ಧರ್ಮಸ್ಥಳ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ದೂರುದಾರ ಚಿನ್ನಯ್ಯನನ್ನು ಬಂಧಿಸಿದ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ರು. ಈ ವೇಳೆ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ. ಚಿನ್ನಯ್ಯ ಒಬ್ಬನೇ ಅಲ್ಲ ಈ ಪ್ರಕರಣದ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಎನ್ನಲಾಗ್ತಿದ್ದು, ಚಿನ್ನಯ್ಯನಿಗೆ ಫಂಡಿಂಗ್ ಆಗಿರುವ ಬಗ್ಗೆ ಎಸ್ಐಟಿ ತನಿಖೆ ಮಾಡಿದೆ.
ಪ್ರಕರಣದ ಹಿಂದಿರುವ ಕಾಣದ ಕೈಗಳ ಬೆನ್ನು ಬಿದ್ದ SIT ಅಧಿಕಾರಿಗಳು, ಪ್ರಕರಣಕ್ಕೆ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ ಎನ್ನಲಾಗ್ತಿದೆ. ಚಿನ್ನಯ್ಯನ ಹಾಗೂ ಪತ್ನಿಯ ಅಕೌಂಟ್ಗೆ ಹಣ ವರ್ಗಾವಣೆ ಬಗ್ಗೆ ಮಹತ್ವದ ದಾಖಲೆ ಸಂಗ್ರಹಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಜಾಹೀರಾತು
ಚಿನ್ನಯ್ಯನ ಕುಟುಂಬದ ಪ್ರತಿಯೊಬ್ಬರ ಖಾತೆಯ ಡಿಟೇಲ್ ಪಡೆದು ದಾಖಲೆಗಳನ್ನು ತಿರುವು ಹಾಕುತ್ತಿರುವ SIT ಅಧಿಕಾರಿಗಳು, ಫಂಡಿಂಗ್ ಮಾಡಿರುವ ಆರೋಪದ ಮೇಲೆ 11 ಜನರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗ್ತಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಸೇರಿದಂತೆ 11 ಜನರಿಗೆ ನೋಟಿಸ್ ನೀಡಿದ್ದಾರೆ. ಈಗಾಗಲೇ 6 ಜನರನ್ನು ವಿಚಾರಣೆ ನಡೆಸಿರುವ SIT, 6 ತಿಂಗಳ ಹಿಂದೆ ಹಣ ವರ್ಗಾವಣೆ ಆಗಿರುವ ಬಗ್ಗೆ ದಾಖಲೆ ಸಂಗ್ರಹಿಸಿದೆ ಎನ್ನಲಾಗ್ತಿದೆ.
ಪ್ರಕರಣದಲ್ಲಿ ಇನ್ನಷ್ಟು ಮಂದಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅವರಿಗೂ SIT ನೋಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಚಿನ್ನಯ್ಯ-ತಿಮರೋಡಿ ಲಿಂಕ್ ಪತ್ತೆಗಾಗಿ ತಿಮರೋಡಿ ಆಪ್ತ ಗಣೇಶ್ ಎಂಬುವವರನ್ನ ಕೂಡ ಎಸ್ಐಟಿ ವಿಚಾರಣೆ ನಡೆಸಿದೆ. ಎರಡನೇ ದಿನದ ವಿಚಾರಣೆಗೆ ಎಸ್ಐಟಿ ಕಚೇರಿಗೆ ಗಣೇಶ್ ಆಗಮಿಸಿದ್ದಾರೆ. ತಿಮರೋಡಿಗೆ ಸೇರಿದ 4 ಆಂಡ್ರಾಯ್ಡ್ ಮೊಬೈಲ್ ಗಳನ್ನು ಗಣೇಶ್ ಬಳಸುತ್ತಿದ್ದ ಅನೇಕರ ಜೊತೆ ಚರ್ಚೆಗಾಗಿಯೇ ಗಣೇಶ್ ಬಳಿ ಪ್ರತ್ಯೇಕ ನಂಬರ್ ಇತ್ತು ಎನ್ನಲಾಗ್ತಿದೆ.
ತಿಮರೋಡಿ ಮೊಬೈಲ್ಗಳನ್ನು ಗಣೇಶ್ ಹ್ಯಾಂಡಲ್ ಮಾಡ್ತಿದ್ದ. ಮಹೇಶ್ ಶೆಟ್ಟಿ ಕೇವಲ ಕೀ ಪ್ಯಾಡ್ ಮೊಬೈಲ್ ಅಷ್ಟೇ ಬಳಸುತ್ತಿದ್ದರಂತೆ. ತಿಮರೋಡಿಯ ಆಂಡ್ರಾಯ್ಡ್ ಮೊಬೈಲ್ ಸೇರಿ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಿದ್ದವರು ಗಣೇಶ್ ಎನ್ನಲಾಗ್ತಿದೆ.
ಚಿನ್ನಯ್ಯ ಮತ್ತು ಗಣೇಶ್ ಸಂಪರ್ಕದ ಬಗ್ಗೆಯೂ ಎಸ್ಐಟಿ ವಿಚಾರಣೆ ನಡೆಸಿದೆ. ತಿಮರೋಡಿ ಮನೆಗೆ ಚಿನ್ನಯ್ಯ ಎಂಟ್ರಿ ಕೊಟ್ಟಿದ್ದು ಯಾವಾಗ? ಹೇಗೆ ಪರಿಚಯ, ಯಾರಿಂದ ಪರಿಚಯ, ಯಾವಾಗ ಬಂದಿದ್ದ ಅನ್ನೋ ಬಗ್ಗೆ ಮಾಹಿತಿ ಪಡೆದ ಎಸ್ಐಟಿ, ತನಿಖೆ ಮುಂದುವರೆಸಿದೆ ಎಂದು ತಿಳಿದು ಬಂದಿದೆ.