ಇತ್ತೀಚೆಗೆ ಕೆಲವರು “ಅದ್ಧೂರಿ ಲಾಭ… ಶರ್ಟ್ ಟೈಮ್‌ನಲ್ಲಿ ಡಬಲ್ ಹಣ… ಯಾವುದೇ ರಿಸ್ಕ್ ಇಲ್ಲ” ಎಂದು ಹೇಳಿ, ಜನರ ನಂಬಿಕೆಗೆ ದಕ್ಕೆ ಮಾಡುತ್ತಿರುವ ಕೆಲವು ನೆಟ್‌ವರ್ಕ್–ಯೋಜನೆಗಳು ಕಾಣಿಸುತ್ತಿವೆ.
ಈಗಿನ ದಿನಗಳಲ್ಲಿ ಕೆಲವು ನೆಟ್‌ವರ್ಕ್–ಯೋಜನೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು “ಹಣ ಡಬಲ್ ಆಗುತ್ತದೆ”, “ಮುಂಬೈಲಿರೋದಲ್ಲೇ ಆದಾಯ ಬರುತ್ತೆ”, “ಗ್ಯಾರಂಟಿ ಪ್ರಾಫಿಟ್” ಎಂದು ಹೇಳಿ ಜನರನ್ನು ಸೆಳೆಯುತ್ತಿರುವುದು ಕಂಡು ಬರುತ್ತಿದೆ. ನಿಜವಾದ ಉತ್ಪನ್ನ/ಸೇವೆ ಸರಿಯಾಗಿ ಕೊಡದೇ, ಹೊಸ ಜನರನ್ನು ಸೇರಿಸಿದ್ರೆ ಮಾತ್ರ ಆದಾಯ ಬರುತ್ತಿದೆ ಎಂಬ ಮಾದರಿ ಕಂಡುಬರುತ್ತಿದೆ — ಇದು ಜನರಲ್ಲಿ ದೊಡ್ಡ ಅನುಮಾನ, ಆತಂಕ, ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ.
ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ. ಯಾವುದೇ ಕಂಪನಿ “ರಿಸ್ಕ್ ಇಲ್ಲ” ಎಂದು ಹೇಳಿದ್ರೆ… ಅದು Warning Signal. “ಸೇರಿ–ಸೇರಿ” ಎಂದು ಒತ್ತಡ ಹಣ ತಗೊಳ್ಳೋಕ್ಕೆ ಕಷ್ಟ.
ಯಾವುದೇ ಯೋಜನೆಗೆ ಹಣ ಹಾಕೋದಕ್ಕೂ ಮೊದಲು ಕಂಪನಿ ದಾಖಲೆ ಪರಿಶೀಲಿಸಿ ಜನ ಜಾಗೃತಿ ಇರಲಿ – ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಸುರಕ್ಷಿತ ಇರಲಿ. ಸುಲಭವಾಗಿ, ಬೇಗನೆ, ಗ್ಯಾರಂಟಿ ಲಾಭ ಕೊಡುವ ವ್ಯವಹಾರಕ್ಕೆ ಎಂದಿಗೂ ಕೈ ಹಾಕಬೇಡಿ.
ಇತ್ತೀಚೆಗೆ ನಮ್ಮ ಪ್ರದೇಶದಲ್ಲಿ ವಿವಿಧ ಹೆಸರಿನಲ್ಲಿ “Leadership Training”, “Tasks”, “Prizes”, “Teams”, “Groups” ಅನ್ನುವ ಹೆಸರಿನಲ್ಲಿ ಸಭೆಗಳು ಆಯೋಜನೆ ಆಗುತ್ತಿರುವುದು ಕಾಣುತ್ತಿದೆ.ಅಂತ ಜನರನ್ನು ಸೆಳೆಯುವ ರೀತಿಯ ಚಟುವಟಿಕೆಗಳು ಹೆಚ್ಚಾಗಿವೆ.ಇವು ಕಂಡಾಕ್ಷಣ ಜನರಲ್ಲಿ ಗೊಂದಲ ಮತ್ತು ಶಂಕೆ ಹುಟ್ಟಲಿ – ಏಕೆಂದರೆ ನಿಜವಾದ ಕಂಪನಿ ಅಥವಾ ಉದ್ಯೋಗಕ್ಕೆ ಇಷ್ಟು drama ಮತ್ತು mystery ಇರಲ್ಲ.Meetingಗೆ Entry Fee ₹200 — training ಕೊಡೋದು ಯಾರಿಗಾಗಿ? ಯಾಕೆ?
