• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

November 10, 2025
ಪುತ್ತೂರು: ಎಲ್.ಪಿ.ಜಿ. ಆಟೋ ಗ್ಯಾಸ್ ಏರಿಕೆ – ಆಟೋ ಬಾಡಿಗೆ ದರ ಏರಿಕೆ ಅನಿವಾರ್ಯ

April 4, 2026
ಪಿ ಜಿ ಜಗನ್ನಿವಾಸ್ ರಾವ್ ವಿಚಾರ ಇದು ಎರಡು ಮನೆಗೆ ಸಂಬಂಧಪಟ್ಟ ವಿಷಯ ದೇವಸ್ಥಾನದ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ :ಈಶ್ವರ ಭಟ್ ಪಂಜಿಗುಡ್ಡೆ

ಜನಸಾಮಾನ್ಯರ ದ್ವನಿ ಯಾಗಿದ್ದ ಸಂಸದ ರಾಘವ್ ಚಡ್ಡಾ ಅವರನ್ನ ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದ ಅಮ್ಮ್ ಆದ್ಮಿ

April 3, 2026
ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರ ಮತ್ತೊಂದು ಶಾಕ್ !

ತಮಿಳುನಾಡು ವಿಧಾನಸಭಾ ಚುನಾವಣೆ ಬಿಜೆಪಿ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಅಣ್ಣಾಮಲೈ ಹೆಸರಿಲ್ಲ

ಕುರಿಯ ಗ್ರಾಮದ ಸತೀಶ್‌ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ

April 2, 2026
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬರದಿಂದ ಸಾಗುತ್ತಿರುವ ಯಾತ್ರಿ ನಿವಾಸ, ಸಮುದಾಯ ಭವನ ಹಾಗೂ ಆಯುರ್ವೇದಿಕ್ ಕೇಂದ್ರದ ಕಾಮಗಾರಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಮೇಕಪ್ ಆರ್ಟಿಸ್ಟ್ ಸೌಮ್ಯಾ ನವರಂಗಿ ಆಟ: ಉದ್ಯಮಿಯ ಬಲಿ?

March 31, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಭೀಮಾ ಜ್ಯುವೆಲ್ಲರ್ಸ್  ವತಿಯಿಂದ  ಜೀವ ರಕ್ಷಕ ವಾಹನ ಹಸ್ತಾಂತರ

ಪುತ್ತೂರು ನಗರದ ಮಂಜಲ್ಪಡ್ಪುವಿನಲ್ಲಿ ಸರಣಿ ಅಪಘಾತ

March 28, 2026
ನಾಳೆ 40ನೇ ವರ್ಷದ ವಿಜಯ ವಿಕ್ರಮ ಉಬಾರ್ ಕಂಬಳೋತ್ಸವ, ಸಾಧಕರಿಗೆ ಸನ್ಮಾನ – ವಿಶೇಷ ಆಕರ್ಷಣೆಯಾಗಿ ಚಿತ್ರ ನಟ,ನಟಿಯರ ಆಗಮನ

March 27, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, April 5, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು: ಎಲ್.ಪಿ.ಜಿ. ಆಟೋ ಗ್ಯಾಸ್ ಏರಿಕೆ – ಆಟೋ ಬಾಡಿಗೆ ದರ ಏರಿಕೆ ಅನಿವಾರ್ಯ

    ಪುತ್ತೂರು: ಎಲ್.ಪಿ.ಜಿ. ಆಟೋ ಗ್ಯಾಸ್ ಏರಿಕೆ – ಆಟೋ ಬಾಡಿಗೆ ದರ ಏರಿಕೆ ಅನಿವಾರ್ಯ

    ಪಿ ಜಿ ಜಗನ್ನಿವಾಸ್ ರಾವ್ ವಿಚಾರ ಇದು ಎರಡು ಮನೆಗೆ ಸಂಬಂಧಪಟ್ಟ ವಿಷಯ ದೇವಸ್ಥಾನದ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ :ಈಶ್ವರ ಭಟ್ ಪಂಜಿಗುಡ್ಡೆ

    ಪಿ ಜಿ ಜಗನ್ನಿವಾಸ್ ರಾವ್ ವಿಚಾರ ಇದು ಎರಡು ಮನೆಗೆ ಸಂಬಂಧಪಟ್ಟ ವಿಷಯ ದೇವಸ್ಥಾನದ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ :ಈಶ್ವರ ಭಟ್ ಪಂಜಿಗುಡ್ಡೆ

    ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರ ಮತ್ತೊಂದು ಶಾಕ್ !

    ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರ ಮತ್ತೊಂದು ಶಾಕ್ !

    ಕುರಿಯ ಗ್ರಾಮದ ಸತೀಶ್‌ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ

    ಕುರಿಯ ಗ್ರಾಮದ ಸತೀಶ್‌ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ

    ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬರದಿಂದ ಸಾಗುತ್ತಿರುವ ಯಾತ್ರಿ ನಿವಾಸ, ಸಮುದಾಯ ಭವನ ಹಾಗೂ ಆಯುರ್ವೇದಿಕ್ ಕೇಂದ್ರದ ಕಾಮಗಾರಿ

    ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬರದಿಂದ ಸಾಗುತ್ತಿರುವ ಯಾತ್ರಿ ನಿವಾಸ, ಸಮುದಾಯ ಭವನ ಹಾಗೂ ಆಯುರ್ವೇದಿಕ್ ಕೇಂದ್ರದ ಕಾಮಗಾರಿ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

    ಮೇಕಪ್ ಆರ್ಟಿಸ್ಟ್ ಸೌಮ್ಯಾ ನವರಂಗಿ ಆಟ: ಉದ್ಯಮಿಯ ಬಲಿ?

    ಮೇಕಪ್ ಆರ್ಟಿಸ್ಟ್ ಸೌಮ್ಯಾ ನವರಂಗಿ ಆಟ: ಉದ್ಯಮಿಯ ಬಲಿ?

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಭೀಮಾ ಜ್ಯುವೆಲ್ಲರ್ಸ್  ವತಿಯಿಂದ  ಜೀವ ರಕ್ಷಕ ವಾಹನ ಹಸ್ತಾಂತರ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಜೀವ ರಕ್ಷಕ ವಾಹನ ಹಸ್ತಾಂತರ

    ಪುತ್ತೂರು ನಗರದ ಮಂಜಲ್ಪಡ್ಪುವಿನಲ್ಲಿ ಸರಣಿ ಅಪಘಾತ

    ಪುತ್ತೂರು ನಗರದ ಮಂಜಲ್ಪಡ್ಪುವಿನಲ್ಲಿ ಸರಣಿ ಅಪಘಾತ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

by ಪ್ರಜಾಧ್ವನಿ ನ್ಯೂಸ್
November 10, 2025
in ಪುತ್ತೂರು
0
ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ
28
SHARES
81
VIEWS
ShareShareShare

ರಾಜ್ಯ ಸರಕಾರ ಕೆಂಪುಕಲ್ಲು ಗಣಿಗಾರಿಕೆ ಮೇಲೆ ವಿಧಿಸಿದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದರೂ ಕೆಂಪುಕಲ್ಲು ದರ ಮಾತ್ರ ದುಬಾರಿ ಉಳಿದಿದೆ. ರಾಜಸ್ವ ಹೆಸರಿನಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕುಳಗಳು ಒಂದು ಕೆಂಪು ಕಲ್ಲಿಗೆ 50-55 ರೂ. ವಸೂಲಿ ಮಾಡುತ್ತಿದ್ದು, ಇದು ಬಡವರು, ಮಧ್ಯಮ ವರ್ಗ, ಉದ್ಯಮಿಗಳ ಪಾಲಿಗೆ ಬರೆಯಾಗಿದೆ.

