ಬಜಿಲ : ಅ 01 ಕೊಯ್ಯೂರು ಗ್ರಾಮದ ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಅಕ್ಟೋಬರ್ 01 ರಂದು ಅರ್ಚಕರಾದ ಶ್ರೀ ಅನಂತರಾಮ ಶಬರಾಯ ರವರ ಪೌರೋಹಿತ್ಯದಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು, ಊರ ನಾಗರಿಕರು ಉಪಸ್ಥಿತರಿದ್ದರು. ಸಿಹಿ ತಿಂಡಿ ವಿತರಿಸಲಾಯಿತು.