ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ತಾಲೂಕು ಸಮಿತಿಗಳ ಪದಪ್ರದಾನ ಸಮಾರಂಭವು ಡಿ.25ಕ್ಕೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ನ.14ರಂದು ಬಿಡುಗಡೆಗೊಳಿಸಲಾಯಿತು.
ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಗಂಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಸಂಘದ ಅಧ್ಯಕ್ಷ ರವಿಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು, ನಿಯೋಜಿತ ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ್ ಪಾಣತ್ತಿಲ, ಯುವ ಗೌಡ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ.
ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಶಶಿಧರ್, ಕಾರ್ಯಕ್ರಮದ ಸಂಚಾಲಕರಾದ ವಿಶ್ವನಾಥ ಗೌಡ ಕೆಯ್ಯೂರು, ಪುರುಷೋತ್ತಮ ಮುಂಗ್ಲಿಮನೆ, ಲಿಂಗಪ್ಪ ಗೌಡ ತೆಂಕಿಲ, ಶ್ರೀಧರ್ ಗೌಡ ಕಣಜಾಲು, ಆರ್ಥಿಕ ಸಮಿತಿ ಸಂಚಾಲಕ ಶಿವರಾಮ ಮತಾವು, ಸುರೇಶ್ ಗೌಡ ಕಲ್ಲಾರೆ,
ಪ್ರಚಾರ ಸಮಿತಿಯ ರಾಧಾಕೃಷ್ಣ ನಂದಿಲ, ವೇದಿಕೆ ಸಮಿತಿಯ ವಸಂತ ವೀರಮಂಗಲ, ಆಹಾರ ಸಮಿತಿಯ ಕಿಶೋರ್ ಬೇರಿಕೆ, ವಿಶ್ವನಾಥ ಗೌಡ ಬನ್ನೂರು, ವೈದಿಕ ಸಮಿತಿಯ ಭಾರತಿ ಕಾಡಮನೆ, ಸ್ವಯಂ ಸೇವಕ ಸಮಿತಿಯ ಜಗನ್ನಾಥ ಪಟ್ಟೆ, ಸೂರಪ್ಪ ಗೌಡ, ಪ್ರಸನ್ನ, ಯತೀಶ್ ದೇವಾ, ಸುರೇಶ್ ಅತ್ರಿಮಜಲು, ಮೋಹನ್ ಜಿ, ಗೌರಿ ಬನ್ನೂರು, ಶ್ರೀಧರ್ ಕನ್ನಯ, ಶಿವರಾಮ ಬೊಳ್ಳಾಡಿ, ಉಷಾನಾರಾಯಣ, ಗಣೇಶ್ ನೈತಾಡಿ, ಸತೀಶ್ ಪಾಂಬಾರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.























