ಸಿಟಿಯಲ್ಲಿ ಆನ್ಲೈನ್ ವಂಚನೆಗೆ ಇತಿಮಿತಿಯೇ ಇಲ್ಲ. ಅದರಲ್ಲೂ ಡೇಟಿಂಗ್ ಆ್ಯಪ್ಗಳಲ್ಲಿ ಫ್ರೆಂಡ್ ಶಿಪ್ ಮಾಡಿ ಸ್ನೇಹ ಬೆಳೆಸೋ ಮಂದಿ ಇದ್ದಬದ್ದ ಹಣ ಕಳೆದುಕೊಂಡು ಬೀದಿಗೆ ಬೀಳೋದು ಕಾಮನ್. ಹೀಗೆ ಹ್ಯಾಪನ್ ಎಂಬ ಡೇಟಿಂಗ್ ಆ್ಯಪ್ನಲ್ಲಿ ಯುವಕನೊಬ್ಬ ಯುವತಿಯ ಸ್ನೇಹ ಮಾಡಿ ಜೇಬಲ್ಲಿದ್ದ ಹಣ, ಮೈಮೇಲಿದ್ದ ಚಿನ್ನ ಕಳೆದುಕೊಂಡಿದ್ದಾನೆ
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಇಬ್ಬರು, ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್ನಲ್ಲಿ ಭೇಟಿಯಾಗಿದ್ದಾರೆ. ಪಾರ್ಟಿ ಮಾಡಿದ ನಂತರ ಯುವತಿ, ಯುವಕನನ್ನ ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದಾಳೆ. ಮಧ್ಯರಾತ್ರಿ ಯುವತಿ ಕೊಟ್ಟ ನೀರು ಕುಡಿದ ಯುವಕ, ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ನಿದ್ದೆಗೆ ಜಾರಿದ್ದಾನೆ. ಬೆಳಗ್ಗೆ ಎದ್ದು ಕಣ್ಣುಬಿಟ್ರೆ ಜೊತೆಗಿದ್ದ ಯುವತಿ ರೂಮಲ್ಲಿ ಇಲ್ಲ. ತನ್ನ ಬಳಿ ಇದ್ದ 6.89 ಲಕ್ಷ ರೂ ಮೌಲ್ಯದ ಹೆಡ್ಸೆಟ್, 58 ಗ್ರಾಂನ ಚಿನ್ನದ ಸರ, ಕೈ ಬಳೆ, 10 ಸಾವಿರ ರೂ. ನಗದು ಕದ್ದು ಡೇಟಿಂಗ್ ಆ್ಯಪ್ ಮಾಯಾಂಗನೇ ಪರಾರಿ ಆಗಿದ್ದಾಳೆ. ಸುಂದರಿಯ ಮಾಯಾಜಾಲಕ್ಕೆ ಸಿಲುಕಿ ಬೆಪ್ಪನಾಗಿರುವ ಯುವಕ, ಇಂದಿರಾನಗರ ಠಾಣೆಗೆ ದೂರು ನೀಡಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಮಾಯಾಂಗನೆಯೊಬ್ಬಳು 1.29 ಕೋಟಿ ಹಣ ವಂಚಿಸಿದ್ದಾಳೆ. ಕ್ವಾಕ್ ಕ್ವಾಕ್ ಎಂಬ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ವಂಚಕಿ, ಅಮಾಯಕನಿಗೆ ಬ್ಯುಸಿನೆಸ್ ಮಾಡುವ ಐಡಿಯಾ ಕೊಟ್ಟಿದ್ದಳು. ನಿಮ್ಮ ತಂದೆಯ ಹೆಸರಲ್ಲಿ ವೃದ್ಧಾಶ್ರಮ ಕಟ್ಟಿಸೋದಾಗಿ ಆಮಿಷವೊಡ್ಡಿ, ಷೇರು ಮಾರ್ಕೆಟ್ನಲ್ಲಿ 1.29 ಕೋಟಿ ಹಣ ಹೂಡಿಕೆ ಮಾಡಿಸಿದ್ದಾಳೆ. ಕೊನೆಗೆ ಲಾಭವೂ ನೀಡದೇ, ಹಣವನ್ನೂ ವಾಪಸ್ ಕೊಡದೇ ವಂಚಿಸಿ ಎಸ್ಕೇಪ್ ಆಗಿದ್ದಾಳೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ಉತ್ತರ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ 2 ಕೇಸ್ಗಳ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಯುವತಿಯರ ಪತ್ತೆಗೆ ಬಲೆ ಬೀಸಿದ್ದಾರೆ.