ನಾವೆಲ್ಲರೂ ಜಾಗೃತರಾಗೋಣ.ನಮ್ಮ ಕುಟುಂಬ–ಸ್ನೇಹಿತರಿಗೆ ತಿಳಿಸೋಣ. ಮೋಸಕ್ಕೆ ಅವಕಾಶ ಕೊಡಬೇಡಿ. ಸುಲಭ ದಾರಿಯಲ್ಲಿ ಹಣ ಕೊಡೋ ಜಗತ್ತೇ ಇಲ್ಲ.
ನೀವು ಕೇಳ್ಬೇಕು, ಪರಿಶೀಲಿಸ್ಬೇಕು, ನಂಬ್ಬೇಕು.
“ಚೈನ್–ಲಿಂಕ್”, “ರೆಫರಲ್–ಇನ್ಕಮ್”, “ಟಾಸ್ಕ್–ಬೇಸ್ ಪ್ರೋಗ್ರಾಂ” ಎಂಬ ರೀತಿಯ ವ್ಯವಹಾರಗಳು ಸಾಮಾನ್ಯ ಜನರಲ್ಲಿ ಗೊಂದಲ ಹಾಗೂ ಅನುಮಾನ ಮೂಡಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ team-ಮಾದರಿಯ ಚಟುವಟಿಕೆಗಳು, ವಿದೇಶಿ ನಂಬರುಗಳಿಂದ ನಿಯಂತ್ರಿಸಲ್ಪಡುವ ಗ್ರೂಪ್‌ಗಳು, ಟಾಸ್ಕ್–ಪ್ರೈಸ್ ವಿಧಾನ ಮತ್ತು meeting/entry fee ಗಳ ಮೂಲಕ ಜನರನ್ನು ಸೆಳೆಯುತ್ತಿರುವುದು ಜನರ ಚಿಂತೆಯ ವಿಷಯವಾಗಿದೆ.
ಚೈನ್-ಲಿಂಕ್ ಮಾದರಿಯ ವ್ಯವಹಾರಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ
ಇಂದಿನ ಸಮಾಜದಲ್ಲಿ ವಿವಿಧ ಹೆಸರಿನಲ್ಲಿ, ವೈವಿಧ್ಯಮಯ ಆಕರ್ಷಕ ಶೀರ್ಷಿಕೆಗಳೊಂದಿಗೆ ಜನರನ್ನು ಸೆಳೆಯುವ ಅನೇಕ ವ್ಯವಹಾರ ಮಾದರಿಗಳು ಬೆಳೆಯುತ್ತಿವೆ. ವಿಶೇಷವಾಗಿ ಚೈನ್-ಲಿಂಕ್, ರೆಫರಲ್-ಬೇಸ್, ಟಾಸ್ಕ್–ಇನ್ಕಮ್, ಪ್ರೈಸ್–ರಿವಾರ್ಡ್ ಮುಂತಾದ ರೀತಿಯ ಯೋಜನೆಗಳು ಜನಸಾಮಾನ್ಯರ ಗಮನ ಸೆಳೆಯುತ್ತಿವೆ. ಇವುಗಳಲ್ಲಿ ಕೆಲವು ನೈಜವಾಗಿದ್ದು ಬೇರೆ ಕೆಲವು ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಶಂಕೆಯನ್ನು ಮೂಡಿಸುತ್ತವೆ.
ಎಲ್ಲಾ ಕಂಪನಿಗಳು ತಪ್ಪೆಂದು ಹೇಳಲು ಸಾಧ್ಯವಿಲ್ಲ; ಆದರೆ ಸರಿಯಾದ ವ್ಯವಹಾರ ಮಾದರಿ, ಕಾನೂನು ದಾಖಲೆ, ಸಂಸ್ಥೆಯ ಚಟುವಟಿಕೆಗಳ ಪಾರದರ್ಶಕತೆ ಇಲ್ಲದಿದ್ದರೆ ಜನರು ಮೋಸಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಇದರಿಂದ ಸಾಮಾನ್ಯ ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸಬಹುದು. ಇಂತಹ ಸಂದರ್ಭಗಳಲ್ಲಿ, ಪೊಲೀಸ್ ಇಲಾಖೆ ಮತ್ತು ಸಂಬಂಧಿತ ತನಿಖಾ ವಿಭಾಗಗಳು “ಹದ್ದಿನ ಕಣ್ಣು” ಇಡುವುದು ಅತ್ಯಂತ ಅಗತ್ಯ.
