ಮುಂಡೂರು ಗ್ರಾಮದ ಕೊಂಬಳಿ ನಿವಾಸಿ ವಸಂತ ಗೌಡ ಮತ್ತು ನೆಲ್ಲಿಕಟ್ಟೆಯ ರಾಜೇಶ್ ಅವರಿಗೆ ವೈದ್ಯಕಿಯ ಚಿಕಿತ್ಸೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಆರ್ಥಿಕ ಸಹಕಾರವನ್ನು ಹಿಂದವಿ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾದ ಶ್ರೀರಾಮ ಭಟ್ ಪಾತಾಲ, ಪ್ರಧಾನ ಕಾರ್ಯದರ್ಶಿ ಪ್ರೇಮರಾಜ್ ಅರ್ಲಪದವು, ಕೋಶಾಧಿಕಾರಿ ರೂಪೇಶ್ ನಾಯ್ಕ್, ಬಿಜೆಪಿ ಮಂಡಲ ನಗರ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಟೌನ್ ಬ್ಯಾಂಕ್ ನಿರ್ದೇಶಕ ರಾಜು ಶೆಟ್ಟಿ ಪ್ರಮುಖರಾದ ಮಹೇಂದ್ರ ವರ್ಮ,ರವಿಕುಮಾರ್ ರೈ, ವೆಂಕಟರಮಣ ಕಡಬ,ಸುಜಿತ್ ಕಜೆ ಮತ್ತು ಉಮೇಶ್ ಗೌಡ ಉಪಸ್ಥಿತರಿದ್ದರು.






















