ಹಾವೇರಿ:ಯಾರು ಏನು ಹೇಳಿದರೂ ನಾವು ಹಿಂದೂಗಳ ಪರ ಇರ್ತೀವಿ. ಮುಸ್ಲಿಮರು ಅವರ ಬ್ರದರ್ಸ್ ಆದರೆ, ಹಿಂದೂಗಳು ನಮ್ಮ ಬ್ರದರ್ಸ್ ಅಂತೀವಿ.”
ಇದು ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಹರಿಹಾಯ್ದ ಪರಿ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಹಾ ಹತ್ಯೆ ಪರ್ಸನಲ್ ವಿಚಾರ ಅಂತ ಹೋಮ್ ಮಿನಿಸ್ಟರ್ ಹೇಳ್ತಾರೆ. ಅವರನ್ನು ಬ್ರದರ್ಸ್ ಅಂತ ಹೇಳೋ ಡಿಸಿಎಂ ಇದ್ದಾರೆ. ದಾಳಿಗೊಳಗಾಗ್ತಿರೋರು. ಹಿಂದೂಗಳು ಹೀಗಾಗಿ ಧ್ವನಿ ಎತ್ತಿದ್ದೇವೆ ಎಂದರು.
ನೇಹಾ ವಿಚಾರ ಬಂದಾಗ ಸಿಎಂ ಏನು ಹೇಳಿದರು? ತಪ್ಪು ತಪ್ಪೇ ನಾವು ಕ್ರಮ ತಗೊತೀವಿ ಅನ್ನಬಹುದಿತ್ತಲ್ಲವಾ? ಇವರ ಮನೆಯವರಿಗೆ ಚುಚ್ಚಿ ಸಾಯಿಸಿದರೆ ವೈಯಕ್ತಿಕ ವಿಚಾರ ಆಗುತ್ತಾ? ಹಿಂದೆ ರಾಜು ಮರ್ಡರ್ ಆದಾಗ ಸಿದ್ದರಾಮಯ್ಯ ಅವರ ಮನೆಗೆ ಹೋದರಾ? ರಾಜು ಲಿಂಗಾಯತ ಅನ್ನೋ ಕಾರಣಕ್ಕೆ ಮನೆಗೆ ಹೋಗಲಿಲ್ಲವಾ? ಮಾಧ್ಯಮಗಳಲ್ಲಿ ಬಂದು ಟೀಕೆ
ಆದ ಮೇಲೆ ಕಣ್ಣೊರಸುವ ಪ್ರಯತ್ನ ಮಾಡ್ತಾರೆ ಎಂದು ಆರೋಪಿಸಿದರು.
ಇದಕ್ಕಿಂತ ಸ್ಪಷ್ಟವಾಗಿ ನಾನು ಏನು ಹೇಳೋದು ಗೊತ್ತಿಲ್ಲ. ನೇಹಾ ಹಿರೇಮಠ ವಿಚಾರದಲ್ಲಿ ಹಗಲಿನಲ್ಲಿ ಮರ್ಡರ್ ಮಾತ್ರ ಅಲ್ಲ. ಅದರ ಹಿಂದಿನ ಇಂಟೆನ್ಷನ್ ನೋಡಿ. ಬೆಂಗಳೂರಲ್ಲಿ ಹನುಮಾನ್ ಚಾಲಿಸಾ ಪ್ಲೇ ಮಾಡಿದರೆ ಹಲ್ಲೆ ಮಾಡಿದರು. ಮೈಸೂರಿನಲ್ಲಿ ಮೋದಿಯವರ ಬಗ್ಗೆ ಹಾಡು ಬರೆದಿದ್ದಕ್ಕೆ ಹೊಡೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಸಂಸದ ಪ್ರತಾಪ್‌ಸಿಂಹ್ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಶ್ರೀನಿವಾಸಪ್ರಸಾದ್ ಆತ್ಮಕ್ಕೆ ಶಾಂತಿ ಕೋರಿದರು. ಶ್ರೀನಿವಾಸ ಪ್ರಸಾದ್ ವೈಯಕ್ತಕವಾಗಿ ನನ್ನನ್ನು ಅವರ ಮಕ್ಕಳನ್ನು ನೋಡಿಕೊಂಡ ಹಾಗೆ ನನ್ನನ್ನು ನೋಡಿಕೊಂಡಿದಾರೆ ಎಂದು ಪ್ರತಾಪ್‌ಸಿಂಹ ತಿಳಿಸಿದರು.