ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ನ.29 ಮತ್ತು 30ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ,ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ ನ.14ರಂದು ಬೆಳಗ್ಗೆ ನಡೆಯಿತು.ಸಾಮೂಹಿಕ ವಿವಾಹ ನಡೆಯುವ ಹಿನ್ನೆಲೆಯಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ಸಿದ್ಧತೆಯನ್ನೂ ನಡೆಸಲಾಯಿತು.
ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ಅವರು ಚಪ್ಪರ ಮುಹೂರ್ತ ನೆರವೇರಿಸಿದರು.ಈ ಸಂದರ್ಭ ಕುಂಟಾರು ತಂತ್ರಿ ಗುರು ತಂತ್ರಿ ಹಾಗೂ ಸಮಿತಿ ಪದಾಽಕಾರಿಗಳು ತೆಂಗಿನ ಕಾಯಿ ಒಡೆದು ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಮೂಡಬಿದ್ರೆಯ ಆರ್.ಕೆ.ಭಟ್ ಅವರ ನೇತೃತ್ವದಲ್ಲಿ ಈ ಹಿಂದಿನ ಎರಡು ಬಾರಿ ವೇದಿಕೆ ಮತ್ತು ಸಭಾಂಗಣದ ವ್ಯವಸ್ಥೆ ಮಾಡಲಾಗಿತ್ತು.ಸುಮಾರು 400 ಚದರ ಅಡಿ ಮತ್ತು 140 ಚದರ ಅಡಿ ಅಗಲಕ್ಕೆ ಕಾರ್ಯಕ್ರಮದ ಮುಖ್ಯ ಚಪ್ಪರ ವೇದಿಕೆ ಇರುತ್ತದೆ.140 ಚದರ ಅಡಿ ಅಗಲದಲ್ಲಿ ಕಾರ್ಯಕ್ರಮದ ವೇದಿಕೆ ಇರಲಿದೆ.100 ಮತ್ತು 200 ಚದರ ಅಡಿ ಉದ್ದಕ್ಕೆ ಅನ್ನಸಂತರ್ಪಣೆಯ ಪೆಂಡಾಲ್ ಇರಲಿದೆ.ಎರಡು ದಿವಸದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ಪೂರಕವಾಗಿ ವಿವಿಧ ಕಡೆ ಪೂರ್ವ ಸಿದ್ಧತೆ ನಡೆಯುತ್ತಿದೆ.ಕಾರ್ಯಕ್ರಮದ ಯಶಸ್ಸಿಗೆ ಭಗವಂತ ಎಲ್ಲರಿಗೂ ಶಕ್ತಿಯನ್ನು ನೀಡಲಿ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ವಕೀಲ ಬಿ.ನರಸಿಂಹಪ್ರಸಾದ್ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುವ ನಿರೀಕ್ಷೆಯಿದೆ,ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಂಪೂರ್ಣ ಸಹಕಾರದ ಅಗತ್ಯವಿದೆ ಎಂದು ಹೇಳಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ ಅವರು ಮಾತನಾಡಿ ಕೋಟಿಗಟ್ಟಲೆ ಹಣವಿದ್ದರೂ ತಿರುಪತಿಯಲ್ಲಿ ಶ್ರೀ ದೇವರ ದರ್ಶನ ಪಡೆಯುವುದು ಅಷ್ಟು ಸುಲಭವಲ್ಲ.ಈ ನಿಟ್ಟಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಎಲ್ಲರಿಗೂ ಹತ್ತಿರದಲ್ಲಿ ಶ್ರೀನಿವಾಸನ ದರ್ಶನ ಭಾಗ್ಯ ಸಿಗಲಿದೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಆಗುವ ಸಂದರ್ಭ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಇನ್ನೋರ್ವ ಗೌರವಾಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ಮಾತನಾಡಿ ನಾವೆಲ್ಲ ಅಚಲವಾದ ನಂಬಿಕೆ,ವಿಶ್ವಾಸವಿಟ್ಟ ದೇವರು ತಿರುಪತಿ ತಿಮ್ಮಪ್ಪ. ಶ್ರೀನಿವಾಸ ದೇವರನ್ನು ನೋಡಲು ತುಂಬಾ ರಶ್‌ನಲ್ಲಿ ಹೋಗುವುದು ಕಷ್ಟ ಸಾಧ್ಯ.ಇಂತಹ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಶ್ರೀನಿವಾಸನ ಪ್ರತಿರೂಪದಲ್ಲೇ ಇಲ್ಲಿ ವಿಶೇಷ ಪೂಜೆ, ತಿರುಪತಿಯಲ್ಲಿ ನಡೆದಂತೆ ಎಲ್ಲಾ ಪೂಜೆಗಳು ನಡೆಯುತ್ತವೆ.ಇದೆನ್ನೆಲ್ಲ ನೋಡುವ ಭಾಗ್ಯ ನಮಗೆ ಸಿಕ್ಕಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಮತ್ತೋರ್ವ ಗೌರವಾಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬಹಳ ಭಕ್ತಿ ಪೂರ್ವಕವಾಗಿ ನಡೆಯಲಿದೆ.ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ೭ ಜೋಡಿಯ ಸಾಮೂಹಿಕ ವಿವಾಹ ನಡೆದಿತ್ತು.ಇದೀಗ 17 ಜೋಡಿಗೆ ಸಾಮೂಹಿಕ ವಿವಾಹ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ನಡೆಯಲಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಸಹ ಸಂಚಾಲಕರಾದ ಉಮೇಶ್ ಕೋಡಿಬೈಲ್, ರವಿಕುಮಾರ್ ರೈ ಕೆದಂಬಾಡಿ ಮಠ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ಅನಿಲ್ ತೆಂಕಿಲ, ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೇಮ್‌ರಾಜ್, ಮಹಿಳಾ ಸಂಚಾಲಕಿ ಪ್ರೇಮಾ, ಪುಷ್ಪರಾಜೇಶ್, ವೀಣಾ ಬಳ್ಳಾಲ್, ಅಣ್ಣಪೂರ್ಣ ಕೆ.ರಾವ್, ಚಿನ್ಮಯ್ ರೈ ಈಶ್ವರಮಂಗಲ, ಕೃಷ್ಣಪ್ರಸಾದ್, ಆರ್.ಕೆ.ಎಂಟರ್‌ಪ್ರೈಸಸ್‌ನ ಆರ್.ಕೆ ಭಟ್, ಪ್ರಶಾಂತ್ ನೆಕ್ಕಿಲಾಡಿ, ಬೆಳ್ಳಾರೆ ಮನೋಜ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.




















