ಬಾರ್ಯ : (ನ.05 ) ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) 2025-2030 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನವೆಂಬರ್ 05 ರಂದು ಮೂರುಗೋಳಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಚುನಾವಣಾ ಅಧಿಕಾರಿ ಫಲಿತಾಂಶ ಘೋಷಣೆ ಮಾಡಿದರು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಾಮಾನ್ಯ ಕ್ಷೇತ್ರದಲ್ಲಿ ಪ್ರಸನ್ನ ಗೌಡ. ಎನ್, ಪ್ರವೀಣ್ ರೈ. ಪಿ, ಪ್ರಶಾಂತ್. ಪೈ, ಚಂದ್ರಶೇಖರ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ಮೋಹನ್ ಗೌಡ ಅಜಿರ, ಹಿಂದುಳಿದ ಎ ಕ್ಷೇತ್ರದಿಂದ ಸೇಸಪ್ಪ ಸಾಲಿಯಾನ್, ಹಿಂದುಳಿದ ಬಿ ಕ್ಷೇತ್ರದಿಂದ ರಾಜೇಶ್ ರೈ ಹೆನ್ನಡ್ಕ, ಮಹಿಳಾ ಮೀಸಲು ಕ್ಷೇತ್ರ ದಿಂದ ಸವಿತಾ ವೆಂಕಟೇಶ್, ಹೇಮಾವತಿ ಸುರೇಶ್ ಹೇರಾಜೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶಿವರಾಮ್ ಕೆಳಗಿನಂಗಡಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸುರೇಶ್ ಸುಣ್ಣಾಜೆ ಸ್ಪರ್ಧಿಸಿ 12 ಕ್ಷೇತ್ರದಲ್ಲೂ ಕ್ಲೀನ್ ಸ್ವಿಪ್ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಣಾಧಿಕಾರಿ, ಸಿಬ್ಬಂದಿ ವರ್ಗ, ಉಪ್ಪಿನಂಗಡಿ ಅರಕ್ಷಣಾ ಠಾಣಾ ಅಧಿಕಾರಿಗಳು ವ್ಯವಸ್ಥಿತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಂಡಲ,ಕಣಿಯೂರು ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಸಮಿತಿ ಪದಾಧಿಕಾರಿಗಳು, ಜನಪ್ರತಿನಿದಿನಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.