ಈ ಹಿಂದೆ ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ ಹೊಸ ತೆರಿಗೆಯಿಂದ ಗಣಿ ಉದ್ಯಮ ಕಂಗಾಲಾಗಿದ್ದು, ಮರಳುಗಾರಿಕೆ, ಕೆಂಪುಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಉದ್ಯಮ ಸ್ತಬ್ದವಾಗಿತ್ತು. ಇದರಿಂದ ಮನೆ ನಿರ್ಮಾಣ, ವಸತಿ ಸಂಕೀರ್ಣ, ಕಟ್ಟಡ ಉದ್ಯಮ ವಲಯ ಸಂಕಷ್ಟಕ್ಕೆ ಸಿಲುಕಿತ್ತು. ಇದರ ವಿರುದ್ಧ ಉದ್ಯಮಿಗಳು, ಕಾಂಟ್ಯಾಕ್ಟ್‌ದಾರರು, ಜನಪ್ರತಿನಿಧಿಗಳು ಬೀದಿಗಿಳಿದು ರಾಜಧನ ಇಳಿಸುವಂತೆ ಪ್ರತಿಭಟನೆ ನಡೆಸಿದ್ದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಂಕಿ-ಸಂಖ್ಯೆ ಪ್ರಕಾರ ಹಿಂದೆ 10 ಟನ್ (ಅಂದಾಜು 400 ಕೆಂಪುಕಲ್ಲು) ಕೆಂಪುಕಲ್ಲಿಗೆ 50 ರೂ. ರಾಯಲ್ಟಿ ಕಟ್ಟಬೇಕಾಗಿತ್ತು. ಈ ದರ 120 ರೂ.ವರೆಗೂ ಏರಿಕೆಯಾಗಿತ್ತು.ರಾಯಲ್ಟಿ 700 ರೂ., ಡಿಎಂಎಫ್ 70 ರೂ., ಎಪಿ 280 ರೂ., 2ಡಿ-1,050 ರೂ. ಸೇರಿದಂತೆ 10 ಟನ್ ಕೆಂಪುಕಲ್ಲಿಗೆ 2,564 ರೂ. ರಾಜಧನ ಕಟ್ಟಲು ಆದೇಶ ಮಾಡಿತ್ತು.

ರಾಜಧನದ ಈ ಕ್ರಮ ಖಂಡಿಸಿ ಗಣಿ ಉದ್ಯಮಿಗಳು ಗಣಿಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದರು. ಅದಕ್ಕೆ ತಕ್ಕಂತೆ ಜಿಲ್ಲಾಡಳಿತವೂ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆ, ಕೆಂಪುಕಲ್ಲು ಸಾಗಾಟ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು. ಇದರಿಂದ ಕರಾವಳಿಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು.

Poorna squash

ಜಾಹೀರಾತು

ಗಣಿಗಾರಿಕೆ ಸ್ಥಗಿತ ದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದ್ದು, ಸರಕಾರಕ್ಕೆ ಅದರ ಬಿಸಿ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸ್ಪೀಕರ್ ಯು.ಟಿ. ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗಣಿ ಇಲಾಖೆ ಮುಖ್ಯ ಕಾರ್ಯ ದರ್ಶಿಗಳ ಮುಂದಾಳತ್ವದಲ್ಲಿ ಸಿವಿಲ್ ಕಾಂಟ್ಯಾಕ್ಟ್ ದಾರರ ಸಂಘ, ಗಣಿ ಉದ್ಯಮಿಗಳು, ಕ್ರೆಡೈ ಪದಾಧಿಕಾರಿಗಳ ಸಭೆ ನಡೆಸಿ, ರಾಜಸ್ವ ಇಳಿಕೆ ಬಗ್ಗೆ ಸಹಮತಕ್ಕೆ ಬರಲಾಯಿತು.