ಚೈನ್-ಲಿಂಕ್ ಮಾದರಿಗಳಲ್ಲಿ ಕಾಣಿಸುವ ಅಪಾಯ ಲಕ್ಷಣಗಳು
-
ಹೊಸ ಸದಸ್ಯರನ್ನು ಸೇರಿಸಿದರೆ ಮಾತ್ರ ಆದಾಯ
ನೈಜ ಉದ್ಯೋಗದಲ್ಲಿ ಉತ್ಪನ್ನ/ಸೇವೆ ಮುಖ್ಯ; ಆದರೆ ಸದಸ್ಯರ ಸಂಖ್ಯೆ ಮುಖ್ಯವಾದಾಗ ಜನರಲ್ಲಿ ಶಂಕೆ ಮೂಡುತ್ತದೆ. -
ಪ್ರಮಾಣಕ್ಕೆ ಮೀರಿದ ಲಾಭದ ಭರವಸೆ
“ತಿಂಗಳಿಗೆ ಫಿಕ್ಸ್ ಇನ್ಕಮ್”, “ರಿಸ್ಕ್ ಇಲ್ಲ”, “ಡಬಲ್ ಹಣ” ಮುಂತಾದ ಗಾಳಿಮಾತುಗಳು ಸಾಮಾನ್ಯವಾಗಿ ಮೋಸದ ಆರಂಭಿಕ ಲಕ್ಷಣ. -
ದಾಖಲೆ ಹಾಗೂ ಲೈಸೆನ್ಸ್ ಸ್ಪಷ್ಟತೆಯ ಕೊರತೆ
ಕಂಪನಿ ನೋಂದಣಿ, GST, ROC, ಕಚೇರಿ ವಿಳಾಸ—ಇವುಗಳ ಮಾಹಿತಿ ನಿಖರವಾಗಿರದೆ ಇದ್ದರೆ ಜನರಿಗೆ ನಂಬಿಕೆ ಮೂಡುವುದು ಕಷ್ಟ. -
WhatsApp/Telegram ಗ್ರೂಪ್‌ಗಳ ಮೂಲಕ ತಂಡದ ನಿಯಂತ್ರಣ
ಹೊರ ರಾಜ್ಯ ಅಥವಾ ಹೊರ ದೇಶಗಳ ನಂಬರಿನಿಂದ ಆಡಳಿತ, “ಟಾಸ್ಕ್–ಪ್ರೈಸ್” ರೀತಿಯ ಒತ್ತಡ — ಇವುಗಳಲ್ಲೂ ಶಂಕೆಗೆ ಕಾರಣವಿದೆ.ಪೊಲೀಸ್ ಇಲಾಖೆಯ ಪಾತ್ರ
ಪೊಲೀಸ್ ಇಲಾಖೆ ಜನರ ಸುರಕ್ಷತೆಯ ಅಭಿವೃದ್ದಿಗೂ, ಆರ್ಥಿಕ ರಕ್ಷಣೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ.
ಚೈನ್-ಲಿಂಕ್ ಮಾದರಿಯ ಯಾವುದೇ ಸಂಸ್ಥೆಯ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳದೆ ಇರಬಹುದು; ಆದರೆ ಈ ರೀತಿಯ ಯೋಜನೆಗಳನ್ನು ನಿಗಾ ವಹಿಸುವುದು, ಜನರಿಗೆ ಜಾಗೃತಿ ಮೂಡಿಸುವುದು, ಸಂಶಯಾಸ್ಪದ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದು—ಇವು policing frameworkನ ಭಾಗವಾಗಬೇಕು.ಪೊಲೀಸ್ ಇಲಾಖೆಯ ಜವಾಬ್ದಾರಿಗಳು:
-
ಅನುಮಾನಾಸ್ಪದ ಸಭೆಗಳು, ದೊಡ್ಡ ಪ್ರಮಾಣದ ಜನಸಂಗಮ ಕಾರ್ಯಕ್ರಮಗಳನ್ನು ಪರಿಶೀಲಿಸುವುದು
-
ಜನರಿಂದ ಬಂದ ದೂರುಗಳನ್ನು ತ್ವರಿತವಾಗಿ ದಾಖಲಿಸಿ ತನಿಖೆ ಆರಂಭಿಸುವುದು
-
ಸೈಬರ್ ಕ್ರೈಮ್ ಸೆಲ್ ಮೂಲಕ ಡಿಜಿಟಲ್ ಚಟುವಟಿಕೆಯನ್ನು ಗಮನಿಸುವುದು
-
ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಿಗೆ ಮಾಹಿತಿ ನೀಡುವುದು
-
ಮೋಸಕ್ಕೆ ಸಿಲುಕುವ ಸಂಭವ ಇರುವ ಸಮಾಜದ ದುರ್ಬಲ ವರ್ಗಗಳಿಗೆ ವಿಶೇಷ ಮಾರ್ಗದರ್ಶನ
-
ಜನರ ಜವಾಬ್ದಾರಿಯೂ ಮುಖ್ಯ
ಪೊಲೀಸರು ಮಾತ್ರವಲ್ಲ, ನಾಗರಿಕರೂ ಜಾಗೃತರಾಗಿರಬೇಕು.
