ದಕ್ಷಿಣ ಕನ್ನಡದ ಬಜ್ಪೆಯ ಕಿನ್ನಿಪದವು ಜಂಕ್ಷನ್ ಬಳಿ 2025ರ ಮೇ 1ರಂದು ಸುಹಾಸ್ ಶೆಟ್ಟಿ ಹತ್ಯೆಯಾಗಿತ್ತು. ಹಿಂದೂ ಕಾರ್ಯಕರ್ತ, ಬಜರಂಗ ದಳದ ಸದಸ್ಯ ಸುಹಾಸ್ ಶೆಟ್ಟಿ ಕಾರನ್ನು ಪಿಕಪ್ ಟ್ರಕ್‌ನಿಂದ ಹೊಡೆದು ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು, ಚೂರಿ, ಕತ್ತಿ ಸಹಿತ ಬರ್ಬರವಾಗಿ ಕೊಂದಿದ್ದರು. ಇತರೇ 5 ಸಹಚರರಲ್ಲಿ ಒಬ್ಬರು ಗಾಯಗೊಂಡಿದ್ದರು.
ಬಜರಂಗ ದಳದ ಕಾರ್ಯಕರ್ತರಾಗಿ ಗೋರಕ್ಷಣೆ, ಲವ್ ಜಿಹಾದ ವಿರುದ್ಧ ಹೋರಾಗಳನ್ನು ಮಾಡಿಕೊಂಡ ಸುಹಾಸ್, 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಮೊಹಮ್ಮದ್ ಫಝಿಲ್ ಕೊಲೆಯ ಮುಖ್ಯ ಆರೋಪಿಯಾಗಿ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿದ್ದರು. ಫಝಿಲ್ ಕೊಲೆಯು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿತ್ತು. ಈ ಸುದೀರ್ಘ ಸಂಘರ್ಷದಲ್ಲಿಗುರಿಯಾಗಿದ್ದು ಸುಹಾಸ್.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹನ್ನೊಂದು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. 2023ರ ಮೇ 1 ರಂದು ಮಂಗಳೂರು ಬಳಿ ನಡೆದ ಈ ಭೀಕರ ಕೊಲೆ ಪ್ರಕರಣವು ರಾಜ್ಯವ್ಯಾಪಿ ಸಂಚಲನ ಸೃಷ್ಟಿಸಿತ್ತು. NIA ತನಿಖೆ ಪ್ರಕಾರ, ಈ ಕೊಲೆ ಯಾವುದೇ ತುರ್ತು ಕೃತ್ಯವಲ್ಲ, ಬದಲಿಗೆ ಪೂರ್ವಯೋಜಿತ ಸಂಚಾಗಿದ್ದು, ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದಲೇ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಯಲ್ಲಿ ಹಂತಕರು ಹಲವಾರು ತಿಂಗಳುಗಳ ಕಾಲ ಸುಹಾಸ್ ಶೆಟ್ಟಿ ವಾಚ್ ಮಾಡ್ತಿದ್ದರಂತೆ. ಬಳಿಕ ಅವರ ಕಾರು ಹಿಂಬಾಲಿಸಿ ಕೊಲೆ ನಡೆಸಿದ್ದ ವಿಚಾರ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದಾಗ ಸುಹಾಸ್ ಶೆಟ್ಟಿ ಪ್ರಾಣ ಉಳಿಸಿಕೊಳ್ಳಲು ಓಡಿದ್ದರು. ಈ ವೇಳೆ ಅವರನ್ನು ಅಟ್ಟಾಡಿಸಿಕೊಂಡರೂ ಕೊಲೆಗಾರರು ಯಾವುದೇ ದಯೆ ತೋರಿಲ್ಲ ಎಂದು ದಾಖಲೆಗಳು ಹೇಳುತ್ತವೆ.
ಚಾರ್ಜ್‌ಶೀಟ್ ಪ್ರಕಾರ, ಈ ಸಂಚು ಪಿಎಫ್‌ಐ ಸಂಘಟನೆಯ ಸದಸ್ಯರ ನೇತೃತ್ವದಲ್ಲಿ ಸಂಚು ರೂಪಿಸಲಾಗಿತ್ತು. ಆರೋಪಿಗಳ ಪೈಕಿ ಶಫಿ, ನಾಗ, ಅಪ್ಪು, ರಂಜಿತ್, ರಿಜ್ವಾನ್, ಅಜರ್, ಖಾದರ್ ಹಾಗೂ ಅಬ್ದುಲ್ ರಜಾಕ್ ಸೇರಿ ಹನ್ನೊಂದು ಮಂದಿಯ ಹೆಸರುಗಳು ಉಲ್ಲೇಖಗೊಂಡಿವೆ.
NIA ಅಧಿಕಾರಿಗಳ ಪ್ರಕಾರ, ಕೊಲೆಯ ಹಿಂದಿನ ಉದ್ದೇಶ ಕೇವಲ ವೈಯಕ್ತಿಕವಾಗಿರದೇ, ದೊಡ್ಡ ಪಿತೂರಿಯ ಭಾಗವಾಗಿರುವ ಸಾಧ್ಯತೆ ಇದೆ. ಈ ಘಟನೆಯು ಸಮಾಜದಲ್ಲಿ ಅಶಾಂತಿ ಮತ್ತು ಭೀತಿಯ ವಾತಾವರಣ ಸೃಷ್ಟಿಸುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಮೂಲಗಳು ತಿಳಿಸಿವೆ.






















