15. ಕಾಲ ಬದಲಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಯುವ ಪೀಳಿಗೆಯನ್ನು ನಮ್ಮ ಬ್ಯಾಂಕಿನತ್ತ ಸೆಳೆಯಬೇಕಾದ ಅವಶ್ಯಕತೆ ಇದೆ. ಬೇರೆ ಬ್ಯಾಂಕುಗಳ ಜೊತೆಗೆ ಸ್ಪರ್ಧಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕ್ರಾಂತಿಕಾರಿ ಹೆಜ್ಜೆಯನ್ನಿಡಲು ಯೋಚಿಸಲಾಗಿದೆ. ಈಗಾಗಲೇ ಬ್ಯಾಂಕ್ ವ್ಯವಹಾರ ಡಿಜಿಟಲೀಕರಣಗೊಳಿಸಲು ಭಾರತೀಯ NPCI (National Payment Corporation Indai) ಹಾಗೂ IDBI ಬ್ಯಾಂಕಿನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಅವುಗಳಲ್ಲಿ ಪ್ರಮುಖವಾಗಿ
(1) CTS ಕ್ಲಿಯರಿಂಗ್: ನಮ್ಮಲ್ಲಿ ನಮ್ಮ ಗ್ರಾಹಕರ ಚೆಕ್ ಕಲೆಕ್ಷನ್‌ಗೆ 3 ದಿನ ತಗುಲುತ್ತಿತ್ತು. ಬೇರೆ ಬ್ಯಾಂಕುಗಳನ್ನು ಆಶ್ರಯಿಸಬೇಕಾಗಿತ್ತು. ಈಗ ನಾವು ಕ್ಲಿಯರಿಂಗ್ ಮೆಂಬರ್ ಆಗಿ ನೇರವಾಗಿ CTS ಕ್ಲಿಯರಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದೇವೆ. Inward ಮತ್ತು Outward ಕ್ಲಿಯರಿಂಗ್ ಎರಡರಲ್ಲೂ CTS ಕ್ಲಿಯರಿಂಗ್ ವ್ಯವಸ್ಥೆ ಪ್ರಾರಂಭಿಸುತ್ತಿದ್ದೇವೆ. ಈ ವರ್ಷದ ಮಹಾಸಭೆಯಲ್ಲಿ ಇದಕ್ಕೆ ಚಾಲನೆ ನೀಡಲಿದ್ದೇವೆ.
(ii) ನೇರ ಹಣ ವರ್ಗಾವಣೆಗಾಗಿ ನೇರ RTGS ಮತ್ತು NEFT ವ್ಯವಸ್ಥೆ ಜಾರಿಗೊಳಿಸುತ್ತಿದ್ದೇವೆ. AXIS ಬ್ಯಾಂಕಿನ ಸಹಕಾರದಲ್ಲಿ ನಮ್ಮದೇ ಆದ IFSC ಕೋಡ್ ಹೊಂದಿದ್ದು ನೇರ ಹಣ ವರ್ಗಾವಣೆಗೆ ಈ ವರ್ಷದ ಮಹಾಸಭೆಯಲ್ಲಿ ಚಾಲನೆ ಕೊಡಲಿದ್ದೇವೆ. ಈಗಾಗಲೇ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು ಯಶಸ್ವಿಯಾಗಿದ್ದೇವೆ.