ಅನುಮಾನಾಸ್ಪದ ವ್ಯವಹಾರಗಳು ಕಂಡುಬಂದರೆ
ಸೈಬರ್ ಕ್ರೈಮ್ ಪೋರ್ಟಲ್,
ಕನ್ಸ್ಯೂಮರ್ ಹೆಲ್ಪ್‌ಲೈನ್,
ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಸಮಾಜದ ಹಿತಕ್ಕಾಗಿ ಅಗತ್ಯ.
-
ಚೈನ್-ಲಿಂಕ್ ಮಾದರಿಯ ಅನೇಕ ವ್ಯವಹಾರಗಳು ಜನರಲ್ಲಿ ಗೊಂದಲ, ಕುತೂಹಲ ಹಾಗೂ ಕೆಲವೊಮ್ಮೆ ಭ್ರಮೆಯನ್ನು ಉಂಟುಮಾಡಬಹುದು.
ಅವು ನೈಜವೋ ಅಥವಾ ಅಪಾಯಕಾರಿ ಮಾದರಿಯೋ ಎಂಬುದನ್ನು ನಿರ್ಧರಿಸುವುದು ಕಷ್ಟವಾದ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಸಕ್ರಿಯ ಮೇಲ್ವಿಚಾರಣೆ ಜನರನ್ನು ಮೋಸದಿಂದ ರಕ್ಷಿಸಲು ಅತ್ಯಂತ ಅವಶ್ಯ.
“ಜನರ ಸುರಕ್ಷತೆ – ಸಮುದಾಯದ ಜವಾಬ್ದಾರಿ.”
ಅದರಲ್ಲಿ ಪೊಲೀಸ್ ಇಲಾಖೆ ಮತ್ತು ನಾಗರಿಕರು ಸೇರಿ ಕೆಲಸ ಮಾಡಿದರೆ ಆರ್ಥಿಕ ಮೋಸಗಳನ್ನು ದೊಡ್ಡ ಮಟ್ಟದಲ್ಲಿ ತಡೆಯಬಹುದು.
ಅನುಮಾನಾಸ್ಪದವಾಗಿ ಕಂಡರೆ ಮಾಡಬೇಕಾದದ್ದು
-
Screenshots, posters, chats save ಮಾಡಿ
-
Cyber Crime: cybercrime.gov.in
-
Consumer Helpline: 1800-11-4000
-
ಸ್ಥಳೀಯ CEN Police Station ನಲ್ಲಿ ಮಾಹಿತಿ
ಈ ಕುರಿತು ಸ್ಥಳೀಯ ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಜನರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಇಂತಹ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡಬೇಕು” ಎಂದು ಆಗ್ರಹ ವ್ಯಕ್ತಪಡಿಸಿದರು.
ನಾಗರಿಕರ ಅಭಿಮತ ಪ್ರಕಾರ, ವೈವಿಧ್ಯಮಯ ಹೆಸರಿನಲ್ಲಿ ನಡೆಯುತ್ತಿರುವ ಕೆಲವು ಕಾರ್ಯಕ್ರಮಗಳಲ್ಲಿ ವ್ಯವಹಾರ ಮಾದರಿ ಸ್ಪಷ್ಟವಾಗಿಲ್ಲ. ಲಾಭದ ಭರವಸೆ, ಉತ್ಪನ್ನ ಅಥವಾ ಸೇವೆಯ ಸ್ಪಷ್ಟತೆ ಇಲ್ಲದಿರುವುದು, ಪ್ರವೇಶ ಶುಲ್ಕದ ಆಮಿಷ, WhatsApp ಗ್ರೂಪ್‌ಗಳಲ್ಲಿ ಒತ್ತಡ, ಇತ್ಯಾದಿ ಕಾರಣಗಳಿಂದ ಸಾಮಾನ್ಯ ಕುಟುಂಬಗಳು ತಪ್ಪು ನಿರ್ಧಾರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ





















