ಮಂಗಳೂರು: ಸೆಪ್ಟೆಂಬರ್ 29ರಂದು ಬೆಂಗಳೂರಿನಿಂದ ಮಂಗಳೂರಿಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಗುಂಡ್ಯ ಬಳಿ ತಲುಪಿದಾಗ, ಮುಂದಿನಿಂದ ತೆರಳುತ್ತಿದ್ದ ಕಾರೊಂದು ದಾರಿ ಮಾಡಿಕೊಡದೆ ಅಡ್ಡಿ ಪಡಿಸಿತು ಎಂದು ಆಂಬುಲೆನ್ಸ್ ಚಾಲಕ ಅನೀಫ್ ದೂರಿನಲ್ಲಿ ತಿಳಿಸಿದ್ದಾರೆ. ಕೆಎಂಸಿ ಆಸ್ಪತ್ರೆಯ ಆಂಬುಲೆನ್ಸ್‌ನ್ನು ಅಡ್ಡಿಪಡಿಸಿದ ಕಾರಿಗೆ ಪೊಲೀಸರು 6000 ದಂಡ ವಿಧಿಸಿರುವ ಘಟನೆ ನಡೆದಿದೆ.
ದೂರನ್ನು ಸ್ವೀಕರಿಸಿದ ಪೊಲೀಸರು, ಕೆಎ-21-C-6687 ನಂಬರಿನ ಕಾರಿಗೆ ದಂಡ ವಿಧಿಸಿದ್ದು, ತುರ್ತುಸೇವಾ ವಾಹನಗಳಿಗೆ ದಾರಿ ನೀಡುವುದು ಪ್ರತಿಯೊಬ್ಬ ಚಾಲಕರ ಕರ್ತವ್ಯವೆಂದು ಹಿತವಚನ ನೀಡಿದ್ದಾರೆ.
ಆಸ್ಪತ್ರೆ ಪೂರೈಕೆ ಉತ್ಪನ್ನಗಳು