camera center ad

ಜಾಹೀರಾತು

Keshari Durga

ಜಾಹೀರಾತು

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಂಪುಕಲ್ಲು ದರ, ರಾಜಸ್ವ ಹಾಗೂ ಇತರ ಸಾಧಕ-ಬಾಧಕದ ಬಗ್ಗೆ ಸಮಗ್ರ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಯಿತು. ರಾಜಸ್ವ ಧನವನ್ನು 920 ರೂ.ಗೆ ಅಂತಿಮಗೊಳಿಸಲಾಯಿತು. ಇದರಿಂದ ಕಲ್ಲು ಗಣಿಗಾರಿಕೆಗೆ ಸಂಬಂಧಿತ ಒಂದು ಹಂತದ ಸಮಸ್ಯೆ ಬಗೆಹರಿದಿತ್ತು. ರಾಜ್ಯ ಸರಕಾರ ರಾಜಸ್ವಧನವನ್ನು ಶೇ. 58.80ರಷ್ಟು ಇಳಿಕೆ ಮಾಡಿದರೂ ಗಣಿ ಉದ್ಯಮಿಗಳು 1 ಕೆಂಪು ಕಲ್ಲು ದರ 50-55 ರೂ.ಗೆ ಏರಿಕೆ ಮಾಡಿದ್ದು, 10 ಟನ್ ಕೆಂಪುಕಲ್ಲಿಗೆ 18 ರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ.

ಇದರಲ್ಲಿ ಸರಕಾರಕ್ಕೆ ಸಂದಾಯವಾಗುತ್ತಿರುವುದು ಕೇವಲ 920 ರೂ. ಮಾತ್ರ. ಗಣಿ ಉದ್ಯಮಿಗಳು ಈ ರೀತಿ ದರ ಏರಿಕೆ ಮಾಡಿದ ಕಾರಣ ಬಡವರು, ಮಧ್ಯಮ ವರ್ಗ, ಕಟ್ಟಡ ಉದ್ಯಮಿಗಳು, ಕಾಂಟ್ಯಾಕ್ಸ್‌ದಾರರು ಕಂಗಾಲಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ರಾಜಧನ ಹೆಸರಲ್ಲಿ ಕೆಂಪುಕಲ್ಲು ದರವನ್ನು ಆ ವೈಜ್ಞಾನಿಕವಾಗಿ ಏರಿಸಿರುವುದರ ಬಗ್ಗೆ ಪರಿಶೀಲನೆ ನಡೆಸಬೇಕು. ಸರಕಾರದ ರಾಜಧನಕ್ಕೆ ತಕ್ಕಂತೆ ಕೆಂಪುಕಲ್ಲುದರ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡುವಂತೆ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ 30 ರೂ.ಗಳಿಗೆ ದೊರೆಯುತ್ತಿದ್ದ ಕಲ್ಲಿನ ದರ ಈಗ 55 ರೂ.ಗಳಿಗೆ ಏರಿಕೆಯಾಗಿದೆ. ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿದರೂ ಕೆಂಪುಕಲ್ಲಿನ ದರ ಮಾತ್ರ ಇಳಿಕೆಯಾಗಿಲ್ಲ. . ಈ ದರದಲ್ಲಿ 1,200 ಚದರಡಿ ವಿಸ್ತೀರ್ಣದ ಮನೆಗೆ ಅಂದಾಜು ಸುಮಾರು 3 ಲಕ್ಷದವರೆಗೆ ಹೆಚ್ಚಳವಾಗುತ್ತದೆ. ಈ ದರದಲ್ಲಿ ನಮಗೂ ಮನೆ ನಿರ್ಮಾಣ ಕಾಮಗಾರಿ ಸಾಧ್ಯವಿಲ್ಲ. ನಾವು ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗಲಿದೆ ಎನ್ನುತ್ತಾರೆ ದ.ಕ. ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಮಹಾಬಲ ಕೊಟ್ಟಾರಿ.

Muliya

ಜಾಹೀರಾತು

vishnu studio

ಜಾಹೀರಾತು

ashwinistudioputtur

ಜಾಹೀರಾತು

SendShare11Share
Previous Post

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್; ಸಾರ್ವಜನಿಕರ ಆಕ್ರೋಶ

Next Post

ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗ ಉದ್ಯಮಿಗಳು

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In