ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ತಾರೆಕೆರೆಯಿಂದ ಶಾಂತಿಗೋಡು ಗ್ರಾಮದ ಪಂಜಿಗ ಸಂಪರ್ಕ ರಸ್ತೆಯನ್ನು ಗ್ರಾಮ ಸಡಕ್ ಯೋಜನೆ ಯಡಿ ಅಭಿವೃದ್ಧಿ ಪಡಿಸಲು ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.
ಪುತ್ತೂರು ತಾಲೂಕು ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಪಂಜಿಗ ಎಂಬ ಪ್ರದೇಶ ದ ವ್ಯಾಪ್ತಿಯಲ್ಲಿ ಸುಮಾರು 100 ಕುಟುಂಬಗಳು ವಾಸ್ತವವಿದ್ದರೂ ರಸ್ತೆ ಪೂರ್ಣಗೊಂಡಿಲ ಕೆಮ್ಮಾಯಿ ತರೆಕೆರೆಯಿಂದ ನರಿಮೊಗರು ಗ್ರಾಮದ ಪಂಜಿಗ ಎಂಬ ಪ್ರದೇಶ ಸಂಪರ್ಕಕಕ್ಕೆ ಸರಿ ಸುಮಾರು 5 ಕಿ. ಮೀ ದೂರ ವಿರುತ್ತದೆ ಸದ್ರಿ ರಸ್ತೆಯು ಕಿರುದಾಗಿ ರುವುದರಿಂದ ರಸ್ತೆಯನ್ನು ಅಭಿವೃದ್ಧಿಪಡಿಸಲು ಗ್ರಾಮ ಸಡಕ್ ಯೋಜನೆಯಡಿ ಅನುದಾನ ಒದಗಿಸುವಂತೆ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಅವರಲ್ಲಿ ಮನವಿ ಮಾಡಲಾಯಿತು. ವಾರ್ಡ್ ಸದಸ್ಯ ರಾಘವೇಂದ್ರ ಗೌಡ ಅಂದ್ರಟ್ಟ, ನಾಗೇಶ್ ಟಿ ಸ್, ಕಾರ್ಯಕರ್ತರು ಉಪಸ್ಥಿತರಿದ್ದರು























