ಪುತ್ತೂರು : ಪಡ್ನೂರು ಹೆಜ್ಜೇನು ದಾಳಿಯಿಂದ ಗಾಯಕ್ಕೊಳಗಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಥ್ಯಶ್ ಪೂಜಾರಿ ಯವರು ನಿಮ್ಮೆಲ್ಲರ ಹಾರೈಕೆ ಆಶೀರ್ವಾದಗಳಿಂದ ಗುಣಮುಖನಾಗಲು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ.
ಆತನ ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಕಂಡು ನಿಮ್ಮೆಲ್ಲರ ಸಹಾಯ ಹಸ್ತ ಚಾಚಿದ್ದೆವು. 24 ಗಂಟೆಯೊಳಗೆ ದಾನಿಗಳ ಹೃದಯ ತುಂಬಿದ ಸಹಕಾರ ಪ್ರವಾಹದ ರೀತಿಯಲ್ಲಿ ಹರಿದು ಬಂದಿರುವುದಕ್ಕೆ ಗದ್ಗದಿತ ರಾಗಿದ್ದೇವೆ. ತಮ್ಮೆಲ್ಲರ ಮಾನವೀಯ ಸ್ಪಂದನೆಗೆ ಕೃತಜ್ಞತೆ ಸಲ್ಲಿಸುತ್ತಾ, ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ದಾನಿಗಳಿಂದ 8.5ಲಕ್ಷ (15-10-2025 ಸಂಜೆ 4 ಗಂಟೆ ವೇಳೆಗೆ ) ಧನಸಹಾಯ ಬಂದಿರುತ್ತದೆ.
ಅನೇಕ ಸಂಘ ಸಂಸ್ಥೆಯವರು ಆತನ ಚಿಕಿತ್ಸೆಗೆ ನೆರವನ್ನು ನೀಡುವುದಾಗಿ ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ ಈ ಮೊದಲು ನೀಡಲಾಗಿರುವ ಬ್ಯಾಂಕ್ ಅಕೌಂಟ್ ಗೆ (ಯುಪಿಐ ಕ್ಯೂ ಆರ್ ಕೋಡ್ ) ತಾವುಗಳು ಪಾವತಿ ಮಾಡುವುದನ್ನು ನಿಲ್ಲಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ಆದುದರಿಂದ ಪಾವತಿ ಸ್ವೀಕಾರವನ್ನು ನಾವು ತಗಿತಗೊಳಿಸಿರುತ್ತೇವೆ ಎಂದು ಈ ಮೂಲಕ ತಿಳಿಯಪಡಿಸುತ್ತಾ ಮತ್ತೊಮ್ಮೆ ಕೃತಜ್ಞತೆಗಳು.
ಪ್ರಥ್ಯಶ್ ಪೂಜಾರಿ, ಮನೆಯವರು.