ಪುತ್ತೂರು: ಫೇಸ್ ಬುಕ್ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಮೆಸೆಜ್ ಹಾಕಿರುವ ಪುತ್ತೂರು ನೆಹರೂ ನಗರದಲ್ಲಿರುವ ಪುತ್ತೂರು ಕನ್ ಸ್ಡ್ರಕ್ಣನ್ ಮಾಲಕ ವಸಂತ ಭಟ್ ಮಾಡಿದತಪ್ಪಿಗೆ ಕ್ಷಮೆ ಕೇಳಿದ ಘಟನೆ ಮಂಗಳವಾರ ನಡೆದಿದೆ.
ಮೆಸೆಜ್ ಹಾಕಿರುವ ವಸಂತ ಭಟ್ ವಿರುದ್ದ ಪುತ್ತೂರು ಬ್ಲಾಕ್ ಸೋಶಿಯಲ್ ಮೀಡಿಯಾ ಘಟಕದ ಅಧ್ಯಕ್ಷ ಸುಪ್ರಿತ್ ಕಣ್ಣಾರಾಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಈ ನಡುವೆ ಮಂಗಳವಾರ ಶಾಸಕರ ನಿವಾಸಕ್ಕೆ ಬಂದು ನಾನು ತಪ್ಪು ಮಾಡಿದ್ದೇನೆ ನನಗೆ ಕ್ಷಮಿಸಿ ಇನ್ನೆಂದೂ ಕೆಟ್ಟ ಕಮೆಂಟ್ ಹಾಕುವುದಿಲ್ಲ, ನನ್ನನ್ನು ಕ್ಷಮಿಸಿ, ನನ್ನನ್ನು ಪೊಲೀಸರು ಹುಡುಕುತ್ತಿದ್ದಾರೆ, ನನ್ನನ್ನು ಬಂಧಿಸದಂತೆ ಪೊಲೀಸರಿಗೆ ಹೇಳಿ ಎಂದು ಬೇಡಿಕೊಂಡಿದ್ದಾರೆ. ನೀವು ಕೆಟ್ಟ ಕಮೆಂಟ್ ಯಾಕೆ ಹಾಕುತ್ತೀರಿ? ನಾನು ನಿಮಗೇನಾದರೂ ಅನ್ಯಾಯ ಮಾಡಿದ್ದೇನಾ? ವಿದ್ಯಾವಂತರಿದ್ದೀರಿ, ಸಬ್ಯರಿದ್ದೀರಿ ಯಾಕೆ ಇಂಥಹ ಕೆಲಸಕ್ಕೆ ಹೋಗುತ್ತೀರಿ ಎಂದು ಕೇಳಿದ ಶಾಸಕರು ಮುಂದೆ ಇಂಥ ನೀಚ ಕೆಲಸಕ್ಕೆ ಹೋಗಬೇಡಿ ಎಂದು ಬುದ್ದಿವಾದ ಹೇಳಿ ಕ್ಷಮಿಸಿ ಕಳುಹಿಸಿದ್ದಾರೆ.