ಪದ್ಮುಂಜ: ಅ 12 ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ನೂತನವಾಗಿ ಶುಭಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಸೀತಾರಾಮ ಮಡಿವಾಳ, ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀಮತಿ ಗಾಯತ್ರಿ ಗೋಪಾಲ ಗೌಡ, ಕಟ್ಟಡ ಮಾಲಕರದ ಸುಬ್ಬಣ್ಣ, ರಾಮಚಂದ್ರ ಗೌಡ, ಮತ್ತು ಶ್ರೀಮತಿ ಸಾವಿತ್ರಿ ರಾಮಚಂದ್ರ ಗೌಡ ಹಾಗೂ ಹಲವಾರು ಗಣ್ಯರು, ಗ್ರಾಹಕರು ಉಪಸ್ಥಿತರಿದ್ದರು. ವಿಜಯ ಶ್ರೀಮತಿ ಶಾಂಭವಿ ವಿಜಯ್,ಶ್ರೀಮತಿ ಶೋಭಾ ಲಕ್ಷ್ಮಣ ಬಂಟ್ವಾಳ ಆಗಮಿಸಿದವರನ್ನು ಸ್ವಾಗತಿಸಿ ಸತ್ಕರಿಸಿದರು.