ಮುಂದಿನ (iii) ಅಂಗೈಯಲ್ಲಿ ಬ್ಯಾಂಕಿಂಗ್, ಬೆರಳ ತುದಿಯಲ್ಲಿ ಬ್ಯಾಂಕ್ ವ್ಯವಹಾರ ಎನ್ನುವ ಶ್ಲೋಗನ್ ನಂತೆ ನಾವು ಮಹಾಸಭೆಯಲ್ಲಿ Mobile Banking ವ್ಯವಸ್ಥೆಗೆ ಚಾಲನೆ ನೀಡುತ್ತಿದ್ದೇವೆ. ಸದ್ಯಕ್ಕೆ ನಿಮ್ಮ ಮೊಬೈಲ್‌ನಲ್ಲಿ ನಮ್ಮ Mobile Banking App Download ಮಾಡಿಕೊಂಡು ನಿಮ್ಮ ಎಲ್ಲಾ ಖಾತೆಗಳ ವಿವರ ಪಡೆದುಕೊಳ್ಳಬಹುದು ಹಾಗೂ M-Pass Book ಕೂಡಾ ಪಡೆದುಕೊಳ್ಳಬಹುದು. ಮಹಾಸಭೆಯಲ್ಲಿ Mobile App ಉದ್ಘಾಟನೆಗೊಳ್ಳಲಿದೆ. ಇನ್ನು ಕೆಲವೇ ದಿನಗಳಲ್ಲಿ ಆ App ಮುಖಾಂತರ ವ್ಯವಹಾರ ಕೂಡ ಮಾಡಬಹುದಾಗಿದೆ. Mobile Banking App ಅಳವಡಿಸಿಕೊಳ್ಳಲು ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಿ.
(iv) ATM Card: ನಾವು ನಮ್ಮದೇ ಆದ ATM RuPay Card ಗೆ ಈ ವರ್ಷದ ಮಹಾಸಭೆಯಲ್ಲಿ ಚಾಲನೆ ನೀಡುತ್ತಿದ್ದೇವೆ. ನಮ್ಮ ಗ್ರಾಹಕರು ATM ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ ನಮ್ಮ ಎರಡು ಶಾಖೆಗಳಲ್ಲಿ ಅರ್ಜಿ ಫಾರಂ ದೊರೆಯುತ್ತದೆ ಹಾಗೂ ನಮ್ಮ Website ನಲ್ಲಿ ಕೂಡ Download ಮಾಡಿಕೊಳ್ಳಬಹುದಾಗಿದೆ.
(v) ಈ ಮೇಲಿನ ಎಲ್ಲಾ ಯೋಜನೆಗಳು ಪೂರ್ತಿಗೊಂಡ ನಂತರ UPI Payment, Mobile Banking Transaction ಹಾಗೂ IMPS Payment ಸೌಲಭ್ಯ ಪ್ರಾರಂಭಿಸಲಿದ್ದೇವೆ.
ಈ ಆರ್ಥಿಕ ವಷಾರ್ಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣ ಬ್ಯಾಂಕ್ ಮಾಡುವತ್ತ ನಮ್ಮ ಪ್ರಯತ್ನ ಸಾಗಿದೆ. ಇದಕ್ಕಾಗಿ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಕೋರುತ್ತಿದ್ದೇವೆ.
ಮುಂದಿನ ದಿನಾಂಕ 14-09-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10:30 ಕ್ಕೆ ಜರುಗಲಿರುವ ಮಹಾಸಭೆಗೆ ಬರಬೇಕೆಂದು ತಮ್ಮನ್ನು ಈ ಮೂಲಕ ಆಮಂತ್ರಿಸುತ್ತಿದೇನೆ.
ನಮ್ಮ ಬ್ಯಾಂಕಿಗೆ ನೀವು ನೀಡುತ್ತಿರುವ ಉತ್ತಮ ಸಹಕಾರಕ್ಕಾಗಿ ತಮಗೆ ಕೃತಜ್ಞತೆ ಸಲ್ಲಿಸುತ್ತಾ ಮುಂದೆಯೂ ನಿಮ್ಮ ಸಹಕಾರ ಬಯಸುತ್ತೇನೆ.
ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ರಾದ ಕಿಶೋರ್ ಕೊಳತ್ತಾಯ ಎನ್, ಉಪಾಧ್ಯಕ್ಷ ರಾದ ಶ್ರೀಧರ ಗೌಡ, ನಿರ್ದೇಶಕರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ರಾಮಚಂದ್ರ ಕಾಮತ್, ಕಿರಣ್ ಕುಮಾರ್ ರೈ, ಗಣೇಶ್ ಕೌಕ್ರಾಡಿ ಉಪಸ್ಥಿತರಿದ್ದರು.